ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಕಟಪ್ಪ ಆರ್ಟ್ ಗ್ಯಾಲರಿ ಕಲಾವಿದರ ಬಳಿಯೇ ಉಳಿಯಲಿ

|
Google Oneindia Kannada News

ಬೆಂಗಳೂರು, ಮಾರ್ಚ್. 04: ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಖಾಸಗಿಯವರಿಗೆ ವಹಿಸುವ ಕ್ರಮ ವಿರೋಧಿಸಿ ಕಲಾವಿದರು ಮಾರ್ಚ್ 6 ಭಾನುವಾರದಂದು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.

ಕರ್ನಾಟಕದ ಹಿರಿಯ, ಕಿರಿಯ ಕಲಾವಿದರು-ಕಲಾವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಲಿದ್ದು ಖಾಸಗಿಯವರಿಗೆ ಗ್ಯಾಲರಿಯನ್ನು ನೀಡದಂತೆ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ.[ಮೈಸೂರಿನ 'ಜ್ಯೋತಿ'ಗೆ ಕರಕುಶಲ ಕಲೆಯೇ ಬಾಳಿನ ಬೆಳಕು]

art

ಈಗಾಗಲೇ ಕಲಾವಿದರು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಕಲಾವಿದರಿಗೆ ಒಪ್ಪಿಸಲಿ ಎಂದು ಆಗ್ರಹ ಮಾಡಿದ್ದಾರೆ.

ವೆಂಕಟಪ್ಪ ಆರ್ಟ್‌ ಗ್ಯಾಲರಿಗೆ ಒಂದು ಇತಿಹಾಸ ಇದೆ. ಈ ಗ್ಯಾಲರಿಗೂ ಮುನ್ನ ಬೆಂಗಳೂರಿನಲ್ಲಿ ಗ್ಯಾಲರಿಗಳೇ ಇರಲಿಲ್ಲ. 1971ರಲ್ಲಿ ಕಲಾವಿದರಾದ ಜಿ.ಎಸ್‌. ಶೆಣೈ, ಭಾಸ್ಕರ್‌ ರಾವ್‌, ರಮೇಶ್‌ ರಾವ್‌ ಮತ್ತು ಕೆಲವು ಕಲಾವಿದರು ಸೇರಿಕೊಂಡು ಈಗಿನ ಕುಂಬ್ಳೆ ವೃತ್ತದ ಸಮೀಪದ ಬೈಬಲ್‌ ಸೊಸೈಟಿ ಎದುರಿಗೆ ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಿ ಪ್ರತಿಭಟಿಸಿದರು. ಕಲಾವಿದರಿಗೆ ಗ್ಯಾಲರಿ ಜತೆಗೆ ಭಾವನಾತ್ಮಕ ಸಂಬಂಧ ಇದೆ. ಅದನ್ನು ಹಾಳು ಮಾಡಬಾರದು ಎಂಬುದು ಕಲಾವಿದರ ಮನದಾಳದ ಮಾತು.[ನಾನಾ ವರ್ಣದಲ್ಲಿ ವಿಜೃಂಭಿಸಿದ ಕೃಷ್ಣ]

ಖಾಸಗೀಕರಣ ಅಲ್ಲ ಒಪ್ಪಂದ ಎಂದ ಸರ್ಕಾರ
ವೆಂಕಟಪ್ಪ ಆರ್ಟ್‌ ಗ್ಯಾಲರಿಯನ್ನು ಖಾಸಗೀಕರಣ ಮಾಡುತ್ತಿಲ್ಲ. ಗ್ಯಾಲರಿಯನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ ಸೀಮಿತ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.

ವೆಂಕಟಪ್ಪ ಆರ್ಟ್‌ ಗ್ಯಾಲರಿ ನಿರ್ವಹಣೆ ಜವಾಬ್ದಾರಿಯನ್ನು ತಸ್ವೀರ್ ಫೌಂಡೇಷನ್‌ಗೆ ವಹಿಸಲು ಸರ್ಕಾರ ನಿರ್ಧಾರ ಮಾಡಿರುವುದು ವಿವಾದಕ್ಕೆಕಾರನಣವಾಗಿದೆ. ಒಪ್ಪಂದದ ಅವಧಿ 5 ವರ್ಷ ಎಂದು ಹೇಳಲಾಗಿತ್ತು.

English summary
Bengaluru: A group of prominent artists from across the State will meet in the city on Sunday and called for transparency in matters relating to the public-private partnership struck for developing the government-owned Venkatappa Art Gallery. The State government recently announced that it had signed a memorandum of understanding (MoU) with Tasveer Foundation, a city-based non-profit organisation, for developing and maintaining the premier art gallery in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X