Breaking; ಭಾರತ್ ಜೋಡೋ ಯಾತ್ರೆಯಲ್ಲೇ, ಕಾಂಗ್ರೆಸ್ ನಾಯಕರ ಮತದಾನ
ಬೆಂಗಳೂರು, ಅಕ್ಟೋಬರ್ 17; ಭಾರತ್ ಜೋಡೋ ಯಾತ್ರೆಯ ನಡುವೆಯೇ ಸೋಮವಾರ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಕಡೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ-ಆಂಧ್ರ ಪ್ರದೇಶ ಗಡಿಯ ಸಂಗನಕಲ್ಲುವಿನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡವರು ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಗಲಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಸೇರಿದಂತೆ ಇತರ ನಾಯಕರು ಈ ಮತಗಟ್ಟೆಯಲ್ಲಿ ಮತದಾನ ಮಾಡಲಿದ್ದಾರೆ.

ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕದ ಮತ್ತೊಂದು ಮತದಾನ ಕೇಂದ್ರವಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಈ ಮತಗಟ್ಟೆಯಲ್ಲಿ ಮತದಾನ ಮಾಡುವರು.
ಹೇಗೆ ಮತದಾನ ಮಾಡಬೇಕು?; ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಕಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇದ್ದಾರೆ. ಕಾಂಗ್ರೆಸ್ ಹೇಗೆ ಮತದಾನ ಮಾಡಬೇಕು? ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ.
Important information
— Karnataka Congress (@INCKarnataka) October 16, 2022
Congress President election voting process
-The ballot paper contains the names of 2 candidates.
- Tick mark ☑️ next to the name of the candidate you are voting for.
- Vote will not count if any other mark or number is written. pic.twitter.com/v5sRTjzA7W
ಬ್ಯಾಲೆಟ್ ಪೇಪರ್‌ನಲ್ಲಿ ಎರಡು ಹೆಸರುಗಳು ಇರುತ್ತವೆ. ಹೆಸರು ಇರುವ ಬಾಕ್ಸ್ ಮುಂದೆ ಟಿಕ್ ಮಾರ್ಕ್ ಮಾಡಬೇಕು. ಬೇರೆ ಯಾವುದೇ ಚಿನ್ಹೆಗಳನ್ನು ಬಳಕೆ ಮಾಡಿದರೆ ಮತಗಳನ್ನು ಸಿಂಧು ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸೋಮವಾರ ಸಂಜೆಯ ತನಕ ಗೌಪ್ಯ ಮತದಾನ ನಡೆಯಲಿದೆ. ಬಳಿಕ ಬ್ಯಾಲೆಟ್ ಪೇಪರ್‌ಗಳನ್ನು ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಕ್ಟೋಬರ್ 17ರಂದು ಮತಗಳ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ 2000ದಲ್ಲಿ ಮತದಾನ ನಡೆದಿತ್ತು. ಅದಾದ ಬಳಿಕ ಅವಿರೋಧ ಆಯ್ಕೆಗಳು ನಡೆಯುತ್ತಿದ್ದವು. ಈಗ 2022ರಲ್ಲಿ ಮತ್ತೆ ಮತದಾನ ನಡೆಯುತ್ತಿದೆ. ಕಾಂಗ್ರೆಸ್ ಸಂವಿಧಾನದ 18ನೇ ವಿಧಿಯ ಮೂಲಕ ಚುನಾವಣೆ ನಡೆಯುತ್ತದೆ. ಸುಮಾರು 9,100 ಜನರು ಮತದಾನ ಮಾಡುತ್ತಾರೆ.
ಪ್ರತಿ ರಾಜ್ಯಗಳ ಕಾಂಗ್ರೆಸ್ ಕಚೇರಿಯಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ಭಾರತ್ ಜೋಡೋ ಯಾತ್ರೆ ಇರುವುದರಿಂದ ಎರಡು ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.












Click it and Unblock the Notifications