ಕಾಂಗ್ರೆಸ್ & ಬಿಜೆಪಿ ನಡುವೆ ಗ್ಯಾರಂಟಿ ವಾರ್ ಶುರು!
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಘೋಷಣೆಯ ಮೂಲಕ 135 ಸ್ಥಾನ ಪಡೆದಿದೆ ಎಂದು ಆರೋಪ ಮಾಡುತ್ತಿರುವ ಬಿಜೆಪಿ, ಗ್ಯಾರಂಟಿ ಅಸ್ತ್ರ ಬಳಿಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಹೀಗೆ ಬಿಜೆಪಿ ನಡೆಸುತ್ತಿರುವ ವಾಗ್ದಾಳಿ ಕುರಿತು ಕಾಂಗ್ರೆಸ್ ನಾಯಕರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಯುದ್ಧಕ್ಕೆ ನಿಂತಿದ್ದಾರೆ.
ಇಷ್ಟುದಿನ ಚುನಾವಣೆ ಇತ್ತು, ಆದರೆ 20 ದಿನದ ಹಿಂದೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ರಚಿಸಿದೆ. ಆದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸೋಷಿಯಲ್ ಮೀಡಿಯಾ ವಾರ್ ಮುಂದುವರಿದಿದೆ. ಅತ್ತ ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮಾಡಿದ್ರೆ, ಇತ್ತ ಅದೇ ಟ್ವೀಟ್‌ಗೆ ಕಾಂಗ್ರೆಸ್ ಕೂಡ ಸೂಕ್ತ ಉತ್ತರ ನೀಡುತ್ತಿದೆ. ಹಾಗೇ ಕಾಂಗ್ರೆಸ್ ಗ್ಯಾರಂಟಿ ವಿಚಾರ ಇಟ್ಟುಕೊಂಡು ಕೆಣಕಲು ಬಂದ ಬಿಜೆಪಿ ಟ್ವೀಟ್‌ಗೆ ಕಾಂಗ್ರೆಸ್ ತಿರುಗೇಟು ನೀಡಿಡುತ್ತಿದೆ.

'ಬೀದಿಯಲ್ಲಿ ಗ್ಯಾರಂಟಿ ಕಾರ್ಡ್ ವಿತರಿಸುವಾಗ..'
ಮೊದಲಿಗೆ ಕಾಂಗ್ರೆಸ್ ಗ್ಯಾರಂಟಿ ವಿಚಾರ ಇಟ್ಟುಕೊಂಡು ಬಿಜೆಪಿ ಟ್ವೀಟ್ ಮಾಡಿತ್ತು. ತಮ್ಮ ಪಕ್ಷದ ಗ್ಯಾರಂಟಿ ಯೋಜನೆ ಬಗ್ಗೆ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಬಿಜೆಪಿ ಟ್ವಿಟ್ಟರ್ ಅಕೌಂಟ್ ತಿರುಗೇಟು ನೀಡಿತ್ತು. 'ಗ್ಯಾರಂಟಿಗಳನ್ನು ಘೋಷಿಸುವಾಗ, ಬೀದಿ ಬೀದಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ಕಾಂಗ್ರೆಸಿಗರಿಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ ?' ಎಂದು ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಗ್ಯಾರಂಟಿಗಳನ್ನು ಘೋಷಿಸುವಾಗ, ಬೀದಿ ಬೀದಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ಕಾಂಗ್ರೆಸಿಗರಿಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ ?
