ವಿಜಯೇಂದ್ರ ಹಡಬೆ ದುಡ್ಡಿಂದ ಆಪರೇಷನ್ ಕಮಲ ಮಾಡಿದ್ರು: ಗೋಪಾಲಕೃಷ್ಣ ಹೇಳಿದಿಷ್ಟು!

ಶಿವಮೊಗ್ಗ, ನವೆಂಬರ್‌ 01: ಆ ರಮೇಶ್ ಜಾರಕಿಹೊಳಿ, ಸಿನಿಮಾ ನಟ ಸಿಪಿ ಯೋಗೀಶ್ವರ್ ಅಂಥವರು ಒಂದೆರಡು ಜನ ಸೇರಿಕೊಂಡು ಆಪರೇಷನ್ ಕಮಲ ಅಂತ ಹೊರಟಿದ್ದಾರೆ. ಅಂದು ಯಡಿಯೂರಪ್ಪ ಹಾಗೂ ಅವರ ಮಗ ಬಿ ವೈ ವಿಜಯೇಂದ್ರ ಹಡಬೆ ದುಡ್ಡಿತ್ತು ಆಪರೇಷನ್ ಕಮಲ ಮಾಡಿದರು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಬುಧವಾರ ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯವರಿಗೆ, ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು ಬಂದಿರುವುದನ್ನ ತಡೆದುಕೊಳ್ಳಲು ಆಗುತ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕೆಲವರು ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.ರಾಜ್ಯದ ಜನ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ.

belur-gopalakrishna-fierce-attack-against-bjp

ಐದು ವರ್ಷ ನಿರಾತಂಕವಾಗಿ ಸರ್ಕಾರ ಇರುತ್ತದೆ. ಸಿಎಂ ಹಾಗೂ ಡಿಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಐದು ತಿಂಗಳಿನಲ್ಲಿ ಎಲ್ಲಾ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಕಾಲಾವಕಾಶ ಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸರ್ಕಾರ ಬಂದು ಕೇವಲ ಐದು ತಿಂಗಳು ಆಗಿದೆ. ಸರ್ಕಾರ ಉರುಳಿ ಹೋಗುತ್ತೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಉರುಳಿ ಹೋಗಲು ಸಾಧ್ಯವಿಲ್ಲ. ನಾನು ಚಾಲೆಂಜ್ ಮಾಡುತ್ತೇನೆ ನಿಮಗೆ ತಾಕತ್ ಧಮ್‌ ಇದ್ರೆ ಉರುಳಿಸಿ ನೋಡೋಣ. ಆಪರೇಷನ್ ಕಮಲ ಮಾಡಲು ಹೊರಟಿರುವವರ ಬಗ್ಗೆ ನಾನ್ ಹೇಳೋದಿಷ್ಟೇ, ನಿಮ್ಮ ಅಸ್ತಿತ್ವವನ್ನು ನೀವು ಉಳಿಸಿಕೊಳ್ಳಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಹಣ ಕೊಟ್ಟು 17 ಜನರನ್ನು ಖರೀದಿ ಮಾಡಿದರು. ಈಗ ಇಷ್ಟು ಜನರನ್ನು ಖರೀದಿ ಮಾಡಲು ಸಾಧ್ಯನಾ..? ಆ ತಾಕತ್ ಇದೆಯಾ..? ಅಂತವರು ಯಾರಿದ್ದಾರೆ..? ಅಂತಹ ವಾತಾವರಣ ಈಗ ಇಲ್ಲ. ನನಗೆ ಗೊತ್ತಿರುವ ಹಾಗೆ ನಮ್ಮ ಎಂಎಲ್ಎಗಳು ಹೋಗುವ ಪರಿಸ್ಥಿತಿ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ರಮೇಶ್ ಜಾರಕಿಹೊಳಿ ರಾಷ್ಟ್ರಪತಿ ಆಡಳಿತ ತರುತ್ತೇವೆ ಎಂದು ಹೇಳಿದ್ದಾರೆ. ಯಾವ ತರಹದ ರಾಷ್ಟ್ರಪತಿ ಆಡಳಿತ ತರ್ತಾರೆ.? ಯಾವ ಉದ್ದೇಶದಿಂದ ತರುತ್ತೀರಿ.? ರಮೇಶ್ ಜಾರಕಿಹೊಳಿಗೆ ಹುಚ್ಚು ಹಿಡಿದಿರಬೇಕು. ಹುಚ್ಚರೆಲ್ಲ ಹೀಗೆ ಮಾಡುವುದು. ಅವರಿಗೆ ನೆಲೆ ಇಲ್ಲ, ಪಕ್ಷದಲ್ಲಿ ಬೆಲೆ ಇಲ್ಲ.

