Bharat Gaurav Train: ಶಿರಡಿ, ಶ್ರೀಶೈಲ ಸೇರಿ 8 ಕ್ಷೇತ್ರಗಳಿಗೆ ಟೂರ್ ಪ್ಯಾಕೇಜ್ ಘೋಷಣೆ: ದರ, ವೇಳಾಪಟ್ಟಿ
ಬೆಂಗಳೂರು, ಸೆಪ್ಟಂಬರ್ 10: ಕೇಂದ್ರ ರೈಲ್ವೆ ಇಲಾಖೆಯು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೈಲ್ವೆ ಮೂಲ ಸೌಕರ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ವಿದ್ಯುದೀಕರಣ, ಟ್ರಾಕ್ ದ್ವಿಪಥಗೊಳಿಸುವುದು, ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವುದು ಸೇರಿದಂತೆ ಅನೇಕ ಸುಧಾರಣೆ ತಂದಿದೆ. ಈ ಮಧ್ಯೆ ಹಬ್ಬಗಳ ಸಂದರ್ಭದಲ್ಲಿ ವಿಶೇಷ ರೈಲು ಕಾರ್ಯಾಚರಣೆ ಮಾಡುವ ಇಲಾಖೆ ಸಹಕಾರದಲ್ಲಿ 'ಭಾರತ್ ಗೌರವ್ ರೈಲು' ಇದೀಗ 'ಶಿವ ಸಾಯಿ ಯಾತ್ರೆ' ಎಂಬ ಹೊಸ ಪ್ರವಾಸ ಕಾರ್ಯಕ್ರಮ ರೂಪಿಸಿದೆ.
ಕೇಂದ್ರದ ಸಹಭಾಗಿತ್ವದಲ್ಲಿ 'ಭಾರತ್ ಗೌರವ್' ರೈಲು ಸಂಚಾರವನ್ನು ಮೊತ್ತಮೊದಲಿಗೆ ಆರಂಭಿಸಿದ 'ಸೌತ್ ಸ್ಟಾರ್ ರೈಲು' ಕಂಪನಿಯು ನವ ಬೃಂದಾವನ ಹಾಗೂ ಶ್ರೀಶೈಲ ಸೇರಿದಂತೆ 8 ಧರ್ಮಕ್ಷೇತ್ರಗಳಿಗೆ 'ಶಿವ ಸಾಯಿ ಯಾತ್ರೆ' ಎಂಬ ಹೊಸ ಪ್ರವಾಸ ಕಾರ್ಯಕ್ರಮ ರೂಪಿಸಿದೆ. ಈ ಪ್ರವಾಸ ಕಾರ್ಯಕ್ರಮ ಅಕ್ಟೋಬರ್ 2ರಿಂದ ಈ ಶುರುವಾಗಲಿದೆ.

11 ದಿನಗಳ ಪ್ರವಾಸ
ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬೆನ್ನುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಒಟ್ಟು 11 ದಿನಗಳ ಈ ಪ್ರವಾಸ ಇದಾಗಿದೆ. ಪ್ರವಾಸಿಗರು ರೈಲಿನಲ್ಲಿ ತೆರಳಿ ನವ ಬೃಂದಾವನ, ಮಂತ್ರಾಲಯ, ಪಂಡರಾಪುರ, ಶಿರಡಿ, ತ್ರಯಂಬಕೇಶ್ವರ, ಭೀಮಾಶಂಕರ, ಗುಷ್ನೇಶ್ವರ ಹಾಗೂ ಶ್ರೀಶೈಲಂ ಧರ್ಮಕ್ಷೇತ್ರಗಳ ದರ್ಶನ ಮಾಡಬಹುದು. ಇದರೊಂದಿಗೆ ಎಲ್ಲೋರಾ ಗುಹೆಗಳ ಭೇಟಿಯನ್ನೂ ಒಳಗೊಂಡಿದೆ ಎಂದು 'ಸೌತ್ ಸ್ಟಾರ್' ಮುಖ್ಯಸ್ಥರು ಅಧಿಕೃತ ಮಾಹಿತಿ ನೀಡಿದ್ದಾರೆ.
ಸಂಚಾರ ಮಾರ್ಗಗಳ ವಿವರ
'ಭಾರತ್ ಗೌರವ ರೈಲು' ಬಂಗಾರಪೇಟೆಯಿಂದ ಹೊರಡಲಿದೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬೆಂಗಳೂರಿನ ವೈಟ್ ಫೀಲ್ಡ್, ಯಲಹಂಕ, ಧರ್ಮಾವರಂ, ಅನಂತಪುರ, ಬಳ್ಳಾರಿ, ಹೊಸಪೇಟೆಯಲ್ಲೂ ರೈಲು ಹತ್ತಲು ಅವಕಾಶ ಇದೆ.
ಆನ್ ಬೋರ್ಡ್ ಘೋಷಣಾ ವ್ಯವಸ್ಥೆ, ನಿಯೋಜಿತ ಕೋಚ್ ಭದ್ರತಾ ಸಿಬ್ಬಂದಿ, ಟೂರ್ ಮ್ಯಾನೇಜರ್ ಗಳು, ಪ್ರಯಾಣ ವಿಮೆ, ಹೋಟೆಲ್ ವ್ಯವಸ್ಥೆ, ಸೈಟ್ ಸೀಯಿಂಗ್, ಅನಿಯಮಿತ ದಕ್ಷಿಣ ಭಾರತದ ಊಟ ಇತ್ಯಾದಿ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. ಈ ಪ್ರವಾಸಕ್ಕೆ ಎಲ್ ಟಿ ಸಿ/ಎಲ್ ಎಫ್ ಸಿ ಅನ್ವಯವಾಗಲಿದೆ. ಭಾರತೀಯ ರೈಲ್ವೆಯ ಶೇಕಡಾ 33ರಷ್ಟು ಸಹಾಯಧನ ಲಭ್ಯವಾಗಲಿದೆ ಎಂದು 'ಸೌತ್ ಸ್ಟಾರ್' ಸದಸ್ಯ ವಿಘ್ನೇಶ್ ಅವರು ವಿವರಿಸಿದರು.
ಪ್ರವಾಸ ಪ್ರಯಾಣದ ದರವೆಷ್ಟು?
ಈ ರೈಲಿನ ಸ್ಲೀಪರ್ ವರ್ಗಕ್ಕೆ 27,700 ರೂಪಾಯಿ, 3ಎಸಿ 37,000 ರೂಪಾಯಿ, 2ಎಸಿ ಡೀಲಕ್ಸ್ 43,000 ರೂಪಾಯಿ, ಎಸಿ ಲಕ್ಷುರಿ 47,900 ರೂಪಾಯಿ ಇದೆ. ಈ ಪ್ರವಾಸ ಬಯಸುವ ಆಸಕ್ತರು 93550 21516 ಸಂಪರ್ಕಿಸಬೇಕು. ಇಲ್ಲವೇ ಆನ್ ಲೈನ್ ನಲ್ಲಿ www.tourtimes.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಬುಕಿಂಗ್ ಮಾಡಬಹುದು. ದೇಶದ ಮುಂಚೂಣಿ ಪ್ರವಾಸಿ ರೈಲು ನಿರ್ವಾಹಕ ಸಂಸ್ಥೆಯಾದ ಟೂರ್ ಟೈಮ್ಸ್ ಸಹಭಾಗಿತ್ವದಲ್ಲಿ ಈ ಟೂರ್ ಪ್ಯಾಕೇಜ್ ಘೋಷಿಸಲಾಗಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications