• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಆಗಸ್ಟ್ ಮೊದಲ ವಾರ ವಾಡಿಕೆಗಿಂತ ಶೇಕಡ 400 ಕ್ಕಿಂತ ಹೆಚ್ಚು ಮಳೆ

|
Google Oneindia Kannada News

ಬೆಂಗಳೂರು, ಆಗಸ್ಟ್ 9: ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಕೂಡ ಎದುರಾಗಿದೆ. ರಾಜ್ಯದ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳು ಕೂಡ ತುಂಬಿದ್ದು, ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ರಾಜಧಾನಿ ಬೆಂಗಳೂರು ಕೂಡ ಆಗಸ್ಟ್ ಮೊದಲ ವಾರದಲ್ಲಿ ದಾಖಲೆ ಮಳೆಗೆ ಸಾಕ್ಷಿಯಾಗಿದೆ.

Recommended Video

   Bengaluru Rain ಆಗಸ್ಟ್ ತಿಂಗಳಿನಲ್ಲಿ ಇಷ್ಟೊಂದು ಮಳೆ ಇತಿಹಾಸದಲ್ಲೇ ಆಗಿಲ್ಲ | OneIndia Kannada

   ಆಗಸ್ಟ್ 1ರಿಂದ 8ರ ನಡುವೆ ಬೆಂಗಳೂರಿನಲ್ಲಿ ಸಾಮಾನ್ಯವಾಗಿ 28 ಮಿಲಿ ಮೀಟರ್ ವಾಡಿಕೆ ಮಳೆಯಾಗುತ್ತದೆ ಆದರೆ ಈ ಬಾರಿ ಇದೇ ವೇಳೆಯದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯ 143 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ ವಾಡಿಕೆ ಮಳೆಗಿಂದ ಶೇಕಡಾ 410ರಷ್ಟು ಹೆಚ್ಚು ಮಳೆ ಬಿದ್ದಿದೆ. ಭಾರಿ ಮಳೆಯಿಂದ ಬೆಂಗಳೂರಿನ ಬಲವು ಬಡಾವಣೆಗಳು ಜಲಾವೃತವಾಗಿವೆ. ಕರ್ನಾಟಕದ ಹಲವೆಡೆ ನಿರಂತರ ಮಳೆಯಾಗುತ್ತಿರುವುದು ಜನರ ಸಂಕಷ್ಟವನ್ನು ಹೆಚ್ಚಿಸಿದೆ.

   ಶಿವಮೊಗ್ಗ ಜಿಲ್ಲೆಗೆ ಹಳದಿ ಅಲರ್ಟ್; ಭದ್ರಾ ಡ್ಯಾಂ ಒಳಹರಿವು ಹೆಚ್ಚಳಶಿವಮೊಗ್ಗ ಜಿಲ್ಲೆಗೆ ಹಳದಿ ಅಲರ್ಟ್; ಭದ್ರಾ ಡ್ಯಾಂ ಒಳಹರಿವು ಹೆಚ್ಚಳ

   ಬೆಂಗಳೂರಿನ ಮಳೆಗಾಲದ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, "ಮಳೆಗಾಲದಲ್ಲಿ ಸಮಸ್ಯೆಗಳನ್ನು ಕಡಿಮೆ ಮಾಡಲು ಇತರೆ ವಿಚಾರಗಳ ಜೊತೆ ಚರಂಡಿಗಳನ್ನು ಸ್ವಚ್ಛಗೊಳಿಸುವ ಅದೇ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಕಳೆದ ಬಾರಿ ಮಳೆಯಿಂದ ಆದ ಅನಾಹುತ ಮರುಕಳಿಸದಂತೆ ಮಾಡಲು ಚರಂಡಿ ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಿದ್ದೇವೆ. ತ್ಯಾಜ್ಯ ವಸ್ತುಗಳಿಂದ ಚರಂಡಿ ಮುಚ್ಚಿಹೋಗಿರುವ ಕಾರಣ ಪ್ರಮುಖ ರಸ್ತೆಗಳು ಮತ್ತು ಹೊರ ವರ್ತುಲ ರಸ್ತೆಯಲ್ಲಿರುವ ಬಹುತೇಕ ಎಲ್ಲಾ ಚರಂಡಿಗಳನ್ನು ತೆರವುಗೊಳಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

