ಅತ್ತ ಬಸ್ ಹತ್ತಿದರೆ ಪಂಕ್ಚರ್, ಇತ್ತ ಸ್ವಿಚ್ ಹಾಕಿದರೆ ಕರೆಂಟ್ ಶಾಕ್!
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ದ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ. ಹಾಗೇ ಅಕ್ಕಿ ವಿಚಾರದಲ್ಲೂ ಗುದ್ದಾಟ ಶುರುವಾಗಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ಬಗ್ಗೆ ವ್ಯಂಗ್ಯ ಮಾಡಿರುವ ಬಿಜೆಪಿ, ಅತ್ತ ಬಸ್ ಹತ್ತಿದರೆ ಪಂಕ್ಚರ್ & ಇತ್ತ ಸ್ವಿಚ್ ಹಾಕಿದರೆ ಕರೆಂಟ್ ಶಾಕ್ ಅಂತಾ ಕಾಲೆಳೆದಿದೆ. ಹಾಗಾದ್ರೆ ಬಿಜೆಪಿ ಆರೋಪ ಏನು? ಮುಂದೆ ಓದಿ.
ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ನಾನಾ ಸಮಸ್ಯೆ ಎದುರಿಸ್ತಿದೆ. ಇದೇ ವಿಚಾರವನ್ನ ಬಿಜೆಪಿ ಅಸ್ತ್ರ ಮಾಡಿಕೊಂಡಿದೆ. ಅದರಲ್ಲೂ ಫ್ರೀ ಬಸ್ ಮತ್ತು ಉಚಿತ ವಿದ್ಯುತ್ ವಿಚಾರ ಎರಡೂ ಪಕ್ಷಗಳ ನಡುವೆ ದೊಡ್ಡ ಬೆಂಕಿ ಹಚ್ಚಿದೆ. ಈ ಸಂದರ್ಭದಲ್ಲೇ ಟ್ವೀಟ್ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ತಿರುಗೇಟು ನೀಡಿದೆ ಬಿಜೆಪಿ. ಸರ್ಕಾರ ರಚನೆ ಆಗಿ ಒಂದು ತಿಂಗಳು ಕಳೆಯುವ ಮೊದಲೇ ಅಲರ್ಟ್ ಆಗಿದೆ ವಿರೋಧ ಪಕ್ಷ. ಹಾಗಾದ್ರೆ ಕೈ ಪಡೆಗೆ ಕೇಸರಿ ಪಡೆ ಹಾಕಿರುವ ಸವಾಲು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಬಿಜೆಪಿ & ಕಾಂಗ್ರೆಸ್ ನಡುವೆ ರಣಯುದ್ಧ!
ಹೌದು, ಅತ್ತ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ ಹಾಗೇ ಇನ್ನೊಂದು ಕಡೆ ಬಿಜೆಪಿ ಕೂಡ ರಣತಂತ್ರ ರೂಪಿಸುತ್ತಿದೆ. ಆದರೆ ಇವರಿಬ್ಬರ ನಡುವೆ ಜನರು ಮಾತ್ರ ಪರದಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ್ದು, 'ವೋಟಿಗಾಗಿ ಮಾಡಿದ ಗಿಮಿಕ್ ತನ್ನ ಕೊರಳನ್ನೇ ಸುತ್ತಿಕೊಳ್ಳುವ ಆತಂಕದಿಂದ #ATMSarkara ಈಗ ಹತ್ತು ಕೊಟ್ಟು ಇಪ್ಪತ್ತು ಕೀಳಲು ಜನರ ಜೇಬಿಗೆ ಕೈ ಹಾಕಿದೆ. ಅತ್ತ ಬಸ್ ಹತ್ತಿದರೆ ಪಂಕ್ಚರ್, ಇತ್ತ ಸ್ವಿಚ್ ಹಾಕಿದರೆ ಕರೆಂಟ್ ಶಾಕ್. ಒಟ್ಟಾರೆ ಕಾಂಗ್ರೆಸ್ಸಿನ ಕುತಂತ್ರ ರಾಜಕಾರಣದಿಂದ ರಾಜ್ಯದ ಜನತೆಯ ಬದುಕು ಮಾತ್ರ ದುರ್ಭರ.' ಎಂದಿದೆ.
ವೋಟಿಗಾಗಿ ಮಾಡಿದ ಗಿಮಿಕ್ ತನ್ನ ಕೊರಳನ್ನೇ ಸುತ್ತಿಕೊಳ್ಳುವ ಆತಂಕದಿಂದ #ATMSarkara ಈಗ ಹತ್ತು ಕೊಟ್ಟು ಇಪ್ಪತ್ತು ಕೀಳಲು ಜನರ ಜೇಬಿಗೆ ಕೈ ಹಾಕಿದೆ.
— BJP Karnataka (@BJP4Karnataka) June 17, 2023
ಅತ್ತ ಬಸ್ ಹತ್ತಿದರೆ ಪಂಕ್ಚರ್, ಇತ್ತ ಸ್ವಿಚ್ ಹಾಕಿದರೆ ಕರೆಂಟ್ ಶಾಕ್.
ಒಟ್ಟಾರೆ ಕಾಂಗ್ರೆಸ್ಸಿನ ಕುತಂತ್ರ ರಾಜಕಾರಣದಿಂದ ರಾಜ್ಯದ ಜನತೆಯ ಬದುಕು ಮಾತ್ರ ದುರ್ಭರ. pic.twitter.com/IX9DytxYQF
ಸರ್ಕಾರಕ್ಕೆ ಬಿಜೆಪಿ ವಾರ್ನಿಂಗ್!
ಹಾಗೇ ಇನ್ನೊಂದು ಟ್ವೀಟ್ ಮೂಲಕ, 'ರಾಜ್ಯದ ಮಹಿಳೆಯರು ತಿರುಗಿಬಿದ್ದಿದ್ದಾರೆ, ಸಿಟ್ಟಿಗೆದ್ದಿದ್ದಾರೆ, ಸವಾಲು ಹಾಕಿದ್ದಾರೆ! ಹಲೋ... @dineshgrao ಅವರೇ, ಜನರ ತಲೆ ಮೇಲೆ ಗೂಬೆ ಕೂರಿಸುವುದು ಬಿಟ್ಟು ಕೆಲಸ ಮಾಡಿ ಸ್ವಾಮಿ. ರಾಜ್ಯದಲ್ಲಿ ಎಲ್ಲಾ ಬಗೆಯ ಬೆಲೆ ಏರಿಕೆಗೆ ಏಕೈಕ ಕಾರಣ #ATMsarkara ದ ಯೋಚನಾರಹಿತ ಆಡಳಿತ! ಎಚ್ಚೆತ್ತುಕೊಳ್ಳಿ!' ಎನ್ನುವ ಮೂಲಕ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದೆ ರಾಜ್ಯ ಬಿಜೆಪಿ. ಹೀಗೆ ರಾಜ್ಯ ರಾಜಕಾರಣದಲ್ಲಿ ಎರಡೂ ಪಕ್ಷಗಳ ನಡುವೆ ಭೀಕರ ಯುದ್ಧ ನಡೆಯುತ್ತಿದೆ.
ರಾಜ್ಯದ ಮಹಿಳೆಯರು ತಿರುಗಿಬಿದ್ದಿದ್ದಾರೆ, ಸಿಟ್ಟಿಗೆದ್ದಿದ್ದಾರೆ, ಸವಾಲು ಹಾಕಿದ್ದಾರೆ!
— BJP Karnataka (@BJP4Karnataka) June 17, 2023
ಹಲೋ... @dineshgrao ಅವರೇ, ಜನರ ತಲೆ ಮೇಲೆ ಗೂಬೆ ಕೂರಿಸುವುದು ಬಿಟ್ಟು ಕೆಲಸ ಮಾಡಿ ಸ್ವಾಮಿ.
ರಾಜ್ಯದಲ್ಲಿ ಎಲ್ಲಾ ಬಗೆಯ ಬೆಲೆ ಏರಿಕೆಗೆ ಏಕೈಕ ಕಾರಣ #ATMsarkara ದ ಯೋಚನಾರಹಿತ ಆಡಳಿತ!
ಎಚ್ಚೆತ್ತುಕೊಳ್ಳಿ! pic.twitter.com/Kj3KlKNc8r
ಒಟ್ನಲ್ಲಿ ರಾಜ್ಯದಲ್ಲಿ ಬಿಜೆಪಿ & ಕಾಂಗ್ರೆಸ್ ನಡುವೆ ಗ್ಯಾರಂಟಿ ವಾರ್ ಬಲು ಜೋರಾಗಿದೆ. ಈ ನಡುವೆ ಹಲವು ಗೊಂದಲಗಳು ಕೂಡ ಕಾಂಗ್ರೆಸ್ ಸರ್ಕಾರವನ್ನು ಕಾಡುತ್ತಿದೆ. ಹಾಗೇ ರಾಜ್ಯದಲ್ಲಿ ವಿದ್ಯುತ್ ಬೆಲೆ ದಿಢೀರ್ ಏರಿಕೆ ಕೂಡ ಜನರಿಗೆ ಶಾಕ್ ನೀಡಿದೆ. ಆದರೆ ಇದು ಎಲ್ಲಿಗೆ ಬಂದು ನಿಲ್ಲುತ್ತೋ ಗೊತ್ತಿಲ್ಲ, ಜನ ಮಾತ್ರ ಸಮಸ್ಯೆ ಸಾಗರದಲ್ಲಿ ಪರದಾಡ್ತಾ ಇರೋದು ಪಕ್ಕಾ. ಹೀಗಾಗಿ ಎರಡೂ ಪಕ್ಷಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಜನರು ಗರಂ ಆಗಿದ್ದಾರೆ.












Click it and Unblock the Notifications