ವರ್ಷದ ಕೊನೆಯಲ್ಲಿ ಟ್ವಿಟ್ಟಿಗರು ಸಿದ್ದರಾಮಯ್ಯನವರಿಗೆ ಮಾಡಿದ ನೀತಿಪಾಠ
Recommended Video

2018 ಹಲವು ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾದ ವರ್ಷವಾಗಿತ್ತು. ಮೇ ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಯ ವೇಳೆ ಮೂರು ಪ್ರಮುಖ ಪಕ್ಷಗಳು, ಜನಸಾಮಾನ್ಯರು ಏನು ಅಂದುಕೊಂಡಾರು ಎನ್ನುವ ಕನಿಷ್ಠ ಪರಿಜ್ಞಾನವಿಲ್ಲದೇ ಆರೋಪ, ಪ್ರತ್ಯಾರೋಪ ಮಾಡಿಕೊಂಡಿದ್ದವು.
ಪ್ರಮುಖವಾಗಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಯಾವ ಮಟ್ಟದಲ್ಲಿ ಕಿತ್ತಾಡಿಕೊಂಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಬಿಜೆಪಿಗೆ ಸರಕಾರ ರಚಿಸಲು ಕೆಲವೇ ಕೆಲವು ಸೀಟಿನ ಕೊರತೆಯಾದಾಗ, ಅವೆರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿತ್ತು.
ತಾವು ಮುಖ್ಯಮಂತ್ರಿಯಾಗಿದ್ದಾಗಲೇ, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ದ ಹರಿಹಾಯುತ್ತಿದ್ದ ಸಿದ್ದರಾಮಯ್ಯ, ಸಿಎಂ ಸ್ಥಾನ ಹೋದಮೇಲೂ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಸಮ್ಮಿಶ್ರ ಸರಕಾರದಲ್ಲೂ ತಮ್ಮ ಎಂದಿನ ಖದರ್ ಅನ್ನು ಉಳಿಸಿಕೊಂಡಿರುವ ಸಿದ್ದರಾಮಯ್ಯ, ಸಚಿವ ಸಂಪುಟ ವಿಸ್ತರಣೆಯಲ್ಲೂ ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ, ರಮೇಶ್ ಜಾರಕಿಹೊಳಿ, ಸಂಪರ್ಕಕ್ಕೆ ಸಿಗದೇ ಇರುವ ವಿಚಾರದಲ್ಲಿ ಮತ್ತೆ ಬಿಜೆಪಿ ವಿರುದ್ದ ಕಿಡಿಕಾರಿದ್ದರು.
ಬಿಜೆಪಿ ಮತ್ತೆ ಆಪರೇಶನ್ ಕಮಲ ಮಾಡಲು ಮುಂದಾಗಿದೆ, ಕಾಂಗ್ರೆಸ್ ಮುಖಂಡರಿಗೆ ಕೋಟ್ಯಾಂತರ ರೂಪಾಯಿಯ ಆಮಿಷವೊಡ್ಡುತ್ತಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಅದಕ್ಕೆ ಟ್ವಿಟ್ಟಿಗರು, ತಮ್ಮದೇ ಆದ ಶೈಲಿಯಲ್ಲಿ ರಿಪ್ಲೈ ಮಾಡಿದ್ದಾರೆ.

ಸಿದ್ದರಾಮಯ್ಯ ಮಾಡಿದ ಟ್ವೀಟ್
ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ. ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ? ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಒಂದನ್ನು ಬಿಟ್ಟು ವಿರೋಧ ಪಕ್ಷವಾಗಿ @BJP4Karnataka ಇಷ್ಟು ದಿನ ಬೇರೆ ಏನು ಮಾಡಿದೆ - ಇದು ಸಿದ್ದರಾಮಯ್ಯನವರು ಮಾಡಿದ ಟ್ವೀಟ್.

ಸ್ವಾಮಿಗಳೆ ನಿಮ್ಮಲ್ಲಿ ಸಾಕ್ಷಿ ಇದ್ದರೆ ಬಹಿರಂಗಪಡಿಸಿ
ಸ್ವಾಮಿಗಳೆ ನಿಮ್ಮಲ್ಲಿ ಸಾಕ್ಷಿ ಇದ್ದರೆ ಬಹಿರಂಗಪಡಿಸಿ.. ಬೇರೆಯವರ ತಟ್ಚೆಯಲ್ಲಿ ಬಿದ್ದಿರುವ ನೊಣದ ಬಗ್ಗೆ ಮಾತಾಡೋದು ಬಿಟ್ಚು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೇಸಿಗೆಯ ಕಡೆ ಗಮನ ಕೊಡಿ #ನಾಲಾಯಕ್ ರಾಜಕೀಯ.. ನೀವು ಕತ್ತೆಗಳ ವ್ಯಾಪಾರ ಮಾಡಿ ಸರ್ಕಾರ ರಚನೆ ಮಾಡಿದ್ದೀರಿ ಅವರು ಕುದರೆ ವ್ಯಾಪಾರ ಮಾಡಿದರೆ ಏನು ತಪು "ಮಾಡಿದು ಉಣ್ಣೋ ಮಾರಾಯಾ".. ಈಗಿರುವ ಸಮಿಶ್ರ ಸರಕಾರ, ಖುರ್ಚಿ ಪಡಿಯೋಕೆ. ಕಚ್ಚಾಡೋದು ಬಿಟ್ಟು,. ಏನು ಕೆಲಸ ಮಾಡಿದೆ ??

ಕೊಳೆತು ದುರ್ವಾಸನೆ ಬರುತ್ತಿರುವ ಕ-ಮಲ
ಕೊಳೆತು ದುರ್ವಾಸನೆ ಬರುತ್ತಿರುವ ಕ-ಮಲವನ್ನು ಕರ್ನಾಟಕದ ಜನ ಗುಡಿಸಿಹಾಕಲು ಸಿದ್ಧರಾಗಿದ್ದಾರೆ. Hello. Mr. ನಾನು ಕರ್ನಾಟಕದವನೇ. ನಾನು ಗುಡಿಸಲು ಹೊರಟಿರೋದು ಕಚಡಾ ಕಾಂಗ್ರೆಸ್ ನಾ. ನನ್ ಎನ್ಕೆ ಸೇರಸೂತೀರಾ. ದಲಿತ ವಿರೋಧಿ ಸಿದ್ದರಾಮಯ್ಯ.. ಪರಮೇಶ್ವರ್ ಅವರಿಂದ ಗೃಹ ಖಾತೆ ಕಿತ್ತುಕೊಂಡಿರಿ, ನಿಮ್ಮನ್ನು ದಲಿತರು ಎಂಪಿ ಚುನಾವಣೆಯಲ್ಲಿ ಚೆನ್ನಾಗಿ ಪಾಠ ಕಲಿಸಲಿದ್ದಾರೆ.

ಯಾವಾಗ ಹೆಂಗ್ ಬೇಕೋ ಹಂಗೆ ಬರೀತಿರಿ
ರೀ ಸ್ವಾಮಿ ಎಷ್ಟು ದಿನ ಹಿಂಗೆ ರಾಜಕೀಯ ಮಾಡುತ್ತೀರಿ ನಿಮ್ಗೆ ಯಾವಾಗ ಹೆಂಗ್ ಬೇಕೋ ಹಂಗೆ ಬರೀತಿರ.ಆವಾಗ ಅಧಿಕಾರ ಹೋಗುತಲ್ಲ ಅಂತ ಜೆಡಿಎಸ್ ಜೊತೆ ಹೋದ್ರಿ ಇವಾಗ ಮತ್ತೆ ಅಧಿಕಾರ ದ ಆಸೆಗೆ ಬಿಜೆಪಿ ಮೇಲೆ ಹೇಳ್ತಿದ್ದೀರ.ಅಷ್ಟು ವಿರೋಧ ಮಾಡಿ ಜೆಡಿಎಸ್ ಇಂದ ಬಂದ್ರಿ ಮತ್ತೆ ಅಲ್ಲೇ ಹೋಗಿದ್ದೀರ.ಇವಾಗ್ಲು ಜನಕ್ಕೆ ಅರ್ತ ಆಗಲ್ವಾ. ಸ್ವಲ್ಪ ethics ಇರ್ಲಿ.. 70,000 ಕೋಟಿಯನ್ನು,ದೆಹಲಿ ಕಾಮನ್ವೆಲ್ತ್ ಗೇಮ್ ನಲ್ಲಿ.ನುಂಗಿ, ತೇಗಿ ಲಪಟಾಯ್ಸಿದ, ಮಹಾನ್ ಸಾಚಾಗಳನ್ನು,ಧರ್ಮಾಧಿಕಾರಿಗಳೆಂದು,ಕರೆಯಬೇಕೆ? ಬಿಜೆಪಿ ಅವರು ಏನು ವ್ಯಾಪಾರ ಮಾಡಬೇಕಾಗಿಲ್ಲ.... ನೀವು ಮಾಡೋ .... ಖಾತೆ ಬದಲಾವಣೆ ಸಾಕು... ಅವರು ಪಕ್ಷ ಬಿಟ್ಟು ಹೋಗಲು... ನಿಮ್ಮ ತಪ್ಪು ಸರಿ ಮಾಡಿಕೊಳ್ಳಲು ಬಿಜೆಪಿಯವರನ್ನು ಯಾಕೆ... ಪಾಯಿಂಟ್ ಮಾಡ್ತೀರಾ

BJP ಸರ್ಕಾರ ಉರುಳಿಸಲು ಹೋಗಿದ್ದಾಗ ಎಷ್ಟು ಆಮಿಷ ತೋರಿಸಿದ್ದಿರಿ
2010ರಲ್ಲಿ HDK, ನಿಮಗೆ BJP ಸರ್ಕಾರ ಉರುಳಿಸಲು ಹೋಗಿದ್ದಾಗ ಎಷ್ಟು ಆಮಿಷ ತೋರಿಸಿದ್ದಿರಿ ? ನಿಮ್ಮ ಡೈರಿಯನ್ನು ACBಯಿಂದಲೇ ಮ ಶೆಟ್ಟಿ ಯಂತವರು ತನಿಖೆ ಮಾಡಿದಾಗ ರ, ಸ ಅಕ್ಷರದ ಅರ್ಥ, 5ವರ್ಷದಲ್ಲಿ ಲೂಟಿದ 2300-4000 ಮೂಲ ಸಿಗುತ್ತದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಳು 24-70 ಕೋಟಿ ಖರ್ಚು ಎಲ್ಲಿಂದ ಬಂತು?












Click it and Unblock the Notifications