    ಏನಾದರು ಒಂದು ಕಾರಣ ಕೊಡುವ ಬಿಬಿಎಂಪಿ

   ಏನಾದರು ಒಂದು ಕಾರಣ ಕೊಡುವ ಬಿಬಿಎಂಪಿ

   ಪ್ರತಿ ಬಾರಿ ಬೆಂಗಳೂರಿನಲ್ಲಿ ಮಳೆಯಾದಾಗ, ಬಿಬಿಎಂಪಿ ಕಾಮಗಾರಿಗಳನ್ನು ಪೂರ್ಣಗೊಳಿಸದಿರುವುದಕ್ಕೆ ವಿವಿಧ ಕಾರಣಗಳನ್ನು ನೀಡುತ್ತಲೇ ಬರುತ್ತಿದೆ. ಪ್ರತಿ ಬಾರಿ ಸಮಸ್ಯೆಯಾದಾಗಲು ಸರಿಪಡಿಸುವ ಆಶ್ವಾಸನೆ ಮಾತ್ರ ಸಿಗುತ್ತದೆ. ಆದರೆ ಮತ್ತೆ ಮಳೆಯಾದಾಗ ಮತ್ತೊಂದು ಸಮಸ್ಯೆ ಎದುರಾಗಿರುತ್ತದೆ.

   "ನೀರಿನ ಪ್ರವಾಹವನ್ನು 100 ಮಿಲಿ ಮೀಟರ್ ಮಳೆಗೆ ಹೋಲಿಕೆ ಮಾಡಿಗಾಗ ಈ ಬಾರಿ ಮಳೆಯಿಂದ ತೊಂದರೆಗೊಳಗಾದವರ ಸಂಖ್ಯೆ ತೀರಾ ಕಡಿಮೆ. ನಾವು ದ್ವಿತೀಯ ಮತ್ತು ಪ್ರಾಥಮಿಕ ಚರಂಡಿಗಳನ್ನು ಸಾಕಷ್ಟು ಸ್ವಚ್ಛಗೊಳಿಸಿದ್ದೇವೆ ಮತ್ತು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಪ್ರವಾಹ ಸಮಸ್ಯೆ ಕಡಿಮೆಯಾಗಿದೆ" ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

    Breaking: ಬೈಂದೂರು-ಕಾಲು ಸಂಕದಲ್ಲಿ ಜಾರಿ ಬಿದ್ದು ಹೊಳೆ ಪಾಲಾದ ವಿದ್ಯಾರ್ಥಿನಿ Breaking: ಬೈಂದೂರು-ಕಾಲು ಸಂಕದಲ್ಲಿ ಜಾರಿ ಬಿದ್ದು ಹೊಳೆ ಪಾಲಾದ ವಿದ್ಯಾರ್ಥಿನಿ

    ಮುಂದಾಲೋಚನೆ ಇಲ್ಲದ ಅಭಿವೃದ್ಧಿ

   ಮುಂದಾಲೋಚನೆ ಇಲ್ಲದ ಅಭಿವೃದ್ಧಿ

   ತಗ್ಗು ಪ್ರದೇಶಗಳಲ್ಲಿ ಮಾತ್ರ ಪ್ರವಾಹ ಸಂಭವಿಸಿದೆ, ವಸತಿ ಪ್ರದೇಶಗಳಲ್ಲಿ ಮಳೆಯಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

   ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಯೋಜಿತವಲ್ಲದ ಮತ್ತು ಕ್ಷಿಪ್ರ ವಿಸ್ತರಣೆಯಿಂದಾಗಿ ಹೆಚ್ಚಿನ ಕೆರೆಗಳು ಮತ್ತು ಚರಂಡಿಗಳು ಅತಿಕ್ರಮಿಸಲ್ಪಟ್ಟಿವೆ, ಮಳೆ ನೀರು ತನ್ನ ಸ್ವಾಭಾವಿಕ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗದೆ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನುಗ್ಗುವುದರಿಂದ ಪ್ರತಿ ಬಾರಿ ಮಳೆಯಾದಾಗಲೂ ಬೆಂಗಳೂರಿನ ಒಂದಿಲ್ಲೊಂದು ಸಮಸ್ಯೆಗಳು ಅನಾವರಣವಾಗುತ್ತದೆ.