belur-gopalakrishna-fierce-attack-against-bjp

ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಅವರ ಎಲ್ಲಾ ಪ್ರಕರಣಗಳು ಮುನ್ನೆಲೆಗೆ ಬರಲಿವೆ. ಹಾಗಾಗಿ ಕಾಂಗ್ರೆಸ್ ಭಯ ಅವರಿಗೆ ಕಾಡುತ್ತಿದೆ. ಅದರ ಜೊತೆಗೆ ಈಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಒಬ್ಬರು ಸೇರಿಕೊಂಡು ಬಿಟ್ಟಿದ್ದಾರೆ. ಅವೆಲ್ಲ ನಡೆಯೋದಿಲ್ಲ ಎಂದರು.

ಸಂಘಟನಾತ್ಮಕವಾಗಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಸೊರಗಿದೆ ಎಂದು ಗೋಪಾಲಕೃಷ್ಣ ಒಪ್ಪಿಕೊಂಡರು. ಚುನಾವಣೆ ನಂತರ ನಮ್ಮ ಸಂಘಟನೆ ಕಡಿಮೆಯಾಗಿದೆ. ನಾವು ಇದನ್ನು ಗಟ್ಟಿ ಮಾಡಬೇಕಿದೆ. ಶಿವಮೊಗ್ಗ ಎಂಪಿ ರಾಘವೇಂದ್ರ ಈಗಾಗಲೇ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ರಾಘವೇಂದ್ರ, ನಾಲ್ಕು ಮುಕ್ಕಾಲು ವರ್ಷಕ್ಕೆ ಮಾತ್ರ ಹಳ್ಳಿಗಳನ್ನು ಭೇಟಿ ನೀಡುವುದು. ಅಲ್ಲಿವರೆಗೆ ಅವರು ಯಾವುದೇ ಹಳ್ಳಿ ತಿರುಗುವುದಿಲ್ಲ.

ಚುನಾವಣೆ ಎದುರಿಟ್ಟುಕೊಂಡು ಕ್ಯಾಂಪೇನ್ ಮಾಡಲು ಆರಂಭಿಸಿದ್ದಾರೆ. ಅಲ್ಲಲ್ಲೇ ಸಭೆ ಮಾಡುವುದು, ಟವರ್ ನಿರ್ಮಾಣ ಸಭೆ, ರಸ್ತೆಗಳ ವೀಕ್ಷಣೆ ಮಾಡುವುದು ಮಾಡುತ್ತಿದ್ದಾರೆ. ಇಷ್ಟು ವರ್ಷ ಎಂಪಿ ರಾಘವೇಂದ್ರ ಏನು ಮಾಡುತ್ತಿದ್ದರು.? ನಾನ್ ಅಷ್ಟು ಅನುದಾನ ತಂದೆ ಇಷ್ಟ ಅನುದಾನ ತಂದೆ, ಏರ್ಪೋರ್ಟ್ ತಂದೆ ಅಂತ ಹೇಳಿಕೊಂಡು ಓಡಾಡುತ್ತಾರೆ.

ಶಿವಮೊಗ್ಗ ಏರ್ಪೋರ್ಟ್ ತಂದವರು ಯಾರು? ಏರ್ಪೋರ್ಟ್ ತಂದಿದ್ದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ರಾಜ್ಯ ಸರ್ಕಾರದ ಹಣ ಅಲ್ವ ಅದು.? ಯಾವುದೇ ಸರ್ಕಾರ ಆದ್ರೂ ಏರ್ಪೋರ್ಟ್ ಮಾಡೋದಿಲ್ವಾ.? ನಮ್ಮ ಸರ್ಕಾರ ಹಲವು ಕಡೆ ಮಾಡಿದೆ. ಲೋಕಸಭಾ ಚುನಾವಣೆ ಬರುವ ಹೊತ್ತಿಗೆ ನಾವು ನಮ್ಮ ಅಭಿವೃದ್ಧಿಯನ್ನು ತೋರಿಸಿ ಸಂಘಟನೆ ಬಲಪಡಿಸಿಕೊಳ್ಳಬೇಕಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+