— BJP Karnataka (@BJP4Karnataka) May 31, 2023
ಅಧಿಕಾರ ಬಂದ ಬಳಿಕ "*Condition Apply"ನೊಂದಿಗೆ ಯೂ ಟರ್ನ್ ಹೊಡೆಯುತ್ತಿದೆ #ATMSarkara. pic.twitter.com/EaNKKSQrfV
'ಅದಾನಿ ಅಂಬಾನಿಗಳ ಹೊಟ್ಟೆ ತುಂಬಿಸುವವರಲ್ಲ'
ಬಿಜೆಪಿ ಮಾಡಿದ್ದ ಟ್ವೀಟ್‌ಗೆ ಕಾಂಗ್ರೆಸ್ ರೀಪ್ಲೇ ನೀಡಿದ್ದು, ಅದೇ ಟ್ವೀಟ್‌ಗೆ ತಿರುಗೇಟನ್ನೂ ಕೊಟ್ಟಿದೆ. 'ಈ ದೇಶದಲ್ಲಿ ಪ್ರತಿ ಯೋಜನೆಗಳಿಗೂ ನೀತಿ, ನಿಯಮ, ಮಾನದಂಡ ಎಲ್ಲವೂ ಇದೆ. "ದಂಡ" ಹಿಡಿಯುವ ದಂಡದ ಪಕ್ಷದವರಿಗೆ ಮಾನದಂಡಗಳ ಬಗ್ಗೆ ತಿಳಿಯವುದಾದರೂ ಹೇಗೆ! Dear @BJP4Karnataka, ನಾವು ಅದಾನಿ ಅಂಬಾನಿಗಳ ಹೊಟ್ಟೆ ತುಂಬಿಸುವವರಲ್ಲ ನೈಜ ಬಡವರ ಉನ್ನತಿಗಾಗಿ ಕೆಲಸ ಮಾಡುವವರು! ನಾವೂ "ಬಿಟ್ಟಿ ಭಾಗ್ಯ"ದ ಫಲಾನುಭವಿಗಳಾಗುವುದು ತಪ್ಪಲಿದೆ ಎಂಬ ಆತಂಕದಲ್ಲಿ ಈ ರೋಧನೆಯೇ ಬಿಜೆಪಿಗೆ?' ಎಂದು ತಿರುಗೇಟು ನೀಡಲಾಗಿದೆ.
ಅಪ್ರಿಯ ಪ್ರಶ್ನೆಗಳು ಎದುರಾದಾಗಲೆಲ್ಲ ಸಿಟ್ಟು ಮಾಡಿಕೊಂಡು ದುರಹಂಕಾರದಿಂದ ಉತ್ತರ ನೀಡುವುದರಲ್ಲಿ ಮುಖ್ಯಮಂತ್ರಿ @siddaramaiahನವರು ನಿಸ್ಸೀಮರು.
— BJP Karnataka (@BJP4Karnataka) June 1, 2023
ಚುನಾವಣೆಗೆ ಮುನ್ನ ಸುಳ್ಳು ಗ್ಯಾರಂಟಿಗಳನ್ನು ಕೊಡುವ ಮೊದಲು ನಿಮಗೆ ಯೋಜನೆಗಳಿಗೆ ಹಣ ಬೇಕು ಎಂಬ ಪರಿಜ್ಞಾನ ಇರಲಿಲ್ಲವೇ ಮಾನ್ಯ @siddaramaiah ನವರೇ? pic.twitter.com/y5PWn5vngc
ಸಿದ್ದರಾಮಯ್ಯ ವಿಚಾರದಲ್ಲೂ ಬಿಜೆಪಿ ಟ್ವೀಟ್!
ಕಾಂಗ್ರೆಸ್ ಗ್ಯಾರಂಟಿಗಳ ಘೋಷಣೆ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆ ಹಿಡಿದು ಬಿಜೆಪಿ ಟ್ವೀಟ್ ಪೋಸ್ಟ್ ಮಾಡಿತ್ತು. 'ಅಪ್ರಿಯ ಪ್ರಶ್ನೆಗಳು ಎದುರಾದಾಗಲೆಲ್ಲ ಸಿಟ್ಟು ಮಾಡಿಕೊಂಡು ದುರಹಂಕಾರದಿಂದ ಉತ್ತರ ನೀಡುವುದರಲ್ಲಿ ಮುಖ್ಯಮಂತ್ರಿ @siddaramaiahನವರು ನಿಸ್ಸೀಮರು. ಚುನಾವಣೆಗೆ ಮುನ್ನ ಸುಳ್ಳು ಗ್ಯಾರಂಟಿಗಳನ್ನು ಕೊಡುವ ಮೊದಲು ನಿಮಗೆ ಯೋಜನೆಗಳಿಗೆ ಹಣ ಬೇಕು ಎಂಬ ಪರಿಜ್ಞಾನ ಇರಲಿಲ್ಲವೇ ಮಾನ್ಯ @siddaramaiahನವರೇ?' ಎಂದು ಬಿಜೆಪಿ ಹೇಳಿತ್ತು, ಈಗ ಬಿಜೆಪಿಯ ಈ ಟ್ವೀಟ್‌ಗೂ ಕಾಂಗ್ರೆಸ್ ರಿಯಾಕ್ಟ್ ಮಾಡಿದೆ.
