ಕಾಂಗ್ರೆಸ್-ಬಿಜೆಪಿಯಿಂದ ಸಂಸದೆ ಸುಮಲತಾಗೆ ಬಿಗ್ ಆಫರ್: ಮಗನ ಭವಿಷ್ಯ ಸೇರಿದಂತೆ ಏನೇನಿದೆ ಅದರಲ್ಲಿ
ಮೈಸೂರು, ಜನವರಿ 12: ಕರ್ನಾಟಕ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣ ಕುತೂಹಲಕರ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಲೇ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಚುನಾವಣೆ, ಮತ್ತೀಗ ಮುನ್ನೆಲೆಗೆ ಬಂದಿದೆ. ಈ ಕುರಿತು ಮಂಡ್ಯ ಸಂಸದೆ ಸುಮಲತಾ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಎರಡೂ ಪಕ್ಷಗಳು ಆಫರ್ ನೀಡಿವೆ
'ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರು ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ. ನನ್ನ ಜೊತೆ ನನ್ನ ಮಗ ಅಭಿಷೇಕ್‌ಗೂ ಟಿಕೆಟ್ ನೀಡುವುದಾಗಿ ಎರಡೂ ಪಕ್ಷಗಳು ಆಫರ್ ನೀಡಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾನಂತೂ ಯಾವುದೇ ಬೇಡಿಕೆ ಇಟ್ಟಿಲ್ಲ. ನಾನು ಟಿಕೆಟ್‌ಗಾಗಿ ಆಸೆಯೂ ಪಟ್ಟಿಲ್ಲ. ನನ್ನ ಮಗನಿಗೂ ಈ ಆಸೆ ಇಲ್ಲ. ಎಲ್ಲವೂ ಸಮಯ ಸಂದರ್ಭ ನಿರ್ಧರಿಸಲಿದೆ. ಆ ಸಮಯ ಬಂದಾಗ ನಿರ್ಧಾರಿಸುತ್ತೇನೆ' ಎಂದು ಸುಮಲತಾ ಹೇಳಿದ್ದಾರೆ.

ಯಾವ ಪಕ್ಷಕ್ಕೆ ಹೋಗುವದೆಂದು ತೀರ್ಮಾನಿಸಿಲ್ಲ
'ನಾನು ಯಾವ ಪಕ್ಷಕ್ಕೆ ಹೋಗುವದೆಂದು ತೀರ್ಮಾನಿಸಿಲ್ಲ. ಗೌರವವಿಲ್ಲದ ಕಡೆಗೆ ನಾನು ಹೋಗುವುದೂ ಇಲ್ಲ. ಗೌರವ ನೀಡದ ಪಕ್ಷಗಳನ್ನು ನಾನು ಸೇರುವುದೂ ಇಲ್ಲ. ಪಕ್ಷಗಳನ್ನು ಸೇರುವುದರಿಂದ ನನಗೆ ಒಳ್ಳೆಯದಾಗಬಹುದು. ಆದರೆ, ನಾನು ನನಗಷ್ಟೇ ಒಳ್ಳೆಯದಾಗಬೇಕೆಂದು ಭಾವಿಸಿಲ್ಲ. ನನ್ನನ್ನು ನಂಬಿರುವ ಬೆಂಬಲಿರು, ಅಭಿಮಾನಿಗಳು, ಕಾರ್ಯರ್ತರಿಗೂ ಒಳ್ಳೆಯದಾಗಬೇಕೆಂದು ಬಯಸಿರುವವಳು ನಾನು. ಅವರಿಗೆ ಒಳ್ಳೆಯ ಸ್ಥಾನ ಹಾಗೂ ಗೌರವಗಳು ಸಿಗಬೇಕು. ನಾನು ಪ್ರತಿನಿಧಿಸುತ್ತಿರುವ ಜಿಲ್ಲೆಗೆ ಒಳ್ಳೆಯದಾಗಬೇಕು. ಅವರು ನನಗೆ ಖಚಿತ ಭರವಸೆ ನೀಡಬೇಕು. ಸುಮ್ಮನೇ ಭರವಸೆ ನೀಡಿ ಜನರಿಗೆ ವಂಚನೆ ಮಾಡಬಾರದು' ಎಂದು ಅವರು ಹೇಳಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿರುವುದು ನನ್ನ ಕ್ಷೇತ್ರ
ನನಗೆ ಎಲ್ಲಕ್ಕಿಂತ ಮುಖ್ಯವಾಗಿರುವುದು ನನ್ನ ಕ್ಷೇತ್ರ. ಅದಕ್ಕೆ ನಿಮ್ಮಿಂದ ಏನು ಮಾಡಲು ಸಾಧ್ಯವಾಗುತ್ತದೆ. ನೀವು ಅದಕ್ಕೆ ಏನು ನೀಡುತ್ತೀರಾ. ನಿಮ್ಮ ಪಕ್ಷಕ್ಕೆ ನಾನು ಸೇರಿದ ಮೇಲೆ ನನ್ನ ಜನರಿಗೆ ಏನು ಮಾಡುತ್ತೀರಾ ಎಂಬುದರ ಬಗ್ಗೆ ಹೇಳಿ. ನಿಜವಾಗಿ ಭರವಸೆ ಕೊಡಿ. ಆ ನಂತರ ವಿಚಾರಿಸಿ ನಾನು ನಿಮ್ಮ ಪಕ್ಷಕ್ಕೆ ಸೇರುತ್ತೇನೆ ಎಂದು ಆ ನಾಯಕರಿಗೆ ತಿಳಿಸಿದ್ದಾಗಿ ಸುಮಲತಾ ತಿಳಿಸಿದ್ದಾರೆ.

