ಕನಕಪುರದಲ್ಲಿ ದಾರಿಹೋಕರ ಮೇಲೆ ಕರಡಿ ದಾಳಿ
ಕನಕಪುರ, ಫೆಬ್ರವರಿ 27: ಕೆಲಸಕ್ಕೆಂದು ತೆರಳುತ್ತಿದ್ದ ದಾರಿಹೋಕರ ಮೇಲೆ ಕರಡಿ ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ತಾಲೂಕಿನ ಕಾಟಮ್ಮನದೊಡ್ಡಿ ಬಳಿ ನಡೆದಿದೆ. ತಿಗಳರಹೊಸಹಳ್ಳಿ ಗ್ರಾಮದ ಚಿಕ್ಕಹೈದಯ್ಯನ ಮಗ ಅಶ್ವಥ್ ಮತ್ತು ವೆಂಕಟಲಕ್ಷ್ಮಮ್ಮ ಗಾಯಗೊಂಡವರಾಗಿದ್ದಾರೆ.
ಇವರಿಬ್ಬರು ತಿಗಳರಹೊಸಹಳ್ಳಿ ಗ್ರಾಮದಿಂದ ಕಾಟಮ್ಮನದೊಡ್ಡಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಹಠಾತ್ತಾಗಿ ಎದುರಿಗೆ ಬಂದ ಕರಡಿ ಅಶ್ವಥ್ ನ ಕೈಗೆ ಕಚ್ಚಿದೆ. ವೆಂಕಟಲಕ್ಷ್ಮಮ್ಮ ಮೇಲೆ ಎರಗಿ ಕೈ ಮತ್ತು ಸೊಂಟವನ್ನು ಕಚ್ಚಿ ಹಾಕಿದೆ. ದಿಢೀರ್ ದಾಳಿಯಿಂದ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯರು ಸಾರ್ವಜನಿಕ ಆಸ್ವತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರ್ ಎಫ್ ಒ ದಿನೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರದಿಂದ ನೀಡಲಾಗುವ ಪರಿಹಾರವನ್ನು ದೊರಕಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications