Dharmasthala Helpline: ಧರ್ಮಸ್ಥಳ ಕೇಸ್ ಸಹಾಯವಾಣಿಗೆ ಬಂತು ನೂರಾರು ಫೋನ್ ಕರೆ; ದೂರು ನೀಡೋಕಲ್ಲ, ಮತ್ಯಾಕೆ?

ಧರ್ಮಸ್ಥಳ, ಆಗಸ್ಟ್‌ 01: ಧರ್ಮಸ್ಥಳ ವ್ಯಾಪ್ತಿಯಲ್ಲಿ ಬಲವಂತವಾಗಿ ನೂರಾರು ಶವಗಳನ್ನ ಹೂತುಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಸಬಂಧ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿದೆ. ಅದರಂತೆ ಇದೀಗ ಎಸ್ಐಟಿ ತನಿಖೆ ತೀವ್ರಗೊಳಿಸಿದ್ದು, ಅನಾಮಿಕ ವ್ಯಕ್ತಿ 13 ಸ್ಥಳ ಗುರುತು ಮಾಡಲಾಗಿತ್ತು. 13 ಜಾಗದ ಫೈಕಿ ಪಾಯಿಂಟ್‌ 6 ರಲ್ಲಿ ಭೂಮಿ ಅಗೆದಾಗ ಅಸ್ಥಿಪಂಜರ ಸಿಕ್ಕಿದ್ದು, ನೂರಾರು ಶವಗಳನ್ನು ಹೂತ್ತಿಟ್ಟ ಕೇಸ್‌ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ. ಈ ನಡುವೆ ಎಸ್ಐಟಿ ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದು, ಈ ಪ್ರಕರಣದ ಬಗ್ಗೆ ಮಾಹಿತಿಗಾಗಿ 0824-2005301ಕ್ಕೆ ಮಾಹಿತಿ ನೀಡುವಂತೆ ತಿಳಿಸಿದೆ.

ಕೆಲ ದಿನಗಳ ಹಿಂದೆ ಅನಾಮಿಕ ವ್ಯಕ್ತಿಯೊಬ್ಬ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಸುತ್ತಮುತ್ತಲಿನ ಕಾಡುಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಬಗ್ಗೆ ಪೋಲಿಸರ ಬಳೀ ಮಾಹಿತಿ ನೀಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿರುವ ಪ್ರಕರಣವು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಜನರಿಂದ ಮಾಹಿತಿ ಸಂಗ್ರಹಿಸಲು ಎಸ್‌ಐಟಿಯು ಸಹಾಯವಾಣಿ ಸಂಖ್ಯೆ 0824-2005301 ಅನ್ನು ತೆರೆದಿದೆ.

Big Twist in Dharmasthala Mass Burial Case SIT opens helpline number

ಧರ್ಮಸ್ಥಳ ಸುತ್ತಮುತ್ತ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಕಾರ್ಯಚರಣೆ ಮುಂದುವರೆಸಿದೆ. ಈಗಾಗಲೇ ಪಾಯಿಂಟ್‌ 6 ರಲ್ಲಿ ಅಸ್ಥಿಪಂಜರ ಸಿಕ್ಕಿದ್ದು, ರಹಸ್ಯ ಭೇದಿಸಲು ಎಸ್ಐಟಿ ಇನ್ನಷ್ಟು ತನಿಖೆಯನ್ನ ಚುರುಕುಗೊಳಿಸಿದೆ. ಅಲ್ಲದೇ ಜನರಿಗಾಗಿ ಸಹಾಯವಾಣಿ ತೆರೆದು ದೂರು ಅಥವಾ ಕೇಸ್ ಗೆ ಸಂಬಂಧಿಸಿದ ವಿಷಯದ ಬಗ್ಗೆ ಸಂಪರ್ಕಿಸಲು ಸಹಾಯವಾಣಿ ತೆರೆದು ಕೇಸ್ಗೆ ಸಹಕರಿಸುವಂತೆ ಮನವಿ ಮಾಡಿದೆ. ಆದರೆ, ಆಶ್ಚರ್ಯಕರವಾಗಿ, ಈವರೆಗೆ ಸಹಾಯವಾಣಿಗೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದೂರು ಕರೆಗಳು ಬಂದಿಲ್ಲ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಅನಾಮಿಕ ವ್ಯಕ್ತಿಯ ದೂರಿನ ಮೇರೆಗೆ ರಾಜ್ಯ ಸರ್ಕಾರ ಪ್ರಕರಣ ಗಂಭೀರವಾಗಿ ಪರಿಗಣಿಸಿ ಎಸ್ಐಟಿಗೆ ವಹಿಸಿದೆ. ಎಸ್ಐಟಿ ಕೂಡ 29 ಜನರ ತಂಡ ತನಿಖೆ ಚುರುಕುಗೊಳಿಸಿದೆ. ಜನರಿಂದ ದೂರು ಮತ್ತು ಕೇಸ್ ಸಂಬಂಧ ಸಂಪರ್ಕ ಮಾಡಲು ಸಹಾಯವಾಣಿ ಕೂಡ ತೆರೆದಿದೆ. ಆದರೆ ಇಲ್ಲಿಯವರೆಗೂ ದೂರಿನ ಬಗ್ಗೆ ಯಾವುದೇ ಕರೆ ಬಂದಿಲ್ಲ. ಬದಲಿಗೆ ನೂರಾರು ಕರೆಗಳು ಬಂದಿದ್ದರೂ, ಅವು ಕೇವಲ ಘಟನೆಯ ಕುತೂಹಲದಿಂದ ಏನಾದರೂ ಸಿಕ್ಕಿತೇ? ಏನಾಯ್ತು ಎಂದು ವಿಚಾರಿಸಲು ಜನರಿಂದ ಕರೆಗಳು ಬಂದಿವೆ ಎಂದು ಹೇಳಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಮತ್ತು ಕಾಣೆಯಾದವರ ಕುಟುಂಬಗಳಿಗೆ ನ್ಯಾಯ ಒದಗಿಸಲು, ಸಾರ್ವಜನಿಕರಿಂದ ಮಾಹಿತಿಯನ್ನು ಸಂಗ್ರಹಿಸಲು ಸಹಾಯವಾಣಿಯನ್ನು ಆರಂಭಿಸಲಾಯಿತು.