ಗೌರವ ಕೊಡುವ ಪಕ್ಷಕ್ಕೆ ಸೇರುತ್ತೇನೆ
ಮಂಡ್ಯ ಜಿಲ್ಲೆ ನನಗೆ ಮುಖ್ಯ. ಅದರ ಅಭಿವೃದ್ಧಿಗಾಗಿ ನಿರ್ಧಿಷ್ಟ ಪ್ರಣಾಳಿಕೆ ನನಗೆ ಕೊಡಬೇಕು. ನನ್ನ ಅಭಿಮಾನಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ಜೊತೆ ಕರೆದುಕೊಂಡು ಹೋಗುವ ಹಾಗೂ ನನ್ನ ಕಾರ್ಯಗಳನ್ನು ಗೌರವದಿಂದ ಕಾಣುವ, ಸ್ವಾಗತಿಸುವ ಪಕ್ಷಕ್ಕೆ ನಾನು ಸೇರ್ಪಡೆಯಾಗುತ್ತೇನೆ ಎಂದು
ಮುಖ್ಯವಾಗಿ ನನ್ನ ಕ್ಷೇತ್ರಕ್ಕೆ ಏನು ಕೊಡುತ್ತೀರಾ. ನಾನು ನಿಮ್ಮ ಪಕ್ಷ ಸೇರಿದರೆ ಜನಪರವಾಗಿ ಏನು ಮಾಡುತ್ತೀರಾ ಎಂಬ ಬಗ್ಗೆ ಖಚಿತ ಭರವಸೆ ಕೊಡಿ. ಆಗ ನಾನು ನಿಮ್ಮ ಪಕ್ಷ ಸೇರುತ್ತೇನೆ ಎಂದಿದ್ದೇನೆ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ನಿರ್ದಿಷ್ಟಪ್ರಣಾಳಿಕೆ ಹೊಂದಿರುವ, ನನ್ನ ಬೆಂಬಲಿಗರು, ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ಹೋಗುವ ಹಾಗೂ ನಾನು ಮಾಡುವ ಕೆಲಸವನ್ನು ಗೌರವದಿಂದ ಸ್ವಾಗತಿಸುವ ಪಕ್ಷವನ್ನು ಸೇರುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಬಿಜೆಪಿ ಬೆಂಬಲ ನೆನಪಿಸಿಕೊಂಡ ಸುಮಲತಾ
ಇದೇ ವೇಳೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಬೆಂಬಲವನ್ನೂ ಸುಮಲತಾ ನೆನಪಿಸಿಕೊಂಡರು. ನನಗೆ ಬಿಜೆಪಿ ಬೆಂಬಲ ನೀಡಿದ್ದು ಎಲ್ಲರಿಗೂ ತಿಳಿದ ವಿಚಾರ. ಬಿಜೆಪಿ ನನಗೆ ಯಾವುದೇ ಷರತ್ತನ್ನು ಇಟ್ಟಿರಲಿಲ್ಲ. ಜಯಗಳಿಸಿದ ನಂತರ ಪಕ್ಷ ಸೇರಬೇಕೆಂದು ಬಿಜೆಪಿ ಎಂದೂ ಒತ್ತಾಯಿಸಿಲ್ಲ. ಆ ಚುನಾವಣೆಯಲ್ಲಿ ನನ್ನ ಹಿಂದೆ ನಿಂತು ಬೆಂಬಲಿಸಿದವರಿಗೆ ಅನುಕೂಲ ಮಾಡಿ ಕೊಡಿ ಎಂದು ಯಾವು ಪಕ್ಷದ ಬಾಗಿಲು ತಟ್ಟಿಲ್ಲ. ಇದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದೂ ಸಮಲತಾ ಹೇಳಿದ್ದಾರೆ.












Click it and Unblock the Notifications