ಕಂಬಳಬೇಕು ಚಳವಳಿಗಾರರಿಗೆ ಗುಡ್ ನ್ಯೂಸ್, ಎರಡು ದಿನದಲ್ಲಿ ಒಳ್ಳೆ ಸುದ್ದಿ

Subscribe to Oneindia Kannada

ಬೆಂಗಳೂರು, ಫೆಬ್ರವರಿ 6: "ಕಂಬಳಕ್ಕೆ ಅವಕಾಶ ನೀಡಲು ಮಸೂದೆ ಸಿದ್ಧವಾಗಿದೆ. ಒಂದೆರಡು ದಿನದಲ್ಲಿ ಮಸೂದೆಯನ್ನು ನಾವು ಸದನದಲ್ಲಿ ಮಂಡಿಸಲಿದ್ದೇವೆ," ಎಂದು ಕಾನೂನು ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ. [ಕಂಬಳ ಎಂದರೇನು? ಕಂಬಳ ನಮಗೇಕೆ ಬೇಕು?]

ಇಂದು (ಸೋಮವಾರ) ಕರ್ನಾಟಕ ವಿಧಾನಸಭೆಯ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಮಂಗಳವಾರ ಅಥವಾ ಬುಧವಾರ ಸರಕಾರ ಸದನದ ಮುಂದೆ ಮಸೂದೆ ಮಂಡಿಸಲಿದೆ. ಮಸೂದೆಗೆ ಒಪ್ಪಿಗೆ ಸಿಗುತ್ತಿದ್ದಂತೆ ಕಂಬಳ ನಡೆಸಲು ಇದ್ದ ಅಡ್ಡಿ ನಿವಾರಣೆಯಾಗಲಿದೆ. ಈ ಮೂಲಕ ಕರಾವಳಿ ಜಿಲ್ಲೆಗಳ ವರ್ಷಗಳ ಬೇಡಿಕೆ ಕೊನೆಗೂ ಇಡೇರಲಿದೆ.[ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ: ಇಲ್ಲೊಂದು ಅಪಸ್ವರ]

Bill is ready for introduction of Kambala – TB Jayachandra

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪ್ರತಿಭಟನೆ ಆರಂಭವಾಗಿ ಯಶಸ್ವಿಯಾಗಿತ್ತು. ಅಲ್ಲಿನ ಸರಕಾರ ಪ್ರತಿಭಟನೆ ಹಿನ್ನಲೆಯಲ್ಲಿ ತಿದ್ದುಪಡಿ ತಂದು ಜಲ್ಲಿಕಟ್ಟಿಗೆ ಅನುವು ಮಾಡಿಕೊಟ್ಟಿತ್ತು. ಇದೇ ಹೊತ್ತಿಗೆ ಕರ್ನಾಟಕದಲ್ಲಿಯೂ ಕಂಬಳಕ್ಕೆ ಅನುವು ನೀಡಬೇಕು ಎಂದು ಕೋರಿ ಪ್ರತಿಭಟನೆಗಳು ಆರಂಭವಾಗಿದ್ದವು. ಕೊನೆಗೆ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು. ಈ ಮೂಲಕ ಕಂಬಳ ನಡೆಸಲು ಅವಕಾಶ ನೀಡುವುದಾಗಿ ಕರ್ನಾಟಕ ಸರಕಾರ ಭರವಸೆ ನೀಡಿತ್ತು. ಅದರಂತೆ ಈಗ ಮಸೂದೆ ಸಿದ್ದವಾಗಿದ್ದು ಒಂದೆರಡು ದಿನಗಳಲ್ಲಿ ಮಂಡನೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Good news for KambalaBelu Army in Karnataka. The Law Minister TB Jayachandra on Monday said that, bill on Kambala is ready for introduction and in a day or two it will be introduced in the house.
Please Wait while comments are loading...