Bengaluru-Mumbai Corridor: ಹೈಸ್ಪೀಡ್ ರೈಲು ಯೋಜನೆ, ಕರ್ನಾಟಕ ರೈಲ್ವೆ ಅಭಿವೃದ್ಧಿ, ಅಪ್ಡೇಟ್ಸ್

ಬೆಂಗಳೂರು, ಮಾರ್ಚ್ 09: ಕೇಂದ್ರ ಸರ್ಕಾರವು ರೈಲ್ವೆ ಜಾಲ ಅಭಿವೃದ್ಧಿ ಜೊತೆಗೆ ರೈಲ್ವೆ ಮೂಲ ಸೌಕರ್ಯ ಹೆಚ್ಚಿಸುವ ಪ್ರಯತ್ನದಲ್ಲಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಜೊತೆಗೆ ಸರಕು ಸಾಗಾಣೆ ಗುರಿ ಹೊಂದಿದೆ. ಹೊಸ ಮಾರ್ಗಗಳಲ್ಲಿ ರೈಲ್ವೆ ಸಂಪರ್ಕ ಹಾಗೂ ಹೈಸ್ಪೀಡ್ ರೈಲು ಪರಿಚಯಿಸುವ ಉದ್ದೇಶ ಹೊಂದಿದೆ. ಈಗಾಗಲೇ ತುಮಕೂರು-ದಾವಣಗೆರೆ ರೈಲು ಮಾರ್ಗ ನಿರ್ಮಾಣ ಕಾರ್ಯ ನಡೆದಿದೆ. ಈ ಮಧ್ಯೆ ಉದ್ದೇಶ ಹೊಸ ರೈಲ್ವೆ ಕೈಗಾರಿಕಾ ಕಾರಿಡಾರ್ ಗಮನ ಸೆಳೆಯುತ್ತಿದೆ.

ರೈಲ್ವೆ ಇಲಾಖೆ ವತಿಯಿಂದ ಹೊಸ ಹಳಿಗಳ ಜೋಡಣೆ, ರೈಲ್ವೆ ನಿಲ್ದಾಣ ಅಭಿವೃದ್ಧಿ ಆಗುತ್ತಿದೆ. ಬುಲೆಟ್ ರೈಲುಗಳು ಎಂದು ಕರೆಯಲ್ಪಡುವ ಹೈ-ಸ್ಪೀಡ್ ರೈಲು (HSR) ಕಾರಿಡಾರ್ ಹಾಗೂ ಅರೆ-ಹೈ-ಸ್ಪೀಡ್ ರೈಲುಗಳನ್ನು ಪರಿಚಯಿಸುವ ಉದ್ದೇ ಹೊಂದಿದೆ ಎಂದು 'ಮೈಸೂರು ಇನ್ಫ್ರಾ ಹಬ್' ವರದಿ ಮಾಡಿದೆ.

Bengaluru-Mumbai High Speed Rail Project If Implement Its Boost Karnataka Internal Parts Development

ಕರ್ನಾಟಕ ಹೈ-ಸ್ಪೀಡ್ ರೈಲು ಕಾರಿಡಾರ್

ಕರ್ನಾಟಕದ ಮಟ್ಟಿಗೆ ಬಹುನಿರೀಕ್ಷೆಯ ಬೆಂಗಳೂರು-ತುಮಕೂರು ಮೂಲಕ ದಾವಣಗೆರೆ ವರೆಗೆ ಹೊಸ ಮಾರ್ಗ ನಿರ್ಮಾಣವಾಗುತ್ತಿದೆ. ಈ ಮಾರ್ಗವು ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಪುಣೆ ಸೇರಲಿದೆ. ಈ ಮಾರ್ಗವನ್ನು ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್‌ಗೆ ಆಗಿ ಆದ್ಯತೆ ನೀಡುವ ಅವಶ್ಯಕತೆಯಿದೆ. ಇದರಿಂದ ಸಾಕಷ್ಟು ಪ್ರಯೋಜನ ಸಿಗಲಿವೆ ಎಂಬ ಆಗ್ರಹ ಇದೆ. ಈ ಕಾರಿಡಾರ್‌ನಿಂದ ಇದು ಕರ್ನಾಟಕದ ಒಳನಾಡಿನ ಜಿಲ್ಲೆಗಳ ಭವಿಷ್ಯ ಮತ್ತಷ್ಟು ಸುಧಾರಿಸಲಿದೆ.

