Murder Case ಮಹಿಳೆಯ ಬರ್ಬರ ಕೊಲೆ: ಈ ನಾಲ್ವರಿಗೆ ಬಲೆ ಬೀಸಿದ ಪೊಲೀಸರು

ದೇಶವನ್ನೇ ಬೆಚ್ಚಿ ಬೀಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಘಟನೆಯಲ್ಲಿನ ಕರಾಳತೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ರಾಜ್ಯರಾಜಧಾನಿ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನೆಲೆಸಿದ್ದ ಮಹಿಳೆಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಲ್ಲದೇ ಮಹಿಳೆಯನ್ನು 50ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ, ಪ್ರೀಜರ್‌ನ ಒಳಗೆ ತುಂಬಿಟ್ಟಿದ್ದಾರೆ. ಈ ಕೃತ್ಯ ಪೊಲೀಸರನ್ನೇ ಬೆಚ್ಚಿ ಬೀಸಿದೆ. ಮೃತ ಮಹಿಳೆ ಮಹಾಲಕ್ಷ್ಮೀ ಅವರ ಕೊಲೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಉಳಿದ ಪ್ರಮುಖ ನಗರಗಳಿಗಿಂತ ಸೇಫ್‌ಎಸ್ಟ್‌ ಸಿಟಿ ಎಂದೇ ಖ್ಯಾತಿ ಗಳಿಸಿದೆ. ಬೆಂಗಳೂರಿನ ಪೊಲೀಸರ ದಕ್ಷತೆ ಹಾಗೂ ಬೆಂಗಳೂರಿನ ಪ್ರಜ್ಞಾವಂತ ಜನರು ಸಹ ಇದಕ್ಕೆ ಸಾಕ್ಷಿ. ಬೆಂಗಳೂರಿನಲ್ಲಿ ಉಳಿದ ನಗರಗಳಂತೆ ಭೀಭತ್ಸ್ಯ ಕೃತ್ಯಗಳು ನಡೆದಿರುವುದು ತೀರ ವಿರಳ. ಆದರೆ, ಈಗ ಬೆಂಗಳೂರಿನಲ್ಲಿ ನಡೆದಿರುವ ಘಟನೆ ಈ ಹಿಂದೆ ಎಂದೂ ಬೆಂಗಳೂರಿಗರು ಹಾಗೂ ಕರ್ನಾಟಕದ ಜನ ಕೇಳಿಯೇ ಇರದ ಕೊಲೆ. ಈ ರೀತಿಯ ಕೊಲೆ ಈ ಹಿಂದೆ ದೆಹಲಿಯಲ್ಲಿ ನಡೆದಿತ್ತು. ಆದರೆ, ಇದೀಗ ಬೆಂಗಳೂರಿನಲ್ಲಿ ಆ ಕೃತ್ಯವನ್ನೂ ಮೀರಿಸುವಂತಹ ಘಟನೆ ನಡೆದಿದ್ದು, ಜನ ಆಘಾತಕ್ಕೆ ಒಳಗಾಗಿದ್ದಾರೆ. ಮೃತ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Bengaluru Mahalaxmi Murder Case The police laid a trap for these four

ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು

ಇನ್ನು ಮಹಿಳೆಯ ಬರ್ಬರ ಕೊಲೆಗೆ ಸಂಬಂಧಿಸಿದಂತೆ ಮಹಿಳೆಯ ಕುಟುಂಬದವರು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆಯ ಸ್ನೇಹಿತ ಅಶ್ರಫ್, ಮುಕ್ತ, ಶಶಿಧರ್ ಹಾಗೂ ಸುನೀಲ್ ಎನ್ನುವವರ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ​​ಮುಕ್ತ, ಶಶಿಧರ್ ಹಾಗೂ ಸುನೀಲ್ ಎನ್ನುವವರು ಮೃತ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಉತ್ತರಾಖಂಡದ ಅಶ್ರಫ್ ಎನ್ನುವ ವ್ಯಕ್ತಿ ಮೃತ ಮಹಾಲಕ್ಷ್ಮಿ ಅವರೊಂದಿಗೆ ಆತ್ಮೀಯತೆ ಹೊಂದಿದ್ದ. ಇವರಿಬ್ಬರು ಆತ್ಮೀಯ ಸಂಬಂಧವನ್ನು ಹೊಂದಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅವನ ಮೇಲೆ ನನಗೆ ಅನುಮಾನವಿದೆ ಎಂದ ಪತಿ

ಇನ್ನು ಮೃತ ಮಹಿಳೆಯ ಪತ್ನಿ ಹೇಮಂತ್‌ ದಾಸ್‌ ಅವರು ಈ ಘಟನೆಯ ಬಗ್ಗೆ ಮಾತನಾಡಿದ್ದು, ನನಗೆ ಮಹಾಲಕ್ಷ್ಮೀ ಸ್ನೇಹಿತನಾದ ಅಶ್ರಫ್‌ ಮೇಲೆ ಅನುಮಾನವಿದೆ. ನಾನು ಅವನ ಮೇಲೆ ಈಗಾಗಲೇ ನೆಲಮಂಗಲದಲ್ಲಿ ವಿರುದ್ಧ ದೂರು ಸಹ ದಾಖಲಿಸಿದ್ದೆ. ನನ್ನ ಪತ್ನಿಯ ಮೊಬೈಲ್‌ ನೋಡುವಾಗ, ನನ್ನ ಪತ್ನಿ ಹಾಗೂ ಅಶ್ರಫ್‌ ಎನ್ನುವ ವ್ಯಕ್ತಿ ಇಬ್ಬರೂ ಆತ್ಮೀಯವಾಗಿರುವ ವಿಚಾರ, ಅವರ ಸಲುಗೆ ನನಗೆ ಗೊತ್ತಾಗಿತ್ತು ಎಂದು ಹೇಳಿದ್ದಾರೆ.

ಮಹಾಲಕ್ಷ್ಮೀ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?

ಮಹಾಲಕ್ಷ್ಮೀ ವಾಸವಿದ್ದ ಮನೆಯಿಂದ ಕೆಟ್ಟ ವಾಸನೆ ಬಂದ ಮೇಲೆ ಸುತ್ತಮುತ್ತಲಿನ ಮನೆಯವರಿಗೆ ಅನುಮಾನ ಬಂದಿದೆ. ಸುತ್ತಮುತ್ತಲಿನ ಜನ ಮನೆ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಮನೆ ಮಾಲೀಕರು ಮಹಾಲಕ್ಷ್ಮೀ ಅವರ ಕುಟುಂಬದವರಿಗೆ ವಿಷಯ ಮುಟ್ಟಿಸಿದ್ದಾರೆ. ಮನೆಗೆ ಬಂದಾಗ ಮಹಾಲಕ್ಷ್ಮೀ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನು ಕೊಲೆಯಾಗಿರುವ ಮಹಾಲಕ್ಷ್ಮೀ ಅವರು ಮೂಲತಃ ನೇಪಾಳದವರು ಎಂದು ಹೇಳಲಾಗಿದೆ. ಆದರೆ, ಮಹಾಲಕ್ಷ್ಮೀ ಹಾಗೂ ಅವರ ಪತಿಗೆ ಒಂದು ಮಗು ಇದೆ. ಪತಿ - ಪತ್ನಿ ಇಬ್ಬರು ಸಂಸಾರದಲ್ಲಿ ಉಂಟಾದ ವೈಮನಸ್ಸಿನಿಂದ ದೂರವಾಗಿದ್ದರು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+