ಅಧಿವೇಶನದ ಸಮಯದಲ್ಲೇ ಕಾಂಗ್ರೆಸ್ ಪಕ್ಷದ ವಿರುದ್ಧವೇ ಆರೋಪ ಮಾಡಿದ ಕಾಂಗ್ರೆಸ್ ಶಾಸಕ!
ರಾಜ್ಯದಲ್ಲಿ ಮತ್ತೊಂದು ಹೊಸ ಹಗರಣವೊಂದು ಭಾರೀ ಸದ್ದು ಮಾಡುತ್ತಿದೆ. ವಿಧಾನಸಭೆ ಚಳಿಗಾಲದ ಅಧಿವೇಶನದ ಸಮಯದಲ್ಲೇ ಕಾಂಗ್ರೆಸ್‌ನ ಪ್ರಭಾವಿ ಶಾಸಕರೊಬ್ಬರು ರಾಜ್ಯ ಸರ್ಕಾರದ ವಿರುದ್ಧವೇ ತಿರುಗಿ ಬಿದಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ನುಂಗಲಾಗದ ತುಪ್ಪವಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರದ ವಿರುದ್ಧ ಒಬ್ಬೊಬ್ಬರೇ ಶಾಸಕರು ಧ್ವನಿ ಎತ್ತುತ್ತಿರುವುದು ವರದಿಯಾಗುತ್ತಲ್ಲೇ ಇದೆ. ಇದೀಗ ಬಂಗಾರಪೇಟೆ ಕಾಂಗ್ರೆಸ್ ಶಾಸಕರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಕೋಲಾರ ಹಾಲು ಒಕ್ಕೂಟದಲ್ಲಿ ದೊಡ್ಡ ಅವ್ಯವಹಾರ ನಡೆದಿದೆ ಎಂದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ , ಶಾಸಕರು ಹಾಗೂ ಸಚಿವರ ವಿರುದ್ಧವೇ ಆಡಳಿತ ಪಕ್ಷದ ನಾಯಕರೇ ತಿರುಗಿ ಬೀಳುವುದು ಹಾಗೂ ಗಂಭೀರ ಆರೋಪಗಳನ್ನು ಮಾಡುವುದು ಈಗಲೂ ಮುಂದುವರಿದಿದೆ. ಈ ವಿಷಯ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಿದೆ. ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಪ್ರಾರಂಭವಾಗುತ್ತಿದೆ. ಅಧಿವೇಶನ ಪ್ರಾರಂಭವಾಗುವಾಗಲೇ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಇದೀಗ ಕಾಂಗ್ರೆಸ್ ಶಾಸಕರೇ ಮತ್ತೊಬ್ಬ ಶಾಸಕರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಶಾಸಕ ಕೆ.ವೈ.ನಂಜೇಗೌಡ ಅವರ ವಿರುದ್ಧ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಪರೋಕ್ಷವಾಗಿ ವಾಗ್ದಾಳಿ ಹಾಗೂ ಆರೋಪ ನಡೆಸಿದ್ದಾರೆ ಎನ್ನಲಾಗಿದೆ.

ಇಲ್ಲಿನ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣ ಮತ್ತು ನೇಮಕಾತಿ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಈ ಡೈರಿಯ ಗುತ್ತಿಗೆ ವಿಚಾರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಾಸಕ ಎಸ್.ಎನ್.ನಾರಾಯಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಎಲ್ಲಾ ಕಾಮಗಾರಿಗಳನ್ನು ಒಂದೇ ಕುಟುಂಬದಿಂದ ಮಾಡಲಾಗುತ್ತಿದ್ದು, ಈ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇದರ ಬಗ್ಗೆ ನಾನು ಸರ್ಕಾರದ ಗಮನಕ್ಕೆ ತರ್ತೀನಿ ಎಂದು ಶಾಸಕ ಎಸ್.ಎನ್ ನಾರಾಯಣ ಸ್ವಾಮಿ ಅವರು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ಕೋಲಾರ ಹಾಲು ಒಕ್ಕೂಟ ಕ್ಷೇತ್ರ ವಿಗಂಡಣೆ ವಿಚಾರದಲ್ಲಿ ಸ್ಪಷ್ಟವಾಗಿ ಕಾನೂನಿನ ಉಲ್ಲಂಘನೆ ಮಾಡಲಾಗಿದೆ. ಒಕ್ಕೂಟದ ಎಂಡಿ ಆಗಿರುವ ಗೋಪಾಲ ಮೂರ್ತಿ ಅವರು ಅಕ್ರಮವಾಗಿ ಅವರಿಗೆ ಇಷ್ಟ ಬಂದಂತೆ ಕ್ಷೇತ್ರದ ವಿಗಂಡಣೆ ಮಾಡಿದ್ದು, ಇದು ಕೋಲಾರ ಜನರಿಗೆ ಮಾಡಿದ ಮೋಸ. ಅಲ್ಲದೇ ಹಿಂದಿನ ಒಕ್ಕೂಟ ಆಡಳಿತ ಮಂಡಳಿಯಿಂದ ಭಾರೀ ಅವ್ಯವಹಾರ ನಡೆದಿದೆ ಎಂದು ದೂರಿದ್ದಾರೆ. ಅಲ್ಲದೇ ಶಾಸಕರ ಅಭಿಪ್ರಾಯವನ್ನೇ ತೆಗೆದುಕೊಂಡಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋಲಾರ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹಾಗೂ ಹೊಂದಾಣಿಕೆ ಕೊರತೆಯ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತದೆ. ಇದೀಗ ಶಾಸಕರ ವಿರುದ್ಧವೇ ಗಂಭೀರ ಆರೋಪ ಕೇಳಿ ಬರುತ್ತಿದೆ. ಅದು ಸಹ ಸ್ವಪಕ್ಷದ ನಾಯಕರೇ ಮಾಡುತ್ತಿದ್ದಾರೆ.
ಅನುದಾನ ಕೊರತೆ: ಇನ್ನು ರಾಜ್ಯದ ವಿವಿಧ ಭಾಗದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಶಾಸಕರು ನಮಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಕ್ಷೇತ್ರದ ಜನ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ದೂರಿದ್ದರು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಸಹ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದವು.












Click it and Unblock the Notifications