IAS: ಐಎಎಸ್ ವರ್ಗಾವಣೆ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ವರ್ಗಾವಣೆ
ಬೆಂಗಳೂರು, ಜನವರಿ 25: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. 10 ಐಎಎಸ್ ಅಧಿಕಾರಿಗಳನ್ನು ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆಗೊಳಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ, ಮಂಡ್ಯ ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಹೊಣೆಯನ್ನು ನೀಡಿ ಆದೇಶವನ್ನು ಹೊರಡಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಮಹಾಂತೇಶ್ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳು
* ಡಾ. ಶಿವ ಶಂಕರ ಎನ್. ಐಎಎಸ್ (ಕೆಎನ್: 2012), ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ತತ್ ಕ್ಷಣದಿಂದ ಮುತ್ತು ಮುಂದಿನ ಆದೇಶದ ತನಕ ವರ್ಗಾವಣೆ. ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಂಗಳೂರು ಹುದ್ದೆಗೆ ವರ್ಗಾವಣೆ. ಈ ಹುದ್ದೆಯಲ್ಲಿದ್ದ ಮಹಾಂತೇಶ್ ಬೀಳಗಿ ವರ್ಗಾವಣೆ.
* ಮಹಾಂತೇಶ್ ಬೀಳಗಿ ಐಎಎಸ್ (ಕೆಎನ್: 2012), ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತತ್‌ಕ್ಷಣದಿಂದ ಮುತ್ತು ಮುಂದಿನ ಆದೇಶದ ತನಕ ವರ್ಗಾವಣೆ. ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ಖನಿಜ ನಿಗಮ ಹುದ್ದೆಗೆ ವರ್ಗಾವಣೆ. ಈ ಹುದ್ದೆಯಲ್ಲಿದ್ದ ಜಯವಿಭವ ಸ್ವಾಮಿ ವರ್ಗಾವಣೆ.
* ಸ್ವರೂಪ್ ಟಿ. ಕೆ. ಐಎಎಸ್ (ಕೆಎನ್: 2012) ಧಾರವಾಡ ಜಿಲ್ಲಾ ಪಂಚಾಯಿತಿ ಸಿಇಒ ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ. ನಿರ್ದೇಶಕರು (ಇ-ಆಡಳಿತ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಹುದ್ದೆಗೆ ನೇಮಕ. ಈ ಹುದ್ದೆಯಲ್ಲಿದ್ದ ಡಾ. ನಂದಿನಿದೇವಿ ಕೆ. ಬಿಡುಗಡೆ.
* ಡಾ. ಕುಮಾರ ಐಎಎಸ್ (ಕೆಎನ್: 2015). ಜಿಲ್ಲಾಧಿಕಾರಿಗಳು ಮಂಡ್ಯ ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಹೆಚ್ಚುವರಿ ಹುದ್ದೆ. ಈ ಹುದ್ದೆಯಲ್ಲಿದ್ದ ತನ್ವೀರ್ ಆಸಿಫ್ ವರ್ಗಾವಣೆ.
* ಜಯವಿಭವಸ್ವಾಮಿ ಐಎಎಸ್ (ಕೆಎನ್: 2016) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಖನಿಜ ನಿಗಮ, ಬೆಂಗಳೂರು ತತ್ ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ. ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ಹುದ್ದೆಗೆ ನೇಮಕ. ಈ ಹುದ್ದೆಯಲ್ಲಿದ್ದ ಕನಗವಲ್ಲಿ ಎಂ. ಬಿಡುಗಡೆ.
* ಶೇಕ್ ತನ್ವೀರ್ ಆಸಿಫ್ ಐಎಎಸ್ (ಕೆಎನ್: 2017) ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ತತ್ ಕ್ಷಣದಿಂದ ಮುತ್ತು ಮುಂದಿನ ಆದೇಶದ ತನಕ ವರ್ಗಾವಣೆ. ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ ಹುದ್ದೆಗೆ ನೇಮಕ. ಈ ಹುದ್ದೆಯಲ್ಲಿದ್ದ ಅಸಾದ್ ಉರ್ ರೆಹಮಾನ್ ಶರೀಫ್ ವರ್ಗಾವಣೆ.
* ದ್ವಿಗ್ವಿಜಯ್ ಬೋಡ್ಕೆ ಐಎಎಸ್ (ಕೆಎನ್: 2018) ರಾಮನಗರ ಜಿಲ್ಲಾ ಪಂಚಾಯಿತಿ ಸಿಇಒ ತತ್ ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ. ನಿರ್ದೇಶಕರು (ಐಟಿ) ಕೆಎಸ್ಆರ್‌ಟಿಸಿ, ಬೆಂಗಳೂರು ಹುದ್ದೆಗೆ ನೇಮಕ.
* ಪಾಟೀಲ್ ಭುವನೇಶ್ ದೇವಿದಾಸ್ ಐಎಎಸ್ (ಕೆಎನ್: 2018) ಆಯುಕ್ತರು, ಕಲಬುರಗಿ ಮಹಾನಗರ ಪಾಲಿಕೆ ತತ್ ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಧಾರವಾಡ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ನೇಮಕ. ಈ ಹುದ್ದೆಯಲ್ಲಿದ್ದ ಸ್ವರೂಪ್ ಟಿ. ಕೆ. ವರ್ಗಾವಣೆ.
* ಅನ್‌ಮೋಲ್ ಜೈನ್ ಐಎಎಸ್ (ಕೆಎನ್: 2020) ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ (ವಿಜಲೆನ್ಸ್), ಬೆಂಗಳೂರು ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ. ರಾಮನಗರ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ನೇಮಕ.
* ಶಿಂಧೆ ಅವಿನಾಶ್ ಸಂಜೀವನ್ ಐಎಎಸ್ (ಕೆಎನ್: 2020) ಡೆಪ್ಯೂಟಿ ಕಮೀಷನರ್ (ಆಡಳಿತ) ಕಲಬುರಗಿ ಮಹಾನಗರ ಪಾಲಿಕೆ ಮುಂದಿನ ಆದೇಶದ ತನಕ ವರ್ಗಾವಣೆ. ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಕ.












Click it and Unblock the Notifications