ನೇತ್ರಾವತಿ ನದಿಯ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಭಾಗಶಃ ಅವಶೇಷಗಳಲ್ಲಿ 15 ಮೂಳೆಗಳು ಸೇರಿವೆ, ಕೆಲವು ಮುರಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿರುವ ವಿಧಿವಿಜ್ಞಾನ ವೈದ್ಯರು ಮೂಳೆಗಳು ಪುರುಷ ವ್ಯಕ್ತಿಯದ್ದಾಗಿವೆ ಎಂದು ಪ್ರಾಥಮಿಕ ಅಭಿಪ್ರಾಯವನ್ನು ನೀಡಿದ್ದಾರೆ, ಆದರೂ ಅಂತಿಮ ದೃಢೀಕರಣವು ಪೂರ್ಣ ವಿಧಿವಿಜ್ಞಾನ ಪರೀಕ್ಷೆಗಾಗಿ ಕಾಯುತ್ತಿದೆ.

ಇನ್ನೂ ಪಾಯಿಂಟ್‌ 1 ಲ್ಲಿ ಪ್ಯಾನ್ ಕಾರ್ಡ್ ಪತ್ತೆಯಾಗಿದ್ದು, ಆ ಪ್ಯಾನ್‌ ಕಾರ್ಡ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸುರೇಶ್ ಅವರದ್ದಾಗಿದ್ದು, ಮಾರ್ಚ್ 2025 ರಲ್ಲಿ ಕಾಮಾಲೆ ರೋಗದಿಂದ ಸಾವನ್ನಪ್ಪಿ ಅವರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೃತರು ಮದ್ಯವ್ಯಸನಿಯಾಗಿದ್ದರು ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ, ಧರ್ಮಸ್ಥಳಕ್ಕೆ ಭೇಟಿ ನೀಡಿದ ಮೊದಲು ಅವರು ಕಾರ್ಡ್ ಕಳೆದುಕೊಂಡಿರಬಹುದು ಎಂದು ಹೇಳಿದ್ದಾರೆ.

ಮಾಜಿ ನೈರ್ಮಲ್ಯ ಕಾರ್ಮಿಕರಾಗಿರುವ ದೂರುದಾರರು, 1995 ಮತ್ತು 2014 ರ ನಡುವೆ ಧರ್ಮಸ್ಥಳದಲ್ಲಿ 100 ಕ್ಕೂ ಹೆಚ್ಚು ಶವಗಳನ್ನು - ಹೆಚ್ಚಾಗಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಮೃತ ದೇಹವನ್ನು ಹೂಳಲು ಒತ್ತಾಯಿಸಲಾಯಿತು ಎಂದು ಹೇಳಿಕೊಂಡಿದ್ದಾರೆ. ಮೊದಲ ಸ್ಥಳವನ್ನು ಹುಡುಕುತ್ತಿದ್ದಾಗ, ಅಧಿಕಾರಿಗಳು ಒಬ್ಬ ಪುರುಷನಿಗೆ ಸೇರಿದ ಪ್ಯಾನ್ ಕಾರ್ಡ್ ಮತ್ತು ಮಹಿಳೆಗೆ ಸೇರಿದ ಡೆಬಿಟ್ ಕಾರ್ಡ್ ಅನ್ನು ವಶಪಡಿಸಿಕೊಂಡರು. ಬ್ಯಾಂಕ್ ಇನ್ನೂ ಅವರ ವಿವರಗಳನ್ನು ನಮಗೆ ನೀಡಿಲ್ಲ ಮತ್ತು ಅವರು ಇರುವ ಸ್ಥಳದ ಬಗ್ಗೆ ಪರಿಶೀಲನೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+