ಬೆಳಗಾವಿ ವಿದ್ಯಾರ್ಥಿನಿಯರ ಆತ್ಮಹತ್ಯೆ: ಕಾಮಣ್ಣರ ಸೆರೆ

ಅಂಕಲಿ ಗ್ರಾಮದ ಸ್ನೇಹಿತೆಯರಾದ ದಿವ್ಯಾ ಗೋಪಾಲ್ ಪಾಟೀಲ್ (17) ಮತ್ತು ಪಲ್ಲವಿ ಸುರೇಶ್ ಎಡುರೆ (17) ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಬ್ಬರೂ ಶಾರದ ದೇವಿ ಕೋರೆ ಪಿಯು ಕಾಲೇಜಿನಲ್ಲಿ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದರು.
ಆದರೆ ಬಂಧಿತ ನಾಲ್ವರು ಇವರಿಬ್ಬರಿಗೂ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದರು. ಜತೆಗೆ, ಪ್ರೀತಿಸುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಸುರೇಶ್ ಮನಗುತ್ತಿ, ವಿನಾಯಕ ಸುತಾರ್, ಸಂಕೇತ್ ಮನಗುತ್ತಿ, ವಿನಾಯಕ್ ಮನಗುತ್ತಿ ಬಂಧಿತ ನಾಲ್ವರು.
ದುರ್ದೈವಿ ಬಾಲಕಿಯರಿಬ್ಬರೂ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ, ತಮ್ಮ ಸಾವಿಗೆ ಕಾರಣರಾದ ನಾಲ್ವರ ಹೆಸರನ್ನು ಬರೆದಿಟ್ಟಿದ್ದಾರೆ. ಡೆತ್ ನೋಟ್ ಅನ್ನು ಪರಿಶೀಲಿಸಿದ ಪೊಲೀಸರು ನಾಲ್ವರನ್ನೂ ಬಂಧಿಸಿದ್ದಾರೆ.
ಪಿಎಸ್‌ಐ ಸದಾನಂದ ಸೋನಾವಣೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ. ಪೋಷಕರು ನೀಡಿದ ದೂರಿನನ್ವಯ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಪ್ರಕರಣದ ನಾನಾ ಆಯಾಮಗಳನ್ನು ಪರಿಶೀಲಿಸುತ್ತಿರುವುದಾಗಿ ಜಿಲ್ಲಾ ಎಸ್ಪಿ ಚಂದ್ರಗುಪ್ತಾ ತಿಳಿಸಿದ್ದಾರೆ.












Click it and Unblock the Notifications