ಕೈಲಾಗದವರು ಮೈ ಪರಚಿಕೊಂಡಂತಿದೆ @BJP4Karnataka ಸ್ಥಿತಿ!
— Karnataka Congress (@INCKarnataka) June 1, 2023
1 ಡಾಲರ್ ಗೆ 15 ರೂಪಾಯಿ, ರೈತರ ಆದಾಯ ಡಬಲ್, 2022ರಲ್ಲಿ ಎಲ್ಲರಿಗೂ ವಸತಿ ಎಂದು ಸುಳ್ಳು ಭರವಸೆ ಕೊಟ್ಟು ವಂಚಿಸಿದವರಿಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ನೈತಿಕತೆ ಇದೆಯೇ?
ನಾವು ಪ್ರಶ್ನೆಗಳಿಗೆ ಹೆದರಿ ಓಡುವವರಲ್ಲ, ಬಿಜೆಪಿಗೆ ತಾಕತ್ತಿದ್ದರೆ ಮೋದಿಯವರಲ್ಲಿ ಒಂದೇ ಒಂದು… https://t.co/g051pRI6Il
'ಕೈಲಾಗದವರು ಮೈ ಪರಚಿಕೊಂಡಂತಿದೆ..!'
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿರುದ್ಧವಾಗಿ ಬಿಜೆಪಿ ಪೋಸ್ಟ್ ಮಾಡಿರುವ ಟ್ವೀಟ್‌ಗೆ ಕಾಂಗ್ರೆಸ್ ಕೂಡ ಸವಾಲು ಹಾಕಿದೆ. 'ಕೈಲಾಗದವರು ಮೈ ಪರಚಿಕೊಂಡಂತಿದೆ @BJP4Karnataka ಸ್ಥಿತಿ! 1 ಡಾಲರ್ ಗೆ 15 ರೂಪಾಯಿ, ರೈತರ ಆದಾಯ ಡಬಲ್, 2022ರಲ್ಲಿ ಎಲ್ಲರಿಗೂ ವಸತಿ ಎಂದು ಸುಳ್ಳು ಭರವಸೆ ಕೊಟ್ಟು ವಂಚಿಸಿದವರಿಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ನೈತಿಕತೆ ಇದೆಯೇ? ನಾವು ಪ್ರಶ್ನೆಗಳಿಗೆ ಹೆದರಿ ಓಡುವವರಲ್ಲ, ಬಿಜೆಪಿಗೆ ತಾಕತ್ತಿದ್ದರೆ ಮೋದಿಯವರಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಮಾಡಿಸಲಿ.' ಎಂದು ಸವಾಲು ಹಾಕಲಾಗಿದೆ.
ಒಟ್ನಲ್ಲಿ ಮಳೆ ನಿಂತರೂ ಮರದ ಹನಿ ನಿಲ್ಲಲೇ ಇಲ್ಲ ಅನ್ನುವ ಹಾಗೆ ಬಿಜೆಪಿ & ಕಾಂಗ್ರೆಸ್ ನಡುವಿನ ಸೋಷಿಯಲ್ ಮೀಡಿಯಾ ಫೈಟ್ ಮುಂದುವರಿದಿದೆ. ಎಲೆಕ್ಷನ್ ಮುಗಿದು ಅರ್ಧ ತಿಂಗಳು ಕಳೆದರೂ ಬಿಜೆಪಿ ತನ್ನ ಟ್ವೀಟ್ ವಾರ್ ಮುಗಿಸುತ್ತಿಲ್ಲ, ಇತ್ತ ಕಾಂಗ್ರೆಸ್ ಕೂಡ ಈ ಟ್ವೀಟ್‌ಗೆ ರೀಪ್ಲೇ ಕೊಡೋದನ್ನ ನಿಲ್ಲಿಸುತ್ತಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ನಡುವಿನ ಟ್ವೀಟ್ ವಾರ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.












Click it and Unblock the Notifications