    ರಾಜ್ಯದ ಹಲವೆಡೆ ಭಾರಿ ಮಳೆ

   ರಾಜ್ಯದ ಹಲವೆಡೆ ಭಾರಿ ಮಳೆ

   ಕರ್ನಾಟಕದ ಉಳಿದ ಭಾಗಗಳಲ್ಲಿಯೂ ಅಧಿಕ ಮಳೆಯಾಗಿದೆ. "ಬೇಸಿಗೆಯಲ್ಲೂ ಮುಂಗಾರು ಮಳೆಯಂತೆ ಮಳೆಯಾಗಿದೆ. ಆಗಸ್ಟ್ 3 ರಿಂದ 15 ರವರೆಗೆ ಹೆಚ್ಚಿನ ಮಳೆಯಾಗಲಿದೆ, ಆದ್ದರಿಂದ ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ" ಎಂದು ಕಂದಾಯ ಸಚಿವ ಆರ್ ಅಶೋಕ್ ಸೋಮವಾರ ಹೇಳಿದ್ದಾರೆ.

   ಕರ್ನಾಟಕ ರಾಜ್ಯದ ಅಂಕಿಅಂಶಗಳ ಪ್ರಕಾರ, ರಾಜ್ಯದ ಅಂದಾಜು 70 ಮಿಲಿಯನ್ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ನೆಲೆಸಿರುವ ಬೆಂಗಳೂರಿನಲ್ಲಿ ಜೂನ್ 1 ರಿಂದ ಆಗಸ್ಟ್ 8 ರ ನಡುವೆ 441 ಮಿಮೀ ಮಳೆಯಾಗಿದೆ, ಇದು ಸಾಮಾನ್ಯ ಮಟ್ಟವಾದ 194 ಮಿಮೀಗಿಂತ 127% ಕ್ಕಿಂತ ಹೆಚ್ಚು. ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC).

    ಪ್ರವಾಹ, ಭೂ ಕುಸಿತದಲ್ಲಿ 73 ಮಂದಿ ಸಾವು

   ಪ್ರವಾಹ, ಭೂ ಕುಸಿತದಲ್ಲಿ 73 ಮಂದಿ ಸಾವು

   ಕಂದಾಯ ಸಚಿವ ಅಶೋಕ್ ಮಾತನಾಡಿ, "ಜೂನ್ 1 ರಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ, ಮಳೆಯಿಂದಾಗಿ 500 ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ ಮತ್ತು 8,197 ಜನರನ್ನು ವಿವಿಧ ಭಾಗಗಳಿಂದ ಸ್ಥಳಾಂತರಿಸಲಾಗಿದೆ ಎಂದು ಅಂಕಿ ಅಂಶಗಳು ತೋರಿಸುತ್ತದೆ. ಕರ್ನಾಟಕದಾದ್ಯಂತ ಕನಿಷ್ಠ 79 ಪರಿಹಾರ ಶಿಬಿರಗಳಿವೆ ಮತ್ತು ಪ್ರಸ್ತುತ 7,386 ಜನರು ಅವುಗಳಲ್ಲಿ ಆಶ್ರಯ ಪಡೆದಿದ್ದಾರೆ" ಎಂದು ಹೇಳಿದ್ದಾರೆ.

   ಜೂನ್ 1 ರಿಂದ 1.53 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಹೆಚ್ಚಿನ ಪ್ರದೇಶಗಳು ಮೌಲ್ಯಮಾಪನ ಮಾಡಲಾಗುತ್ತಿದೆ. ಬೆಳೆ ಹಾನಿಯಾದ ಜಮೀನುಗಳ ರೈತರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

   English summary
   Bengaluru received Record Rain In August First week, Between August 1 to 8, received 143 mm of rain as against the normal of 28 mm during the same period of time. Continuous rains across several parts of Karnataka have added to the hardship of the people. revenue minister R Ashoka said that at least 73 people have died in Karnataka from June 1 till date.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X