ಕಾಂಗ್ರೆಸ್‌ನ ಜಿಹಾದಿ ಮನಸ್ಥಿತಿಗೆ ತಕ್ಕ ಶಾಸ್ತಿಯಾಗಲಿದೆ: ಬಿಜೆಪಿ ಭವಿಷ್ಯ!

ಬೆಂಗಳೂರು: ಬಿಜೆಪಿ & ಕಾಂಗ್ರೆಸ್ ನಡುವೆ ಗ್ಯಾರಂಟಿ ವಾರ್ ನಡೆಯುತ್ತಿತ್ತು. ಆದ್ರೆ ಇದೀಗ ದಿಢೀರ್ ಗ್ಯಾರಂಟಿ ವಾರ್‌ನಿಂದ ಬೇರೆಯದ್ದೇ ವಿಚಾರಕ್ಕೆ ಕಿತ್ತಾಟವೂ ಶಿಫ್ಟ್ ಆಗಿದೆ. ಬಿಜೆಪಿ ಅವಧಿಯಲ್ಲಿ ಜಾರಿಯಾಗಿದ್ದ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದು ಮಾಡಲು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ತೀರ್ಮಾನ ಕೈಗೊಂಡಿದೆ. ಈ ಬೆನ್ನಲ್ಲೇ ಬಿಜೆಪಿ ಕೂಡ ರೊಚ್ಚಿಗೆದ್ದು ಕಾಂಗ್ರೆಸ್ ವಿರುದ್ಧ ಜಿಹಾದಿ ಪದ ಬಳಸಿ ವಾಗ್ದಾಳಿ ನಡೆಸಿದೆ!

ಬಿಜೆಪಿ, '2047ಕ್ಕೆ ಭಾರತವನ್ನು ಸಂಪೂರ್ಣ ಇಸ್ಲಾಮೀಕರಿಸಬೇಕು ಎಂಬುದು ನಿಷೇಧಿತ ಉಗ್ರ ಸಂಘಟನೆ ಪಿಎಫ್‌ಐನ ಹುನ್ನಾರ. ಭಾರತವನ್ನು ಅಸ್ಥಿರಗೊಳಿಸುವುದು ಮಿಷನರಿಗಳು, ವಿದೇಶ ಶಕ್ತಿಗಳು ಮುಂತಾದ ದೇಶ ವಿದ್ರೋಹ ಸಂಘಟನೆಗಳ ಕುತಂತ್ರ. ಆ ದೂರಗಾಮಿ ಷಡ್ಯಂತ್ರಗಳಿಗೆ ಕಾಲಕಾಲಕ್ಕೆ ಸಹಕರಿಸುವುದು @INCKarnatakaದ ಒಳಮರ್ಮ. ಈಗ ಮತಾಂತರ ನಿಷೇಧ ಕಾಯ್ದೆ ಹಿಂಪಡೆದು ಅಂಥಹ ದುಷ್ಟಶಕ್ತಿಗಳಿಗೆ ಕುಮ್ಮಕ್ಕು ಕೊಡಲು ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿದೆ. ಕಾಂಗ್ರೆಸ್‌ನ ಈ ಜಿಹಾದಿ ಮನಸ್ಥಿತಿಗೆ ತಕ್ಕ ಶಾಸ್ತಿಯಾಗಲಿದೆ.' ಎಂದು ಗಂಭೀರ ಆರೋಪ ಮಾಡಿದೆ ಕಮಲ ಪಡೆ.

BJP allegations on Congress

ಮಾಜಿ ಸಿಎಂ ಬೊಮ್ಮಾಯಿ ಕೆಂಡ!

ಇನ್ನು ಮಾಜಿ ಸಿಎಂ ಬೊಮ್ಮಾಯಿ ಕೂಡ ಟ್ವೀಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 'ರಾಜ್ಯದಲ್ಲಿ ‌ಮುಂಗಾರು ವೈಫಲ್ಯವಾಗಿ ಹಲವಾರು ಗ್ರಾಮದಲ್ಲಿ ಕುಡಿಯುವ ನಿರಿನ ಹಾಹಾಕಾರ ಉಂಟಾಗಿದೆ, ಅಂತರ ಜಲ ಕುಸಿದಿದೆ. ರೈತರ ಪಾಲಿಗೆ ಮುಂಗಾರು ವೈಫಲ್ಯ ಬಹಳ ದೊಡ್ಡ ಹೊಡೆತ ಕೊಟ್ಟಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಬದಲು, ದ್ವೇಷದ ತೀರ್ಮಾನ ತೆಗೆದುಕೊಂಡು ಸಂಕಷ್ಟದಲ್ಲಿರುವ ಕರ್ನಾಟಕದ ಜನರಿಗೆ ಈ ಸರ್ಕಾರ ಶಾಪವಾಗಿದೆ.' ಎಂದು ಗರಂ ಆಗಿದ್ದಾರೆ.

ಸರಣಿ ಟ್ವೀಟ್ ಮೂಲಕ ಬಿಜೆಪಿ ಕ್ಲಾಸ್!