ಅರೆ-ಹೈ-ಸ್ಪೀಡ್ ರೈಲುಗಳಿಗೆ ಟ್ರ್ಯಾಕ್ ಮೂಲ ಸೌಕರ್ಯ ಬಲಪಡಿಸುವುದು. ಹೈಸ್ಪೀಡ್ ರೈಲುಗಳ 07 ಕಾರಿಡಾರ್ ಯೋಜನೆ ಬಗ್ಗೆ ರೈಲ್ವೆ ಇಲಾಖೆ ದೂರದೃಷ್ಟಿ ಹೊಂದಿದೆ. ಆದರೆ ಬೆಂಗಳೂರು-ಪುಣೆಗೆ ರೈಲು ಮಾರ್ಗವನ್ನು ಹೈ-ಸ್ಪೀಡ್ ರೈಲು ಯೋಜನೆಗೆ ಪರಿವರ್ತಿಸುವಲ್ಲಿ ಆದ್ಯತೆ ನೀಡಬೇಕಿದೆ. ಇದರಿಂದ ಕರ್ನಾಟಕದ ಬಹುಪಾಲು ಪ್ರದೇಶವು ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತದೆ.

Bengaluru-Mumbai High Speed Rail Project If Implement Its Boost Karnataka Internal Parts Development

ಅಹಮದಾಬಾದ್ ಮೂಲಕ ಮುಂಬೈ-ದೆಹಲಿ ಕೈಗಾರಿಕಾ ಕಾರಿಡಾರ್ ಬುಲೆಟ್ ರೈಲು ಯೋಜನೆಗೆ ಪೂರಕವಾಗಿದೆ. ಅದರಂತೆ ಪುಣೆ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಸಹ ಹೈ ಸ್ಪೀಡ್ ರೈಲ್ವೆ ಯೋಜನೆಗೆ ಪೂರಕವಾಗಿದೆ. ಇದನ್ನು ಪರಿಗಣಿಸಿ ಅಭಿವೃದ್ಧಿ ಮಾಡಬೇಕಿದೆ. ಸದ್ಯ ಈ ಯೋಜನೆ ಯೋಚನೆಯಾಗಿ ಉಳಿಯದೇ, ಜಾರಿಗೆ ಬರಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

Take a Poll

ಸ್ಮಾರ್ಟ್ ಸಿಟಿ ನಗರಗಳಲ್ಲಿ ರೈಲ್ವೆ ಕಾರಿಡಾರ್ ಪಾತ್ರ ಮಹತ್ವದ್ದು

ಕೇಂದ್ರ ಸರ್ಕಾರ ಹಾಗೂ ಸಂಬಂಧಿಸಿದಂತೆ ಸಂಸ್ಥೆಗಳಿಂದ ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಮತ್ತು ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗೆ ಒಪ್ಪಿಗೆ ಸಿಕ್ಕಿದೆ. ಅವುಗಳ ಅನುಷ್ಠಾನ ಯಾವಾಗ, ಅಧಿಕೃತ ಮಾಹಿತಿ, ಕಾಮಗಾರಿ ಆರಂಭದ ಅಪ್ಡೇಟ್ ಸಿಗಬೇಕಿದೆ.

ಈಗಾಗಲೇ ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳು ಸ್ಮಾರ್ಟ್ ಸಿಟಿ ಉಪಕ್ರಮದ ಭಾಗವಾಗಿವೆ. ವಿವಿಧ ರೂಪದಲ್ಲಿ ಈ ನಗರಗಳು ಅಭಿವೃದ್ಧಿ ಹೊಂದುತ್ತಿವೆ. ಇವೆಲ್ಲ ಕಡೆ ಕೈಗಾರಿಕೆಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಣಾಯಕ ಪಾತ್ರವಹಿಸಲಿದೆ. ಹೀಗಾಗಿ ರೈಲ್ವೆ ಹೊಸ ಯೋಜನೆಗಳತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+