ಬೆಂಗಳೂರು ಕಂಬಳ: ಅರಮನೆ ಮೈದಾನ ಸುತ್ತ ಸಂಚಾರ ಮಾರ್ಗ ಬದಲಾವಣೆ, ಇಲ್ಲಿದೆ ಎಂಟ್ರಿ-ಎಕ್ಸಿಟ್ ವಿವರ
ಬೆಂಗಳೂರು, ನವೆಂಬರ್ 24: ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಇತಿಹಾಸ ಪ್ರಸಿದ್ಧ ಕಂಬಳ ಆಯೋಜಿಸಲಾಗಿದೆ. ನಗರದ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಕಂಬಳ ವೀಕ್ಷಣೆಗೆ ಎರಡು ದಿನಗಳಲ್ಲಿ 6 ರಿಂದ 8 ಲಕ್ಷ ಜನರು ಬರುವ ನಿರೀಕ್ಷೆಯಿದೆ. ಹೀಗಾಗಿ ಸುಗಮ ಸಂಚಾರಕ್ಕಾಗಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಸಾಮಾನ್ಯವಾಗಿ ವೀಕೆಂಡ್‌ಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಸಾಮಾನ್ಯ. ಇನ್ನು ಕಂಬಳಕ್ಕೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅರಮನೆ ಮೈದಾನ ಸುತ್ತ 25 ಮತ್ತು 26ರಂದು ಸುಗಮ ಸಂಚಾರಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಇನ್ನು ಅರಮನೆ ಮೈದಾನ ಸುತ್ತಲೂ ಮುನ್ನೆಚ್ಚರಿಕೆ ಕ್ರಮವಾಗಿ ಅರಮನೆ ಮೈದಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎರಡು ದಿನ ನಡೆಯಲಿರುವ ಕಂಬಳಕ್ಕೆ ಆಗಮಿಸುವವರು ಈ ಕೆಳಗಿನ ಸಂಚಾರ ನಿಯಮಗಳನ್ನು ಪಾಲಿಸಬೇಕಾಗಿದೆ.
ಅರಮನೆ ಮೈದಾನ ಪ್ರವೇಶ ಮತ್ತು ವಾಹನ ನಿಲುಗಡೆ ಸ್ಥಳಗಳ ಮಾಹಿತಿ
* ಸಿಬಿಡಿ ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಬಳಿಯ ಗೇಟ್ ನಂ 1(ಕೃಷ್ಣ ವಿಹಾರ್) ನಲ್ಲಿ ಪ್ರವೇಶದ ಪಾರ್ಕಿಂಗ್.
* ಹೆಬ್ಬಾಳ ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಅಂಡರ್ ಪಾಸ್ ಮೂಲಕ ಗೇಟ್ ನಂ 1ರಿಂದ ಪ್ರವೇಶ.
* ಯಶವಂತಪುರ ಕಡೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಬಲ ತಿರುವು ಗೇಟ್ ನಂಬರ್ 1 ಪ್ರವೇಶ.
* ಕ್ಯಾಬ್‌ನಲ್ಲಿ ಬರುವವರಿಗೆ ಗೇಟ್ ನಂಬರ್ 2 ಮೂಲಕ ಪ್ರವೇಶ. ಹಾಗೂ ಗೇಟ್ ನಂಬರ್ 3ರಲ್ಲಿ ಕ್ಯಾಬ್‌ಗಳ ಎಕ್ಸಿಟ್‌ಗಳಿಗೆ ವ್ಯವಸ್ಥೆ.
* ಇತರೆ ವಾಹನಗಳು ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮೂಲಕ ನಿರ್ಗಮನ.

ಈ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ನಿಷೇಧ
ಪ್ಯಾಲೆಸ್ ರಸ್ತೆ, ಎಮ್ ವಿ ಜಯರಾಂ ರಸ್ತೆ, ಸಿವಿ ರಾಮನ್ ರಸ್ತೆ, ವಸಂತ್ ನಗರ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ತರಳ ಬಾಳು ರಸ್ತೆ, ಮೌಂಟ್ ಕಾರ್ಮಲ್ ರಸ್ತೆ ಬಳಿಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.
ಕಾರ್ಯಕ್ರಮ ಹೊರತುಪಡಿಸಿ ಸಂಚರಿಸುವ ಸವಾರರಿಗೆ ಪ್ರತ್ಯೇಕ ಮಾರ್ಗಸೂಚಿ
* ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್ ಹೋಗುವ ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು.
* ಅರಮನೆ ರಸ್ತೆ, ಬಿಡಿಎ ಜಂಕ್ಷನ್‌ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್‌ನಿಂದ ಹಳೇ ಉದಯ ಟಿವಿ ಜಂಕ್ಷನ್‌ವರೆಗೆ ಎಮ್ ವಿ ಜಯರಾಂ ರಸ್ತೆ ಬಳಕೆಗೆ ಸೂಚನೆ.
* ಮೇಖ್ರಿ ಸರ್ಕಲ್‌ನಿಂದ ಎಲ್‌ಆರ್ ಡಿಇ ಜಂಕ್ಷನ್‌ವರೆಗೆ ಬಳ್ಳಾರಿ ರಸ್ತೆ ಬಳಸಲು ಸೂಚನೆ.
* ಬಾಳೆಕುಂದಿ ಸರ್ಕಲ್‌ನಿಂದ ಲೀ ಮೆರಿಡಿಯನ್ ಅಂಡರ್ ಪಾಸ್‌ವರೆಗೆ ಕನ್ನಿಂಗ್ ಹಾಮ್ ರೋಡ್ ಬಳಸಲು ಸೂಚನೆ.
* ಹಳೇ ಉದಯ ಟಿವಿ ಜಂಕ್ಷನ್ ನಿಂದಎಲ್ ಆರ್‌ಡಿ ಜಂಕ್ಷನ್ ವರೆಗೆ ಮಿಲ್ಲರ್ಸ್ ಜಂಕ್ಷನ್ ಬಳಸಲು ಸೂಚನೆ.
* ಜಯಮಹಲ್ ರಸ್ತೆ ಹಾಗೂ ಅರಮನೆ ರಸ್ತೆ ಸುತ್ತಮುತ್ತ ಸಂಚಾರ ಮಾಡುವವರು ಜಯಮಹಲ್ ರಸ್ತೆ ಬಳಕೆಗೆ ಅವಕಾಶ ನೀಡಲಾಗಿದೆ.












Click it and Unblock the Notifications