ನವೆಂಬರ್ ಕ್ರಾಂತಿಗೆ ಕೊಳ್ಳಿ ಇಟ್ಟ ಬಿಹಾರ ಚುನಾವಣೆ ಫಲಿತಾಂಶ 2025... Siddaramaiah
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳಿಂದ ಒಂದೇ ಒಂದು ಘೋಷಣೆ ಪದೇ ಪದೇ ಕೇಳಿ ಬರುತ್ತಲೇ ಇತ್ತು. ಅದರಲ್ಲೂ ಸಿಎಂ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಸೇರಿ ಹೀಗೆ ಹಲವು ವಿಚಾರಗಳು ಚರ್ಚೆಗೆ ದಾರಿ ಮಾಡಿಕೊಟ್ಟಿದ್ದವು. ನೋಡ ನೋಡುತ್ತಲೇ ಇನ್ನೇನು ಸಿದ್ದರಾಮಯ್ಯ ಅವರ ಸ್ಥಾನವೇ ಬದಲಾಗಿ ಹೋಯ್ತು ಅನ್ನೋ ವಾತಾವರಣ ಕೂಡ ನಿರ್ಮಾಣ ಆಗಿತ್ತು.
ಇದೆಲ್ಲವನ್ನೂ ಮೀರಿ, ನಾನೇ ಮುಂದಿನ ಸಿಎಂ... ನಾನೇ ಮುಂದಿನ ಸಿಎಂ... ಅಂತಾ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಮುಂದೆ ಬಂದು & ಸೌಂಡ್ ಮಾಡಿದ್ದರು. ಆದರೆ ಈಗ ನವೆಂಬರ್ ಕ್ರಾಂತಿಗೆ ಕೊಳ್ಳಿ ಇಟ್ಟ ಬಿಹಾರ ಚುನಾವಣೆ ರಿಸಲ್ಟ್ 2025 ಹೊಸ ಇತಿಹಾಸ ಬರೆದು ಬಿಟ್ಟಿದೆ ಹಾಗೂ ಈ ಮೂಲಕ ರಾಜ್ಯ ರಾಜಕೀಯದಲ್ಲಿ ಎಲ್ಲಾ ಥಂಡಾ ಹೊಡೆಯುವ ಪರಿಸ್ಥಿತಿ ಕೂಡ ನಿರ್ಮಾಣ ಆಗಿದೆ. ಅಷ್ಟಕ್ಕೂ ಇಲ್ಲಿ ಆಗಿದ್ದಾದರೂ ಏನು? ಮುಂದೆ ಆಗುವುದು ಏನು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಸಿದ್ದರಾಮಯ್ಯ ಸಿಎಂ ಸ್ಥಾನ ಭದ್ರ...
ಕೆಲವು ದಿನಗಳಿಂದ ಕರ್ನಾಟಕದಲ್ಲಿ ಸಿಎಂ ಸ್ಥಾನ ಬದಲಾವಣೆ ವಿಚಾರ, ದೊಡ್ಡ ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡಿತ್ತು. ಹೀಗಿದ್ದಾಗ ಕೆಲವರು ರೆಬೆಲ್ ಕೂಡ ಆಗುವ ಹಂತಕ್ಕೆ ತಲುಪಿದ್ದರು, ಮತ್ತೊಂದು ಕಡೆ ಇದೇ ಸಮಯದಲ್ಲಿ ತಮಗೆ ಸಚಿವ ಸ್ಥಾನ ಸಿಗುತ್ತಾ? ಅನ್ನೋ ಆಸೆಯಲ್ಲಿಯೇ ಕಾಯುತ್ತಿದ್ದರು. ಆದರೆ ಎಲ್ಲವೂ ಈಗ ಸ್ತಬ್ಧವಾಗಿ ಹೋಗಿದೆ, ಬಿಹಾರ ಸೋತು ಹೋಗಿರುವುದಕ್ಕೆ ಈಗಾಗಲೇ ಕಾಂಗ್ರೆಸ್ ವರಿಷ್ಠರು ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನೊಂದು ಕಡೆ ಮುಂದೆ ಬರುವ ಹಲವು ಚುನಾವಣೆಗಳಲ್ಲೂ ಸಂಕಷ್ಟ ಎದುರಾಗುವ ಆತಂಕ ಮೂಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಕಥೆ ಏನು?
ಒಟ್ನಲ್ಲಿ ಕರ್ನಾಟದಲ್ಲಿ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಅವರ ಸ್ಥಾನ ಗಟ್ಟಿಯಾಗಿದ್ದು, ಹೀಗೆ ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜಕೀಯ ಕ್ರಾಂತಿಯ ಮಾತು ಕೂಡ ನಿಂತು ಹೋಗಿದೆ. ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ನೆಮ್ಮದಿಯಾಗಿ ಇರುವ ಕರ್ನಾಟಕ ಸರ್ಕಾರದ ವಿಚಾರದಲ್ಲಿ ಕೈಹಾಕಿ ನೆಮ್ಮದಿ ಕೆಡಿಸಿಕೊಳ್ಳಲು ಕಾಂಗ್ರೆಸ್ ವರಿಷ್ಠರು ಕೂಡ ಸಿದ್ಧವಿಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದೇ ವಿಚಾರ ಅಸ್ತ್ರವಾಗುವ ನಿರೀಕ್ಷೆ ದಟ್ಟವಾಗಿದೆ. ಇನ್ನೊಂದು ಕಡೆಯಲ್ಲಿ ಕರ್ನಾಟಕದಲ್ಲಿ ಇನ್ನು ಕೇವಲ 2.5 ವರ್ಷದಲ್ಲಿ ಚುನಾವಣೆ ಬರಲಿದ್ದು, ಈಗಲೇ ರಾಜಕೀಯ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ.












Click it and Unblock the Notifications