ವಿಜಯೇಂದ್ರ, ಕುಮಾರಣ್ಣ ಇಬ್ಬರೂ ಡೈನಾಮಿಕ್ ಲೀಡರ್ಸ್: ಪ್ರಜ್ವಲ್ ರೇವಣ್ಣ
ಹಾಸನ, ನವೆಂಬರ್ 22: ವಿಜೇಂದ್ರ ಅವರು ಒಂದ್ಕಡೆ, ಕುಮಾರಣ್ಣ ಒಂದ್ಕಡೆ ಇಬ್ಬರೂ ಕೂಡಾ ಡೈನಾಮಿಕ್ ಲೀಡರ್ಸ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಇನ್ನೂ ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವೆಲ್ಲರೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ದರಾಗಿದ್ದೇವೆ. ಬಿಜೆಪಿ ಕಾರ್ಯಕರ್ತರು ಹಾಗೂ ನಾವು ಒಟ್ಟಾಗಿ ಸೇರಿ ಚುನಾವಣೆಯನ್ನ ಎದುರಿಸುತ್ತೇವೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಸ್ಥಾನಗಳನ್ನು ಗೆಲ್ಲೋದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಸಿದರು.

ಮಾಜಿ ಸಿಎಂ ಹೆಚ್ಡಿಕೆಗೆ ಕರೆಂಟ್ ಕಳ್ಳ ಎಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರವಾಗಿ ಮಾತನಾಡಿ, ಎರಡು ಭಾರಿ ಮುಖ್ಯಮಂತ್ರಿಯಾದಂತವರಿಗೆ, ಯಾವುದೇ ಒಂದು ಮೀಟರ್ ನಲ್ಲಿ ಬರುವ 2000 ರೂಪಾಯಿ ಕಟ್ಟದೋದಕ್ಕೆ ಆಗದೇ ಇರೋವಷ್ಟು ಯೋಗ್ಯತೆ ಇಲ್ಲದೇ ಇರುವವರು ಕುಮಾರಸ್ವಾಮಿಯವರಲ್ಲ.
ನನ್ನದೇ ಎಂಪಿ ಕ್ವಾಟ್ರಸ್ ಗೆ ಸೀರಿಯಲ್ ಸೆಟ್ ಎಳಿಯಪ್ಪಾ ಅಂತಾ ಹೇಳಿರ್ತೇನೆ. ಯಾವನೋ ಒಬ್ಬ ಪ್ರೈವೇಟ್ ಟೆಂಡರ್ ತಗೊಂಡಿರೋನು. ಟಿಸಿಗೋ, ಐಪಿ ಸೆಟ್ ಗೋ, ಡೈರೆಕ್ಟ್ ಲೈನ್ ಗೋ ಎಳೆದುಬಿಟ್ರೆ, ಅದಕ್ಕೆ ಪ್ರಜ್ವಲ್ ರೇವಣ್ಣ ಹೊಣೆಯಾಗಿಬಿಡ್ತಾರಾ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನ ಶಾಸಕರೇ ಈ ಸಿಲ್ಲಿ ವಿಚಾರ, ಸಣ್ಣಪುಟ್ಟ ವಿಚಾರ ಇಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಟೀಕೆ ಮಾಡೋದು ತಪ್ಪು ಅಂತಾ ಹೇಳ್ತಿದ್ದಾರೆ. ಇನ್ನು ಕುಮಾರಸ್ವಾಮಿಯವರ ದೊಡ್ಡವ್ಯಕ್ತಿತ್ವವನ್ನು ನೋಡಬೇಕು, ಅವೆಲ್ಲಾ ಆದ್ಮೇಲೂ ಕೂಡಾ ರಾಜ್ಯದ ಜನತೆಯ ಕ್ಷಮೆ ಕೇಳಿ.
ತಪ್ಪು ಮಾಡದೇ ಇದ್ರೂ ಕೂಡಾ, ಯಾರೋ ತಪ್ಪು ಮಾಡಿದ್ದಕ್ಕೆ ಅವರು ಕ್ಷಮೆ ಕೇಳಿದ್ದಾರೆ. ನಂತರ ಪೆನಾಲ್ಟಿಯನ್ನು ಕಟ್ಟುವ ಕೆಲಸ ಮಾಡಿದ್ದಾರೆ, ಹಾಗಾದ್ರೆ ಇವರು ಹೊಡೆದಿರೋವಷ್ಟು ಲೂಟಿ ಮಾಡಿರುವ ಭೂಮಿಗಳಿಗೆ ಎಲ್ಲಾವನ್ನ ತನಿಖೆ ಮಾಡಿದ್ರೆ ಪೆನಾಲ್ಟಿ ಯಾರು ಕಟ್ಟುತ್ತಾರೆ ಎಂದು ಪ್ರಶ್ನಿಸಿದರು.
ಈ ಎಲ್ಲಾ ಚರ್ಚೆಗಳನ್ನ ಇಲ್ಲಿಗೆ ಬಿಡಬೇಕು. ಎಷ್ಟೋ ಜನ ರೈತರು ಎಳೆದುಕೊಂಡಿರ್ತಾರೆ, ಪೆನಾಲ್ಟಿ ಕಟ್ಟಿಸಿಕೊಂಡು ಸುಮ್ಮನಾಗೋದಿಲ್ವಾ? ಅವರು ಮಾಜಿ ಮುಖ್ಯಮಂತ್ರಿ ಅನ್ನೋ ಕಾರಣಕ್ಕೆ ಅವರನ್ನ ಇಷ್ಟು ಹೈಲೆಟ್ ಮಾಡ್ತಾ ಇದ್ದೀರಾ, ನೀವು ಕರೆಕ್ಟಾಗಿ ರೈತರಿಗೆ ಟಿಸಿ ಕೊಡಬೇಕಾದದ್ದನ್ನ ಕೊಡಿ.
ದುಡ್ಡು ಕಟ್ಟಿರೋ ರೈತರಿಗೆ ಟಿಸಿ ಹಾಕಿಕೊಡ್ತಿಲ್ಲ, ಅವರೇನಾದ್ರೂ ಐಸಿ ಸೆಟ್ ಗೆ ಹಾಕಿಕೊಂಡ್ರೆ ಅವರನ್ನೂ ನೀವು ಕರೆಂಟ್ ಕಳ್ಳ ಅಂತೀರಾ? ಕೊಟ್ಟಿರೋ ದುಡ್ಡಿಗೆ ನೀವು ಐಪಿ ಸೆಟ್ ನ ಹಾಕಿಕೊಡ್ತಿಲ್ಲ ಅಂದ್ರೆ ರೈತರ ದುಡ್ಡು ತಿಂದಿರೋ ನೀವೆಂತಾ ಕಳ್ಳರು ಎಂದು ಕಿಡಿಕಾರಿದ್ದಾರೆ.












Click it and Unblock the Notifications