• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುತ್ರಿಯ ಜೊತೆ ಯಡಿಯೂರಪ್ಪ ಭೇಟಿಯಾದ ಬಿ. ಸಿ. ಪಾಟೀಲ್!

|

ಬೆಂಗಳೂರು, ಆಗಸ್ಟ್ 04 : "ಹಿರೇಕೆರೂರು ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂದು ಕ್ಷೇತ್ರದ ಜನರ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇನೆ" ಎಂದು ಬಿ. ಸಿ. ಪಾಟೀಲ್ ಹೇಳಿದರು.

ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಬಿ. ಸಿ. ಪಾಟೀಲ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಭಾನುವಾರ ಪುತ್ರಿ ಸೃಷ್ಠಿ ಪಾಟೀಲ್ ಜೊತೆ ಅವರು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿಯಾದರು.

ಇನ್ನೂ ಹತ್ತು ಶಾಸಕರು ರಾಜೀನಾಮೆ ಕೊಡ್ತಾರೆ: ಬಿಸಿ ಪಾಟೀಲ್ಇನ್ನೂ ಹತ್ತು ಶಾಸಕರು ರಾಜೀನಾಮೆ ಕೊಡ್ತಾರೆ: ಬಿಸಿ ಪಾಟೀಲ್

ಮಾಧ್ಯಮಗಳ ಜೊತೆ ಮಾತನಾಡಿದ ಬಿ. ಸಿ. ಪಾಟೀಲ್, "ಸೌಜನ್ಯಕ್ಕಾಗಿ ಹಾಗೂ ಶುಭಾಶಯ ತಿಳಿಸಲು ಯಡಿಯೂರಪ್ಪರನ್ನು ಭೇಟಿ ಮಾಡಿದೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತುಕೊಡುವುದಕ್ಕೆ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ" ಎಂದರು.

ಸರ್ಕಾರದ ವಿರುದ್ಧ ಕೆಂಪು ಬಾವುಟ ಹಾರಿಸಿದ ಶಾಸಕ ಬಿ.ಸಿ.ಪಾಟೀಲ್ಸರ್ಕಾರದ ವಿರುದ್ಧ ಕೆಂಪು ಬಾವುಟ ಹಾರಿಸಿದ ಶಾಸಕ ಬಿ.ಸಿ.ಪಾಟೀಲ್

ಪುತ್ರಿಯ ಜೊತೆ ಬಿ. ಸಿ. ಪಾಟೀಲ್ ಆಗಮಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಹಿರೇಕೆರೂರು ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾದರೆ ಸೃಷ್ಠಿ ಪಾಟೀಲ್ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ, ಬಿ. ಸಿ. ಪಾಟೀಲ್ ಈ ಸುದ್ದಿಯನ್ನು ತಳ್ಳಿ ಹಾಕಿದರು.

ಬಿಜೆಪಿ ಸೇರುವ ಕುರಿತು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದೇನು?ಬಿಜೆಪಿ ಸೇರುವ ಕುರಿತು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದೇನು?

ಪುತ್ರಿ ಚುನಾವಣೆಗೆ ಸ್ಪರ್ಧೆ ಮಾಡೋಲ್ಲ

ಪುತ್ರಿ ಚುನಾವಣೆಗೆ ಸ್ಪರ್ಧೆ ಮಾಡೋಲ್ಲ

ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಬಿ. ಸಿ. ಪಾಟೀಲ್, "ಹಿರೇಕೆರೂರು ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂದು ಕ್ಷೇತ್ರದ ಜನರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಮಗಳು ಸೃಷ್ಠಿ ಪಾಟೀಲ್ ಸ್ಪರ್ಧೆ ಮಾಡುವುದಿಲ್ಲ. ಚುನಾವಣಾ ಕಣಕ್ಕೆ ಇಳಿಸುವ ಚಿಂತನೆ ಇಲ್ಲ" ಎಂದು ಸ್ಪಷ್ಟನೆ ನೀಡಿದರು.

ಸ್ಪೀಕರ್ ತಪ್ಪು ಮಾಹಿತಿ ಕೊಟ್ಟಿದ್ದಾರೆ

ಸ್ಪೀಕರ್ ತಪ್ಪು ಮಾಹಿತಿ ಕೊಟ್ಟಿದ್ದಾರೆ

"ಶಾಸಕ ಸ್ಥಾನದಿಂದ ಅನರ್ಹರಾದರೂ ಚುನಾವಣೆ ಸ್ಪರ್ಧೆ ಮಾಡಲು ಅಡ್ಡಿ ಇಲ್ಲ. ಈ ವಿಚಾರದಲ್ಲಿ ಸ್ಪೀಕರ್ ತಪ್ಪು ಮಾಹಿತಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಶಾಸಕರು ಅನರ್ಹರಾದ ಬಳಿಕ ಕೋರ್ಟ್ ಅನುಮತಿ ಪಡೆದು ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ನಾವೂ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು" ಎಂದು ಬಿ. ಸಿ. ಪಾಟೀಲ್ ಹೇಳಿದರು.

ಕ್ಷೇತ್ರದ ