ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆ : ಬಿಜೆಪಿಯಿಂದ ಹೊಸ ಘೋಷವಾಕ್ಯ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 23 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಹೊಸ ಘೋಷವಾಕ್ಯವನ್ನು ಸಿದ್ಧಪಡಿಸಿದೆ. 'ಕರ್ನಾಟಕ ವಿಕಾಸದ ಜೋಡಿ ಯಡ್ಯೂರಪ್ಪ ಮೋದಿ' ಎಂಬ ಘೋಷಣೆಯನ್ನು ಮಂಗಳವಾರ ಪ್ರಕಟಿಸಲಾಗಿದೆ.

ಮಂಗಳವಾರ ಉಡುಪಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಿತು. ಕರ್ನಾಟಕ ಚುನಾವಣೆಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸಭೆಯಲ್ಲಿ ಪಾಲ್ಗೊಂಡಿದ್ದರು. 'ಇದು ಮಹತ್ವದ ಚುನಾವಣೆ 100 ದಿನಗಳ ಬಳಿಕ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ' ಎಂದರು.

ಇನ್ನು 10 ವರ್ಷಕ್ಕೆ ನಾನೇ ಸಿಎಂ : ಜಾರಕಿಹೊಳಿಇನ್ನು 10 ವರ್ಷಕ್ಕೆ ನಾನೇ ಸಿಎಂ : ಜಾರಕಿಹೊಳಿ

'ಈ ಚುನಾವಣೆ ಎರಡು ಸಂಸ್ಕೃತಿಗಳ ಸಂಘರ್ಷ. ಅಹಿಂದ ವರ್ಗಗಳ ಅಭಿವೃದ್ಧಿ ಮಾಡುವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಭ್ರಷ್ಟಾಚಾರ ಬಿಟ್ಟು ಬೇರೆ ಏನೂ ಮಾಡಿಲ್ಲ' ಎಂದು ದೂರಿದರು.

BJP announces new slogan for 2018 assembly elections

'ರಾಜ್ಯದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಕೊಲೆಯಾಗುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಪಿಎಫ್ಐ ಮೇಲಿನ ಪ್ರಕರಣ ವಾಪಸ್ ಪಡೆಯುತ್ತಿದೆ. ರಾಜ್ಯ ಸರ್ಕಾರ ಭಯೋತ್ಪಾದಕರ ಜೊತೆ ಕೈ ಜೋಡಿಸಿದೆ. ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತದೆ. ವಿವೇಕಾನಂದ ಜಯಂತಿ ಮಾಡುವುದಿಲ್ಲ' ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ: ಮೊದಲ ಹಂತದ ರೂಟ್ ಮ್ಯಾಪ್ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ: ಮೊದಲ ಹಂತದ ರೂಟ್ ಮ್ಯಾಪ್

'ಸಿದ್ದರಾಮಯ್ಯ ಕೃಷ್ಣಮಠಕ್ಕೆ ಬರಲ್ಲ. ಈಗ ರಾಹುಲ್ ಗಾಂಧಿ ಮಠಕ್ಕೆ ಬರ್ತಾರಂತೆ. ಜನರಿಗೆ ಭಕ್ತಿಗೂ ರಾಜಕೀಯಕ್ಕೂ ವ್ಯತ್ಯಾಸ ತಿಳಿದಿದೆ. ನಿಜವಾದ ಭಕ್ತರು ಯಾರು?, ಅಂತ ದೇವರಿಗೂ ಚೆನ್ನಾಗಿ ಗೊತ್ತು. ಗುಜರಾತ್‌ ನಲ್ಲೂ ಟೆಂಪಲ್ ರನ್ ಕೈ ಹಿಡಿಯಲಿಲ್ಲ. ಸಿದ್ದರಾಮಯ್ಯ ನಾನೂ ಹಿಂದೂ ಅಂತಾರೆ. ಚುನಾವಣೆ ಬಂದಾಗ ಇವರಿಗೆ ದೇವಾಲಯ ನೆನಪಾಗುತ್ತೆ' ಎಂದು ಟೀಕಿಸಿದರು.

English summary
The Bharatiya Janata Party Karnataka unit on Tuesday announced slogan for the Karnataka assembly elections 2018. BJP's election in-charge for Karnataka Prakash Javadekar announced slogan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X