ಕಬ್ಬು ಬೆಳೆಗಾರರಿಗೆ ಬೆಂಬಲ: ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ
Recommended Video

ಬೆಂಗಳೂರು, ನವೆಂಬರ್ 21: ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಬಿಜೆಪಿ ಬೆಂಬಲ ಸೂಚಿಸಿದ್ದು ಬುಧವಾರ(ನವೆಂಬರ್ 21)ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಸಿಎಂ ಕುಮಾರಸ್ವಾಮಿಯನ್ನು ಮತ್ತೊಮ್ಮೆ ವಿಶ್ವಾಸದ್ರೋಹಿ ಎಂದು ನಿಂದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇಷ್ಟು ವರ್ಷ ಎಲ್ಲಿ ಮಲಗಿದ್ದೀಯ ಎಂದು ಪ್ರಶ್ನಿಸಿರುವುದು ಇಡೀ ರೈತ ಕುಟುಂಬಕ್ಕೆ ಮಾಡಿದ ಅವಮಾನವಾಗಿದೆ, ರಾಜ್ಯದ ಸಾಮಾನ್ಯ ಪ್ರಜೆಯೂ ಈ ಮಾತಿನ ಅರ್ಥ ಹೇಳುತ್ತಾರೆ. ಆದರೆ ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ರೈತರಲ್ಲಿ ಕ್ಷಮೆ ಯಾಚಿಸಬೇಕು
ರಾಜ್ಯದ ರೈತರ ಬಳಿ ಈ ರೀತಿ ನಡೆದುಕೊಂಡಿರುವುದು ಸಮಂಜಸವಲ್ಲ ಕೂಡಲೇ ಕ್ಷಮೆಯಾಚಿಸಬೇಕು, ರಾಜ್ಯದ ರೈತರ ಸಮಸ್ಯೆಗೆ ನೀವೇ ಸಂಪೂರ್ಣ ಹೊಣೆಗಾರರು ಎಂದರು.

ನಮ್ಮ ಪಕ್ಷದವರಾದರೂ ಕೊಡಬೇಕು
ಕಬ್ಬಿನ ಬಾಕಿ ಹಣ ಉಳಿಸಿಕೊಂಡ ಕಾರ್ಖಾನೆ ಮಾಲೀಕರು ಯಾರೇ ಆದರೂ ರೈತರಿಗೆ ಹಣ ಕೊಡಬೇಕು. ಈ ವಿಚಾರದಲ್ಲಿ ಪಕ್ಷಬೇಧವಿಲ್ಲ, ಮ್ಮ ಪಕ್ಷದವರೇ ಆಗಿದ್ದರೂ ಕೊಡಬೇಕು, ಈ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಸೋಲಿಸಿ ಅವಮಾನ
ವಿಶ್ವಾಸದ್ರೋಹ ಹಾಗೂ ಅವಕಾಶವಾದಿ ರಾಜಕಾರಣಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಇಡೀ ದೇಶಕ್ಕೆ ಮಾದರಿ, ಈ ಹಿಂದೆ ರಾಮಕೃಷ್ಣ ಹೆಗಡೆಯರಿಗೆ ಅವಮಾನ ಮಾಡಿ ಅಧಿಕಾರ ಪಡೆದುಕೊಂಡು 20 ತಿಂಗಳ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಅನುಭವಿಸಿದ್ದಿರಿ, ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಅವಮಾನ ಮಾಡಿದ್ದೀರಿ ಎಂದು ಕಟುವಾಗಿ ಟೀಕಿಸಿದರು.

15 ದಿನದಲ್ಲಿ ರೈತರ ಬಾಕಿ ಹಣ ಪಾವತಿಗೆ ಸೂಚನೆ
ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ನೀಡಿದ ದರದಂತೆ ಬಾಕಿ ಪಾವತಿಸುವಂತೆ ಮಾಲೀಕರಿಗೆ ಸೂಚಿಸಲಾಗಿದ್ದು, ನವೆಂಬರ್ 22 ರಂದು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications