Bengaluru-Pune Expressway: ಉತ್ತರ ಕರ್ನಾಟಕದ ಈ ಪ್ರದೇಶಗಳಲ್ಲಿ ಭೂಮಿ ಬೆಲೆ ಏರಿಕೆ!
ಕರ್ನಾಟಕದಲ್ಲಿ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಹಾಗೂ ಬೆಂಗಳೂರು- ಪುಣೆ ಎಕ್ಸ್‌ಪ್ರೆಸ್‌ವೇ ಎರಡು ರಿಯಲ್ ಎಸ್ಟೇಟ್‌ಗೆ ಬಂಪರ್ ತರಲಿದೆ ಎನ್ನುವ ಲೆಕ್ಕಾಚಾರ ಜೋರಾಗಿದೆ. ಯಾವುದೇ ಒಂದು ಯೋಜನೆ ಜಾರಿಯಾದರೂ ಅದರಿಂದ ಲಾಭ ನಷ್ಟ ಎರಡೂ ಇರುತ್ತದೆ. ಅದರಲ್ಲೂ ಮೆಟ್ರೋ, ವಿಮಾನ ನಿಲ್ದಾಣ ಹಾಗೂ ಎಕ್ಸ್‌ಪ್ರೆಸ್ ವೇ ಅಂತಹ ಯೋಜನೆಗಳು ಬಂದಾಗ ಜನ ಭೂಮಿ ಕಳೆದುಕೊಳ್ಳುವುದು ಇದೆ. ಆದರೆ ಈ ಯೋಜನೆಗಳಿಂದ ರಿಯಲ್ ಎಸ್ಟೇಟ್‌ಗೆ ಬಂಪರ್ ಬರುವುದು ಹಾಗೂ ಭೂಮಿ ಬೆಲೆ ಗಗನಮುಖಿಯಾಗುವುದು ಇದೆ. ಇದೇ ರೀತಿ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿನ ಭೂಮಿಗೆ ಭರ್ಜರಿ ಬೆಲೆ ಶುರುವಾಗಿದೆ.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣದ ನಿರ್ಮಾಣದ ಬೆನ್ನಲ್ಲೇ ಕರ್ನಾಟಕದ ಕೆಲವು ಪ್ರಮುಖ ಭಾಗಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇದರ ನಡುವೆ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ಮಾರ್ಗಗಳ ಸುತ್ತಮುತ್ತಲಿನ ಪ್ರದೇಶದ ಭೂಮಿಗೂ ಚಿನ್ನದಂತಹ ಬೆಲೆ ಬರಲಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಮೂಲಸೌಕರ್ಯ ಅಭಿವೃದ್ಧಿ ಆಗುತ್ತಿದ್ದಂತೆಯೇ ಆ ಭಾಗದಲ್ಲಿ ಉದ್ಯಮಗಳು ಶುರುವಾಗುತ್ತವೆ. ಅಲ್ಲದೆ ಉದ್ಯಮಗಳಿಂದ ಕೆಲಸ ಹಾಗೂ ಭೂಮಿಗೆ ಬೇಡಿಕೆ ಹೆಚ್ಚಾಗುತ್ತದೆ. ಅದೇ ರೀತಿ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ಭಾಗದಲ್ಲೂ ಭೂಮಿಯ ಬೆಲೆ ಗಗನ ಮುಖಿಯಾಗುತ್ತಿದೆ.

ಕೇಂದ್ರ ಸರ್ಕಾರದ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಬೆಂಗಳೂರು- ಪುಣೆ ಎಕ್ಸ್‌ಪ್ರೆಸ್‌ವೇಗೆ ಭರ್ಜರಿ ಸಿದ್ಧತೆ ಆಗುತ್ತಿದೆ. ಈ ಯೋಜನೆಯು ಬೆಂಗಳೂರು, ಪುಣೆ ಹಾಗೂ ಮುಂಬೈ ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಆಗುತ್ತಿದೆ.
ಇದರಿಂದ ಉತ್ತರ ಕರ್ನಾಟಕದ ಭಾಗದ ಜಾಗಕ್ಕೆ ಬಂಪರ್ ಬೆಲೆ ಬರಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಂದಾಜಿಸಿದ್ದಾರೆ. ಅಲ್ಲದೆ ಹೊಸ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದರೆ. ಬೆಂಗಳೂರು, ಪುಣೆ ಹಾಗೂ ಮುಂಬೈ ನಗರಗಳ ನಡುವೆ ಸಂಚಾರ ಅವಧಿಯೂ ಕಡಿಮೆಯಾಗಲಿದೆ.
ಕರ್ನಾಟಕದ ಟೈರ್ 2 ಮತ್ತು ಟೈರ್ 3 ಸಿಟಿಗಳಿಗೆ ಬಂಪರ್
ಕರ್ನಾಟಕದಲ್ಲಿ ಮೂರು ಹಂತದ ಪ್ರದೇಶಗಳನ್ನು ಅಭಿವೃದ್ಧಿ, ಬೆಲೆ ಹಾಗೂ ವಿವಿಧ ವಿಷಯಗಳ ಅನುಸಾರ ಗುರುತಿಸಲಾಗುತ್ತದೆ. ಟೈರ್ 1, 2 ಮತ್ತು ಟೈರ್ 3 ಸಿಟಿ ಎಂದು ಕರೆಯಲಾಗುತ್ತದೆ. ಈಗಾಗಲೇ ಅಭಿವೃದ್ಧಿಯಾಗಿರುವ ಬೆಂಗಳೂರಿನಂತಹ ನಗರಗಳು ಟೈರ್ 1ರಲ್ಲಿ ಬಂದರೆ. ಅಭಿವೃದ್ಧಿ ಹಂತದಲ್ಲಿ ಇರುವ ನಗರಗಳು ಹಾಗೂ ಅಭಿವೃದ್ಧಿ ಆಗಬೇಕಾಗಿರುವ ಸಿಟಿಗಳು ಕ್ರಮವಾಗಿ ಟೈರ್ 2 ಹಾಗೂ ಟೈರ್ 3 ಸಿಟಿಗಳು ಎಂದು ಹೇಳಲಾಗುತ್ತದೆ. ಇದೀಗ ಬೆಂಗಳೂರು- ಪುಣೆ ಎಕ್ಸ್‌ಪ್ರೆಸ್‌ವೇಯಿಂದ ಉತ್ತರ ಕರ್ನಾಟಕದ ಟೈರ್ 2 ಹಾಗೂ ಟೈರ್ 3 ಸಿಟಿಗಳಲ್ಲಿನ ಜಾಗಕ್ಕೆ ಬಂಪರ್ ಬರಲಿದೆ ಎಂದು ಹೇಳಲಾಗಿದೆ.

ಇನ್ನು ಟೈರ್ 1 ಸಿಟಿಯಲ್ಲಿ ಆಸ್ತಿ ಬೆಲೆ ಪ್ರತಿ ಚದರ ಅಡಿಗೆ 5,500 ರಿಂದ 7,000 ಸಾವಿರ ರೂಪಾಯಿ ನಡುವೆ. ಟೈರ್ 2 ಸಿಟಿಯಲ್ಲಿ ಆಸ್ತಿ ಬೆಲೆ ಪ್ರತಿ ಚದರ ಅಡಿಗೆ 3,500ರಿಂದ 4,500 ಸಾವಿರ ರೂಪಾಯಿಯ ವರೆಗೆ. ಇನ್ನು ಟೈರ್ 3 ಸಿಟಿಯಲ್ಲಿ ಆಸ್ತಿ ಬೆಲೆ ಪ್ರತಿ ಚದರ ಅಡಿಗೆ 2,500 ಸಾವಿರದಿಂದ ₹3,500 ಸಾವಿರ ರೂಪಾಯಿ ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, ಇದು ಎಲ್ಲಾ ಭಾಗಕ್ಕೂ ಅನ್ವಯಿಸುವುದಿಲ್ಲ. ಒಂದೊಂದು ಜಾಗದ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಇನ್ನು ಉದ್ದೇಶಿತ ಎಕ್ಸ್‌ಪ್ರೆಸ್‌ವೇ ಒಟ್ಟು 12 ಜಿಲ್ಲೆಗಳ ಮಾರ್ಗದಲ್ಲಿ ಸಾಗಲಿದೆ. ಇದರಲ್ಲಿ ಕರ್ನಾಟಕದಲ್ಲಿ 9 ಜಿಲ್ಲೆಗಳು ಇರುವುದರಿಂದ ಕರ್ನಾಟಕಕ್ಕೆ ಬಂಪರ್ ಎಂದೇ ಹೇಳಲಾಗುತ್ತಿದೆ.
ಉತ್ತರ ಕರ್ನಾಟಕದ ಭೂಮಿಗಳಿಗೆ ಚಿನ್ನದ ಬೆಲೆ
ಮಧ್ಯ, ಕಲ್ಯಾಣ ಹಾಗೂ ಉತ್ತರ ಕರ್ನಾಟಕದ 9 ಜಿಲ್ಲೆಗಳ ಮೂಲಕ ಈ ಹೆದ್ದಾರಿ ಹಾದು ಹೋಗಲಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಜಿಲ್ಲೆಗಳಿವೆ. ಅಲ್ಲದೆ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ. ಚಿತ್ರದುರ್ಗ, ದಾವಣಗೆರೆಯ ಜಗಳೂರು, ವಿಜಯನಗರದ ಕೂಡ್ಲಿಗಿ, ಕೊಪ್ಪಳದ ಯಲಬುರ್ಗಾ ಹಾಗೂ ಗದಗ ಜಿಲ್ಲೆಯ ರೋಣ, ನರಗುಂದ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಮುಧೋಳ, ಜಮಖಂಡಿ, ಬೆಳಗಾವಿ ಜಿಲ್ಲೆಯ ಅಥಣಿ ಸೇರಿವೆ. ಎಕ್ಸ್‌ಪ್ರೆಸ್ ವೇ ಈ ಮಾರ್ಗದ ಮೂಲಕ ಸಾಗಿ ಮಹಾರಾಷ್ಟ್ರ ರಾಜ್ಯದ ಸತಾರಾ, ಸಾಂಗ್ಲಿ ಮಾರ್ಗವಾಗಿ ಪುಣೆ ಮುಟ್ಟಲಿದೆ. ಹೀಗಾಗಿ ಕರ್ನಾಟಕದ ಈ ಭಾಗಗಳಲ್ಲಿ ಎಕ್ಸ್‌ಪ್ರೆಸ್ ವೇ ಸಾಗುವ ಮಾರ್ಗದಲ್ಲಿನ ಭೂಮಿಗಳ ಬೆಲೆ ಹೆಚ್ಚಾಗುತ್ತಿದೆ.












Click it and Unblock the Notifications