ಬಿಜೆಪಿ ಸಾಲು ಸಾಲು ಟ್ವೀಟ್ ಮಾಡುತ್ತಿದೆ. ಈ ಮೂಲಕ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡುತ್ತಿದೆ. ಸಂಜೆ ಕೂಡ, 'ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು @INCKarnatakaದ ವೇಷದಲ್ಲಿರುವ ಉಗ್ರಗಾಮಿ ಸಂಘಟನೆ ಪಿಎಫ್ಐ ಎಂಬುದು ಇದೀಗ ಸಾಬೀತಾಗಿದೆ. ಅಪ್ರತಿಮ ಸ್ವತಂತ್ರ ಹೋರಾಟಗಾರರಾದ ವೀರ ಸಾವರ್ಕರ್‌ ಹಾಗೂ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಕುರಿತಾದ ಪಾಠಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಬೇಕು ಎಂಬುದು ಎಸ್.ಡಿ.ಪಿ.ಐ ಅಂಗಸಂಸ್ಥೆ ಕ್ಯಾಂಪಸ್‌ ಫ್ರಂಟ್‌ನ ಇರಾದೆಯಾಗಿತ್ತು. ಅದನ್ನು ಕಾಂಗ್ರೆಸ್‌ ಈಗ ಈಡೇರಿಸಿ ತುಷ್ಟೀಕರಣ ರಾಜಕಾರಣದ ತುತ್ತತುದಿ ಏರಿದೆ. ಈ ತುಘಲಕ್ ದರ್ಬಾರನ್ನು ರಾಜ್ಯದ ಜನತೆ ಅತೀ ಶೀಘ್ರದಲ್ಲಿ ಕಸದ ಬುಟ್ಟಿಗೆ ಎಸೆಯಲಿದ್ದಾರೆ.' ಎಂದು ಭವಿಷ್ಯ ನುಡಿದಿತ್ತು.

'ಜನರ‌ ಭಾವನೆಗಳಿಗೆ ಕೊಳ್ಳಿ..'

ಹಾಗೇ 'ರಾಷ್ಟ್ರಹಿತ, ರೈತ ಹಿತ ಮತ್ತು ಸಂಸ್ಕೃತಿಯ ರಕ್ಷಣೆಯ ಭಾಗವಾಗಿ ನಮ್ಮ ಸರ್ಕಾರ ಎಪಿಎಂಸಿ ಕಾಯ್ದೆ, ಪಠ್ಯ ಪರಿಷ್ಕರಣೆ, ಮತಾಂತರ ನಿಷೇಧ ಮುಂತಾದ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ರಾಜಕೀಯವಾಗಿ ನಮ್ಮನ್ನು ವಿರೋಧಿಸುವ ಭರದಲ್ಲಿ ಅವುಗಳನ್ನು ಹಿಂತೆಗೆದುಕೊಳ್ಳುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ಮೂಲಕ @INCKarnataka ರಾಷ್ಟ್ರವಿರೋಧಿ ಮತ್ತು ರೈತವಿರೋಧಿ ಧೋರಣೆಗಳನ್ನು ಪ್ರದರ್ಶಿಸುತ್ತಿದೆ. @siddaramaiah ಅವರ ಸರ್ಕಾರ ನಿತ್ಯವೂ ಹೊಸ ಅಧಃಪತನ ಕಾಣುತ್ತಿದೆ. ದೇಶವನ್ನೇ ಶಿಥಿಲಗೊಳಿಸಲು ಹವಣಿಸುತ್ತಿರುವ ಕಾಂಗ್ರೆಸ್ ಜನರ‌ ಭಾವನೆಗಳಿಗೆ ಕೊಳ್ಳಿ‌ ಇಡುವ ಮೂಲಕ ಸ್ವತಃ ಶಿಥಿಲಗೊಳ್ಳಲಿದೆ.' ಮತ್ತೊಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿತ್ತು.

ಹೀಗೆ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಕೆಂಡವಾಗಿದೆ. ಸಾಲು ಸಾಲು ಟ್ವೀಟ್‌ಗಳ ಮೂಲಕ ಬಿಜೆಪಿ ರಾಜ್ಯ ಘಟಕ ಮತ್ತು ಬಿಜೆಪಿ ರಾಜ್ಯ ನಾಯಕರು ಆಕ್ರೋಶ ಹೊರಹಾಕಿ, ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ. ಈ ವಿಚಾರದ ಮೂಲಕ ಗ್ಯಾರಂಟಿ ಫೈಟ್ ನಡುವೆಯೇ ಮತ್ತೊಂದು ವಾರ್ ರಾಜ್ಯ ರಾಜಕೀಯದ ಪಡಸಾಲೆಗೆ ಎಂಟ್ರಿಯಾಗಿದೆ. ಇಲ್ಲಿ ಗೆಲ್ಲೋದು ಯಾರು, ಸೋಲೋದು ಯಾರು? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+