ಬಹುಕೋಟಿ ಮುಂಡಾಯಿಸಿದ ಉದ್ಯಮಿ ಜೊತೆ ಸಿದ್ದರಾಮಯ್ಯ: ಭುಗಿಲೆದ್ದ ವಿವಾದ
ಬಹುಕೋಟಿ ಮುಂಡಾಯಿಸಿದ ಉದ್ಯಮಿ ಜೊತೆ ಸಿಎಂ: ಭುಗಿಲೆದ್ದ ವಿವಾದ
ಹೈವೋಲ್ಟೇಜ್ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಇನ್ನೇನು ಆರು ದಿನ ಬಾಕಿ ಉಳಿದಿರುವ ಈ ಹೊತ್ತಿನಲ್ಲಿ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೇಶಕ್ಕೆ ಬಹುಕೋಟಿ ವಂಚಿಸಿದ ಉದ್ಯಮಿಯ ಜೊತೆ ನಂಟು ಇದೆ ಎನ್ನುವ ಗಂಭೀರ ಆರೋಪ ಮಾಡಿದೆ.
ಈ ಸಂಬಂಧ ಭಾನುವಾರ (ಮೇ 6) ದಾಖಲೆ ಸಮೇತ ಆರೋಪ ಮಾಡಿರುವ ಬಿಜೆಪಿ, ಮುಖ್ಯಮಂತ್ರಿಗಳ ಚೀನಾ ಪ್ರವಾಸದ ವೇಳೆ, ಸಾವಿರಾರು ಜನರಿಗೆ ವಂಚಿಸಿರುವ ವಿಜಯ್ ಈಶ್ವರನ್ ಎನ್ನುವ ಉದ್ಯಮಿಯನ್ನು ಭೇಟಿಯಾಗಿ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಿಎಂ ಆಹ್ವಾನಿಸಿದ್ದಾರೆ. (ಮುಧೋಳ ನಾಯಿಯಿಂದಾದರೂ ಕಾಂಗ್ರೆಸ್ ದೇಶಪ್ರೇಮ ಕಲಿಯಲಿ)
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಿಜಯ್ ಈಶ್ವರನ್ ಎನ್ನುವ ವ್ಯಕ್ತಿ ಸುಮಾರು 35ಸಾವಿರಕ್ಕೂ ಹೆಚ್ಚು ಜನರನ್ನು ವಂಚಿಸಿದ್ದು, ಈತನ ವಿರುದ್ದ ನೂರಕ್ಕೂ ಹೆಚ್ಚು FIR ದಾಖಲಾಗಿದೆ ಎಂದು ಆರೋಪಿಸಿದ್ದಾರೆ.
ಆಗಸ್ಟ್ 13, 2013ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚೀನಾ ಪ್ರವಾಸಕ್ಕೆ ತೆರಳಿದ್ದರು. ಆ ವೇಳೆ ಸಿಎಂ, ವಿಜಯ್ ಈಶ್ವರನ್ ಎನ್ನುವ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು ಸೂಟ್ ಧರಿಸಿ ಕ್ಯಾಮೆರಾಗೆ ಫೋಸ್ ಕೊಡುವ ಫೋಟೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಈ ಚಿತ್ರದಲ್ಲಿ ಸಿಎಂ ಪಕ್ಕಕ್ಕೆ ನಿಂತಿರುವ ಉದ್ಯಮಿ ವಿಜಯ್ ಈಶ್ವರನ್ ಕೈಯಲ್ಲಿ ಗಿಫ್ಟ್ ಬಾಕ್ಸ್ ಒಂದಿದ್ದು, ಇದು ಹ್ಯುಬ್ಲೊಟ್ ವಾಚ್ ಯಾಕಿರಬಾರದು ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಪ್ರಶ್ನಿಸಿದ್ದಾರೆ. ಚುನಾವಣೆಯ ವೇಳೆ, ಬಿಜೆಪಿ ಬಿಡುಗಡೆ ಮಾಡಿದ ಈ ಫೋಟೋ, ಕಾಂಗ್ರೆಸ್ಸಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಯ ಈ ಪತ್ರಿಕಾಗೋಷ್ಠಿಯ ಬೆನ್ನಲ್ಲೇ, #SidduExposed ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ಮುಂದೆ ಓದಿ..

ಮಲೇಷ್ಯಾದಲ್ಲಿ ನೆಲೆಸಿರುವ ವಿಜಯ್ ಈಶ್ವರನ್
ಸದ್ಯ ಮಲೇಷ್ಯಾದಲ್ಲಿ ನೆಲೆಸಿರುವ ವಿಜಯ್ ಈಶ್ವರನ್, ತಮಿಳುನಾಡಿನಲ್ಲಿ 35ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾನೆ. ಈತನ ವಿರುದ್ದ ದೇಶದೆಲ್ಲೆಡೆ ನೂರಕ್ಕೂ ಹೆಚ್ಚು ಕಡೆ FIR ದಾಖಲಾಗಿದೆ. ಚೆನ್ನೈ ಮತ್ತು ಮುಂಬೈ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದ ವಿಜಯ್ ಈಶ್ವರನ್ 2009ರಿಂದ ದೇಶದಿಂದ ಪರಾರಿಯಾಗಿದ್ದ. ಈ ವ್ಯಕ್ತಿಯನ್ನು ಮುಖ್ಯಮಂತ್ರಿಗಳು ಭೇಟಿಯಾಗಿದ್ದು ಈಗ ವಿವಾದವಾಗಿ ಕೂತಿದೆ.

ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ
ಸಮಾಜವಾದಿ ಸಿದ್ದರಾಮಯ್ಯ ತನ್ನ ಶೂ ಲೇಸ್ ಹಾಕಲು ಒಬ್ಬರನ್ನು ಇಟ್ಟುಕೊಂಡಿದ್ದಾರೆ. ನಲವತ್ತು ಸಾವಿರ ರೂಪಾಯಿ ಬೆಲೆಬಾಳುವ ಶೂ, ಮೂವತ್ತು ಸಾವಿರಯ ಚಪ್ಪಲಿ, ಒಳ ಉಡುಪಿಗೆ ಇನ್ನೆಷ್ಟು ಮುಖ್ಯಮಂತ್ರಿಗಳೇ? ಲಿಂಗಾಯತ ಪ್ರತ್ಯೇಕ ಧರ್ಮ, ಧ್ವಜ ಮುಂತಾದ ವಿಚಾರಗಳನ್ನು ಮುನ್ನಲೆಗೆ ತಂದು ಭ್ರಷ್ಟಾಚಾರದ ವಿಷಯವನ್ನು ಡೈವರ್ಟ್ ಮಾಡಲು ಸಿಎಂ ನೋಡಿದರು ಎನ್ನುವ ಟ್ವೀಟುಗಳು.

ಲಕ್ಷಾಂತರ ಜನರ ದುಡ್ಡನ್ನು ಲೂಟಿ ಮಾಡಿದೆ
ಚಿನ್ನದ ಉದ್ಯಮವೊಂದು ಲಕ್ಷಾಂತರ ಜನರ ದುಡ್ಡನ್ನು ಲೂಟಿ ಮಾಡಿದೆ. ಬಿಜೆಪಿ, ಸಿಎಂ ಜೊತೆ ಆ ಕಂಪೆನಿಯ ಮುಖ್ಯಸ್ಥನ ಜೊತೆ ಲಿಂಕ್ ಇರುವ ಚಿತ್ರವನ್ನು ಬಿಡುಗಡೆಗೊಳಿಸಿದೆ. ಇದು ದೇಶದ ಭದ್ರತಾ ವ್ಯವಸ್ಥೆಗೆ ಬಹುದೊಡ್ಡ ಮಾರಕ. ಲೂಟ್ ರಾಮಯ್ಯ ಎಕ್ಸ್ ಪೋಸ್ಡ್ ಎನ್ನುವ ಟ್ವೀಟುಗಳು.

ಫೇಕು ಮತ್ತು ಗೂಂಡಾಗಳು ಒಡೆದು ಆಳುವ ಪದ್ದತಿಯನ್ನು ಅನುಸರಿಸುತ್ತಿವೆ
ಕರ್ನಾಟಕದಲ್ಲಿ ಅಭಿವೃದ್ದಿ ವಿಚಾರದಲ್ಲಿ ಚುನಾವಣೆ ನಡೆಯದೇ ಟಿಪ್ಪು, ಮುಸ್ಲಿಂ, ನೆಹರೂ, ತಾಯಿ, ಮಗ, ಗೋಡ್ಸೆ ಮುಂತಾದ ವಿಚಾರದಲ್ಲಿ ಚುನಾವಣೆ ನಡೆಯುತ್ತಿರುವುದು ವಿಷಾದನೀಯ. ಫೇಕು ಮತ್ತು ಗೂಂಡಾಗಳು ಒಡೆದು ಆಳುವ ಪದ್ದತಿಯನ್ನು ಅನುಸರಿಸುತ್ತಿವೆ. ಕರ್ನಾಟಕ ಟ್ರಸ್ಟ್ ಮೋದಿ ಎನ್ನುವ ಟ್ವೀಟುಗಳು.

ಪ್ರಧಾನಿಗಳು ಹೇಳುತ್ತಿದ್ದ 2+1 ಫಾರ್ಮುಲಾ ಹೊರಬರುತ್ತಿದೆ
ತನಗೆ ಹ್ಯುಬ್ಲೊಟ್ ವಾಚ್ ನೀಡಿದ ವ್ಯಕ್ತಿಯ ಫೋಟ್ ಸಿದ್ದರಾಮಯ್ಯ ಯಾಕೆ ಬಿಡುಗಡೆ ಮಾಡಬಾರದು? ಪ್ರಧಾನಿಗಳು ಹೇಳುತ್ತಿದ್ದ 2+1 ಫಾರ್ಮುಲಾ ಹೊರಬರುತ್ತಿದೆ. ದೇಶಕ್ಕೆ ವಂಚಿಸಿದ ವ್ಯಕ್ತಿಗಳ ಜೊತೆ ಸಿದ್ದರಾಮಯ್ಯನವರು ಇರುವುದು ದೇಶಕ್ಕೆ ಭದ್ರತೆಗೆ ಮಾರಕ. ಹ್ಯುಬ್ಲೊಟ್ ವಾಚಿನ ಹಿನ್ನಲೆ ನಿಧಾನವಾಗಿ ಹೊರಬರುತ್ತಿದೆ ಎನ್ನುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್.












Click it and Unblock the Notifications