B Khata: ಆಸ್ತಿದಾರರಿಗೆ ಬಿಗ್ ಗುಡ್‌ನ್ಯೂಸ್ ಕೊಟ್ಟ ಸರ್ಕಾರ: ಬಿ ಖಾತಾ ಬಿಗ್ ಅಪ್ಡೇಟ್ಸ್!
B Khata Big Updates: ಬಿ ಖಾತಾಗೆ ಸಂಬಂಧಿಸಿದಂತೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಬಂದಿದೆ. ಕರ್ನಾಟಕದಲ್ಲಿ ಅನಧಿಕೃತ ಹಾಗೂ ರೆವಿನ್ಯೂ ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಒಂದು ಬಾರಿ ಬಿ ಖಾತಾ ನೀಡುವ ವ್ಯವಸ್ಥೆಯನ್ನು ಮಾಡಿದೆ. ರಾಜ್ಯದಲ್ಲಿ 40ರಿಂದ 45 ಲಕ್ಷ ಆಸ್ತಿಗಳಿಗೆ ಒಂದು ಬಾರಿ ಬಿ ಖಾತಾ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಆದರೆ, ಬಿ ಖಾತಾ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ಮೂರು ತಿಂಗಳು ಗಡುವು ನಿಗದಿ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿ ಖಾತಾಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಯನ್ನು ನೀಡಿದ್ದರು. ಇದೀಗ ಬಿ ಖಾತಾ ಆಸ್ತಿದಾರರಿಗೆ ನೀಡಲಾಗಿದ್ದ ಗಡುವು ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.
ಕರ್ನಾಟಕದಲ್ಲಿ ಅನಧಿಕೃತ ಆಸ್ತಿಗಳಿಗೆ ಒಂದು ಬಾರಿ ಬಿ ಖಾತಾ ವ್ಯಾಪ್ತಿಗೆ ತರುವ ಬಗ್ಗೆ ರಾಜ್ಯ ಸರ್ಕಾರವು ಪ್ರಮುಖ ನಿರ್ಧಾರವನ್ನು ಮಾಡಿತ್ತು. ರಾಜ್ಯ ಸರ್ಕಾರ ಬಿ ಖಾತಾ ಪಡೆದುಕೊಳ್ಳುವುದಕ್ಕೆ 3 ತಿಂಗಳ ಗಡುವು ನಿಗದಿ ಮಾಡಿತ್ತು. ಇದೀಗ ಆ ಗಡುವು ಮುಕ್ತಾಯವಾಗುತ್ತಾ ಬರುತ್ತಿದ್ದು. ಇದೀಗ ಮತ್ತೊಂದು ಪ್ರಮುಖ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಬಿ ಖಾತಾ ಹಾಗೂ ಇ ಖಾತಾಗೆ ಸಂಬಂಧಿಸಿದಂತೆ ಸರ್ಕಾರದ ಮೂಲಗಳಿಂದ ಮತ್ತೊಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.

ಹೌದು ಎಲ್ಲಾ ಅನಧಿಕೃತ ಆಸ್ತಿಗಳಿಗೂ ಒಂದು ಬಾರಿ ಬಿ ಖಾತಾ ನೀಡಿ ಇಲ್ಲಿಯ ವರೆಗೆ ಟ್ಯಾಕ್ಸ್ ತುಂಬಿಸಿಕೊಂಡು ಮುಂದೆ ರಾಜ್ಯದಲ್ಲಿ ಯಾವುದೇ ಅನಧಿಕೃತ ಆಸ್ತಿಗಳು ಸೃಷ್ಟಿಯಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರು. ಆದರೆ, ಬಿ ಖಾತಾಗೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತವಾಗಿ ಯಾವುದೇ ಗಡುವು ನಿಗದಿ ಮಾಡಿಲ್ಲ ಎಂದು ಹೇಳಲಾಗಿದೆ. ಹೌದು ಬಿ ಖಾತಾಗೆ ಸಂಬಂಧಿಸಿದಂತೆ ಎಲ್ಲವನ್ನೂ ಬೇಗ ಮುಗಿಸಿ ಎಂದು ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ಬಿ ಖಾತಾ ಅರ್ಜಿಗಳನ್ನು ಸ್ವೀಕರಿಸಲು ಹಾಗೂ ವಿಲೇವಾರಿ ಮಾಡಲು ಯಾವುದೇ ಗಡುವು ನಿಗದಿ ಮಾಡಿಲ್ಲ ಎಂದು ಹೇಳಲಾಗಿದೆ.
ರಾಜ್ಯದಲ್ಲಿ 2025ರ ಫೆಬ್ರವರಿ 10 ರಿಂದ ನಮೂನೆ 3/ಎ ಖಾತೆಗಾಗಿ ಅರ್ಜಿಗಳನ್ನು ನೀಡಲಾಗುತ್ತಿದೆ. ಈಗಾಗಲೇ ಸಾವಿರಾರು ಆಸ್ತಿ ಮಾಲೀಕರು ನಮೂನೆ 3/ಎ ಬಿ ಖಾತೆಗಳನ್ನು ಪಡೆದುಕೊಂಡಿದ್ದಾರೆ.
ಬಿ-ಖಾತಾ ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳ ವಿವರ
* ಸ್ವತ್ತಿನೊಂದಿಗೆ ಮಾಲೀಕರ ಫೋಟೋ
* ಆಧಾರ್ ಕಾರ್ಡ್
* ಮಾಲೀಕರ ಪಾಸ್‌ಪೋರ್ಟ್ ಅಳತೆಯ ಫೋಟೋ
* ಕೈ ಬರಹದ ನಮೂನೆ -3 ಪ್ರತಿ
* ಇ.ಸಿ.ಪ್ರತಿ
* 2015-16ರಿಂದ ಚಾಲ್ತಿ ಅಥವಾ ಪ್ರಸಕ್ತ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿರುವ ಎಸ್‌ಎಎಸ್ ಫಾರಂ ಮತ್ತು ಚಲನ್ ಸಲ್ಲಿಸಬೇಕು.
* ಭೂ ಪರಿವರ್ತನೆ ಆದೇಶ ಪ್ರತಿ
* ಹಕ್ಕುಪತ್ರ - ನಿವೇಶನ ಹಂಚಿಕೆ ಪ್ರತಿ
* ನೀರಿನ ತೆರಿಗೆ ಪಾವತಿ ಚಲನ್
* ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪ್ರತಿ
* ಗ್ರಾಮ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದರೆ ದಿಶಾಂಕ್ ಆ್ಯಪ್ ಪ್ರತಿ
* ವಿದ್ಯುತ್ ಬಿಲ್‌ನ ಪ್ರತಿ












Click it and Unblock the Notifications