ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಬ್ರೂಯಿಯನ್ನು ಸಾಂವಿಧಾನಿಕ ಕಬ್ಲ್ ಮಾಡಲು ಹೈಕೋರ್ಟ್ ಒಪ್ಪಿಗೆ

By ಎಸ್‌ಎಸ್‌ಎಸ್
|
Google Oneindia Kannada News

ಬೆಂಗಳೂರು, ಜನವರಿ 17; ಸುಮಾರು ಐದಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬೆಂಗಳೂರು ನಗರದ ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತಿಸುವುದಕ್ಕೆ ಕೊನೆಗೂ ಘಳಿಗೆ ಕೂಡಿ ಬಂದಂತೆ ಕಾಣುತ್ತಿದೆ.

ಒಂದೂವರೆ ವರ್ಷದಿಂದ ನ್ಯಾಯಾಲಯದ ಮುಂದಿದ್ದ ವಿಚಾರದಲ್ಲಿ ಕೊನೆಗೂ ಹೈಕೋರ್ಟ್ ಒಪ್ಪಿಗೆ ನೀಡಿದೆ. ಹಾಗಾಗಿ ಸುಮಾರು 150 ರಿಂದ 200 ವರ್ಷಗಳ ಹಳೆಯ ಮರಗಳ ನಡುವೆ ಇರುವ ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಬಾಲಬ್ರೂಯಿ ಅತಿಥಿ ಗೃಹ ಕಾನ್ಸ್ಟಿಟ್ಯೂಷನ್ ಕ್ಲಬ್ ಆಗಿ ಪರಿವರ್ತನೆಯಾಗಲಿದೆ.

ಶಾಸಕರ ಕಾನ್‌ಸ್ಟಿಟ್ಯೂಷನ್ ಕ್ಲಬ್‌ ನಿರ್ಮಾಣಕ್ಕೆ ಮಧ್ಯಂತರ ತಡೆಶಾಸಕರ ಕಾನ್‌ಸ್ಟಿಟ್ಯೂಷನ್ ಕ್ಲಬ್‌ ನಿರ್ಮಾಣಕ್ಕೆ ಮಧ್ಯಂತರ ತಡೆ

ದತ್ತಾತ್ರೇಯ ಟಿ. ದೇವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ಮತ್ತು ಆಶೋಕ್ ಎಸ್. ಕಿಣಗಿ ಅವರಿದ್ದ, ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಬಾಲಬ್ರೂಯಿ ಅತಿಥಿ ಗೃಹ ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತನೆ ಬೇಡ- ಎಎಪಿಬಾಲಬ್ರೂಯಿ ಅತಿಥಿ ಗೃಹ ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತನೆ ಬೇಡ- ಎಎಪಿ

Bengaluru 170-year old Balabrooie Guest House to be converted to Constitution Club for MLAs

ಬಾಲಬ್ರೂಯಿ ಕಟ್ಟಡ ಮತ್ತು ಪುರಾತನ ಮರಗಳಿಗೆ ಹಾನಿಯಾಗದಂತೆ ಕಾನ್ಸ್ಟಿಟ್ಯೂಷನ್ ಕ್ಲಬ್ ಸ್ಥಾಪನೆ ಮಾಡಬಹುದು ಎಂದು ಆದೇಶ ನೀಡಿದೆ, ಜತೆಗೆ ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್ಟಿಟ್ಯೂಟ್ ಕ್ಲಬ್ ಅನ್ನಾಗಿ ಪರಿವರ್ತಿಸುವ ನಿರ್ಧಾರ ಮತ್ತು ಅತಿಥಿ ಗೃಹದ ಆವರಣದಲ್ಲಿನ ಮರಗಳನ್ನು ಕಡಿಯುವುದರ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2021ರ ಅಕ್ಟೋಬರ್ 7 ರಂದು ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡಿದೆ.

ಕೊರೊನಾ ಸೇವೆಗಾಗಿ ಬದಲಾದ ಬಾಲಬ್ರೂಯಿ, ವಿಕ್ಟೋರಿಯಾ ಆಸ್ಪತ್ರೆಕೊರೊನಾ ಸೇವೆಗಾಗಿ ಬದಲಾದ ಬಾಲಬ್ರೂಯಿ, ವಿಕ್ಟೋರಿಯಾ ಆಸ್ಪತ್ರೆ

ಸರ್ಕಾರಿ ವಕೀಲರು, ಕಟ್ಟಡದ ಕುರಿತು ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಈ ಹಿಂದೆ ನೀಡಿದ್ದ ಆದೇಶ ತೆರವು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು.

ಅಲ್ಲದೆ, ಅತಿಥಿ ಗೃಹದ ಪುನರ್ ನಿರ್ಮಾಣ, ಮರು ವಿನ್ಯಾಸ ಮತ್ತು ಕಟ್ಟಡ ಕೆಡವಬೇಕು ಎಂಬ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಕಟ್ಟಡದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡದೆ ಒಳಾಂಗಣದ ಸೌಂದರ್ಯ ಹೆಚ್ಚಳ ಮಾಡುವ ಪ್ರಸ್ತಾಪ ಇದೆ. ಜತೆಗೆ, ಈ ಕಟ್ಟಡವನ್ನು ಕಾನ್ಸ್ಟಿಟ್ಯೂಷನ್ ಕ್ಲಬ್‌ನ್ನಾಗಿ ಬದಲಾಯಿಸುವ ಉದ್ದೇಶವಿದೆ. ಕಟ್ಟಡದ ಆವರಣದಲ್ಲಿರುವ ಯಾವುದೇ ಮರಗಳನ್ನು ಕಡಿಯುವುದು, ಹಾನಿ ಮಾಡುವುದಕ್ಕೆ ಮುಂದಾಗುವುದಿಲ್ಲ ಎಂದು ಸರ್ಕಾರದ ಭರವಸೆ ನೀಡಿತು.

ಐತಿಹಾಸಿಕ ಹಿನ್ನೆಲೆ: ಬ್ರಿಟೀಷ್ ಆಡಳಿತದಲ್ಲಿ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಸುಮಾರು 14 ಎಕರೆ ಪ್ರದೇಶದಲ್ಲಿ ಬಾಲಬ್ರೂಯಿ ಅತಿಥಿ ಗೃಹವನ್ನು ನಿರ್ಮಿಸಿದ್ದರು. ಈ ಕಟ್ಟಡದ ಆವರಣದಲ್ಲಿರುವ 200 ವರ್ಷಗಳಿಗೂ ಹಳೆಯ ಮರಗಳ 40 ಅಡಿಗಳಷ್ಟು ಬೇರು ಹೊಂದಿದ್ದು, ಮಳೆ ನೀರನ್ನು ಸಂಗ್ರಹಿಸುತ್ತವೆ.

ಅಲ್ಲದೇ, ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ, ರವೀಂದ್ರನಾಥ ಟಾಗೂರ್ ಸೇರಿದಂತೆ ಹಲವು ಪ್ರಧಾನ ಮಂತ್ರಿಗಳು, ಮುಖ್ಯ ಮಂತ್ರಿಗಳು ತಂಗಿದ್ದ ಇತಿಹಾಸವಿದೆ. ಹೀಗಾಗಿ ಕಟ್ಟಡವನ್ನು ಪರಿವರ್ತನೆ ಮಾಡದಂತೆ ಕೋರಿದ್ದರು.

English summary
Karnataka high court permitted Karnataka government to convert Balabrooie guest house into constitutional club.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X