Government Employees: "ಬೆಳಗಾವಿ ಅಧಿವೇಶನ: ಪ್ರತಿ ವೈನ್‌ಶಾಪ್‌ಗಳಿಂದ ಹಣ ವಸೂಲಿ, ಸರ್ಕಾರದ ಭತ್ಯೆ ಕಡಿತ ಡಿಮ್ಯಾಂಡ್"

ಕರ್ನಾಟಕದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನ ನಡೆಯುವ ಸಂದರ್ಭದಲ್ಲೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈಗಾಗಲೇ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇದೀಗ ಸರ್ಕಾರದ ಹಿರಿಯ ಅಧಿಕಾರಿಗಳಿಂದ ಗೂಗಲ್‌ ಮೀಟ್‌ನ ಮೂಲಕ ಸಾವಿರಾರು ರೂಪಾಯಿ ಸಂಗ್ರಹ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಹ ನೀಡಲಾಗಿದೆ.

ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈಗಾಗಲೇ ಪಂಚಮಸಾಲಿ ಸಮುದಾಯದ ಹೋರಾಟದ ಸಂದರ್ಭದಲ್ಲಿ ಆಗಿರುವ ಲಾಠಿ ಚಾರ್ಜ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ತೀವ್ರ ಸ್ವರೂಪದ ಹೋರಾಟಗಳು ನಡೆದಿದ್ದು, ಇದನ್ನು ವಿರೋಧ ಪಕ್ಷಗಳು ಸಹ ವಿರೋಧಿಸಿವೆ. ಇದರ ನಡುವೆ ಸರ್ಕಾರದ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.

Belagavi session Demand collection of money in wine shop reduction of government allowance

ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ಆತಿಥ್ಯದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಗೂಗಲ್ ಮೀಟ್‌ನಲ್ಲಿ ಹಿರಿಯ ಅಧಿಕಾರಿಗಳಿಂದ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಗಂಭೀರ ಆರೋಪ ಮಾಡಿದ್ದು. ಈ ವಿಚಾರವಾಗಿ ದೂರು ಸಹ ನೀಡಿದ್ದಾರೆ.

ವಿವಿಧ ಇಲಾಖೆಗಳಿಂದ ಹಣ ಸಂಗ್ರಹಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಪಶು ಸಂಗೋಪನೆ ಇಲಾಖೆಯಿಂದ 15 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವುದಾಗಿ ಹೇಳಲಾಗಿದೆ. ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಿಂದಲೇ ನಡೆದ ಗೂಗಲ್‌ಮೀಟ್ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ ಆಗಿದೆ ಎನ್ನಲಾಗಿದೆ. ಇನ್ನು ಈ ವಿಚಾರವಾಗಿ ಗೂಗಲ್ ಮೀಟ್‌ನ ಆಡಿಯೋ, ವಿಡಿಯೋ ಸಂಭಾಷಣೆಯನ್ನು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

Belagavi session Demand collection of money in wine shop reduction of government allowance

ಅಧಿವೇಶನದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಅಬಕಾರಿ, ಪೌರಾಡಳಿತ, ಕಂದಾಯ, ತಾಲ್ಲೂಕು ಪಂಚಾಯಿತಿ ಹಾಗೂ ಪಶು ಸಂಗೋಪನೆ ಇಲಾಖೆಯಿಂದ ಹಣ ಸಂಗ್ರಹ‌ದ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಪ್ರತಿಯೊಂದು ವೈನ್ ಶಾಪ್‌ಗಳಿಂದ ತಲಾ 13 ಸಾವಿರ ಹಣ ವಸೂಲಿ ಮಾಡಿದ್ದಾರೆ. ಅಲ್ಲದೇ ಇದರಿಂದ ಪ್ರತಿ ಕ್ವಾಟರ್ ಬೆಲೆಯಲ್ಲಿ ಮೂವತ್ತು ರೂಪಾಯಿ ಹೆಚ್ಚಳ ಮಾಡಲಾಗಿದೆ. ಪಟ್ಟಣ ಪಂಚಾಯತಿ - 50 ಸಾವಿರ, ಪುರಸಭೆ - 75 ಸಾವಿರ, ನಗರಸಭೆಯಿಂದ 1 ಲಕ್ಷ ರೂಪಾಯಿ ಹಣ ವಸೂಲಿ ಮಾಡಲಾಗಿದೆ ಎಂದು ಗಡಾದ್ ಆರೋಪ ಮಾಡಿದ್ದಾರೆ.

ಹೊಸ ತಾಲ್ಲೂಕಿನಿಂದ ಪ್ರತಿಯೊಂದು ಕಚೇರಿಯಿಂದ 25 ಸಾವಿರ ಸಂಗ್ರಹವಾಗಿದೆ. ಹಳೆಯ ತಾಲ್ಲೂಕಿನಲ್ಲಿ ಪ್ರತಿ ಕಚೇರಿಯಿಂದ 50 ಸಾವಿರ ಹಣ ಸಂಗ್ರಹ ಹಾಗೂ ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯಿಂದ 50 ಸಾವಿರ ಹಣ ವಸೂಲಿ ಮಾಡಿರುವ ಆರೋಪ ಇದೆ. ಇನ್ನು ಪಶುವೈದ್ಯರಿಂದ ನಾಲ್ಕು ಸಾವಿರ, ಪರೀಕ್ಷಕರಿಂದ 2500ರೂಪಾಯಿ, ವೈದ್ಯಕೀಯ ಸಹಾಯಕರಿಂದ 1500 ರೂಪಾಯಿ ಸಂಗ್ರಹ ಮಾಡಿರುವ ಆರೋಪ ಇದೆ.

ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ದಾಖಲಿಸಿದ್ದಾರೆ. ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಸರ್ಕಾರದಿಂದ ಭತ್ಯೆ ನೀಡಬಾರದು ಎಂದು ಮನವಿ ಸಲ್ಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+