ಬೇಸಿಗೆ ರಜೆ ಅವಧಿಗೆ ಅನುಕೂಲವಾಗುವಂತೆ ರಾಜ್ಯದ 1ರಿಂದ 8ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ದೊಡ್ಡ ಶುಭ ಸುದ್ದಿ
ಬೆಂಗಳೂರು, ಮಾರ್ಚ್, 08: ಕರ್ನಾಟಕದಲ್ಲಿ ಶಲಾ ಮಕ್ಕಳಿಗೆ ಹಲವು ಕಾರಣಗಳಿಂದ ರಜೆ ಸೇರಿದಂತೆ ವಿವಿದ ವಿಚಾರಕ್ಕೆ ಸರ್ಕಾವು ಆಗಾಗ ಗುಡ್ ನ್ಯೂಸ್ ನೀಡುತ್ತಲ್ಲಿರುತ್ತದೆ. ಹಾಗೆಯೇ ಇದೀಗ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ 31 ಜಿಲ್ಲೆಗಳ 223 ತಾಲ್ಲೂಕುಗಳಲ್ಲಿನ 1-8ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶುಭಸುದ್ದಿಯೊಂದನ್ನು ನೀಡಿದೆ. ಇಲ್ಲಿದೆ ನೋಡಿ ಮಾಹಿತಿ.
2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ವೇಳೆ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಅನುಷ್ಠಾನಗೊಳಿಸಿ ವಿತರಣೆ ಮಾಡಿರುವ ಸಂಬಂಧ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಪಿ.ಎಂ.ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆಯಡಿ ಪಿಎಬಿ ಅನುಮೋದನೆಯಂತೆ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಶಾಲೆಗಳಿಗೆ ಇದು ಅನ್ವಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸಂಬಂಧಿಸಿದಂತೆ ಕೇಂದ್ರದ ಪಾಲಿನ ಅನುದಾನ 2958.87 ಲಕ್ಷ ರೂಪಾಯಿ, ರಾಜ್ಯದ ಪಾಲಿನ ಅನುದಾನ 1742.74 ಲಕ್ಷ ರೂಪಾಯಿ ಹಾಗೂ ರಾಜ್ಯದ ಹೆಚ್ಚುವರಿ ಅನುದಾನ 2692.17 ಲಕ್ಷ ರೂಪಾಯಿ ಸೇರಿ ಒಟ್ಟಾರೆ 7393.78 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿರುತ್ತದೆ.
ಉಲ್ಲೇಖಿತ (3) ರ ಆದೇಶದಂತೆ ಜಿಲ್ಲಾ ಮತ್ತು ತಾಲ್ಲೂಕುವಾರು ಈಗಾಗಲೇ ಸಲ್ಲಿಸಿರುವ ಅನುದಾನ ಬೇಡಿಕೆ ಮತ್ತು ಹಂಚಿಕೆ ಪಟ್ಟಿಯಂತೆ ಲೆಕ್ಕ ಶೀರ್ಷಿಕವಾರು ಅನುದಾನ ನಿಗದಿಪಡಿಸಿದ್ದು, ಬಿಡುಗಡೆಗೊಳಿಸಿ ಬಳಸುವಂತೆ ಸೂಚಿಸಲಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಏನು?: ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, 50 ಪ್ರೌಢಶಾಲೆಗಳನ್ನು ಕಾಲೇಜ್‌ಗಳಾಗಿ ಉನ್ನತೀಕರಿಸಲಾಗುವುದು. ಜೊತೆಗೆ, 500 ಹೊಸ ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸಿ, 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಬಜಟ್‌ನಲ್ಲಿ ಘೋಷಿಸಿದ್ದಾರೆ.
ವಿದ್ಯಾರ್ಥಿಗಳ ವಸತಿ ಸೌಕರ್ಯವನ್ನು ಸುಧಾರಿಸಲು ಹಾಸ್ಟೆಲ್‌ಗಳ ದುರಸ್ತಿಗೆ 25 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅಥಣಿಯಲ್ಲಿ ಹೊಸ ಕೃಷಿ ಕಾಲೇಜೊಂದನ್ನು ಸ್ಥಾಪಿಸುವ ಮೂಲಕ ಕೃಷಿ ಶಿಕ್ಷಣಕ್ಕೂ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ಶಾಲೆಗೆ ಹೋಗುವ 53 ಲಕ್ಷ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವ ಯೋಜನೆಯನ್ನು ಸರ್ಕಾರ ವಿಸ್ತರಿಸಿದೆ. ಈ ಹಿಂದೆ ವಾರದಲ್ಲಿ ಎರಡು ದಿನ ನೀಡಲಾಗುತ್ತಿದ್ದ ಈ ಸೌಲಭ್ಯವನ್ನು ಇದೀಗ 6 ದಿನಗಳಿಗೆ ಹೆಚ್ಚಿಸಲಾಗಿದೆ. ಅಜೀಮ್ ಪ್ರೇಮ್ ಜೀ ಫೌಂಡೇಶನ್ ಸಹಯೋಗದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದ್ದು, ಮಕ್ಕಳ ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸುವುದು ಇದರ ಉದ್ದೇಶ ಆಗಿದೆ.
ರಾಜ್ಯ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. 10ನೇ ತರಗತಿಯವರೆಗೆ ಕಲಿಕಾ ಚಿಲುಮೆ ಕಾರ್ಯಕ್ರಮ ಮತ್ತು 3-5ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ-ಗಣಕ ಯೋಜನೆ ಜಾರಿಗೆ ಬರಲಿದೆ. ಓದು ಕರ್ನಾಟಕ ಯೋಜನೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸಂಖ್ಯಾಶಾಸ್ತ್ರದ ಜ್ಞಾನ ಹೆಚ್ಚಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.












Click it and Unblock the Notifications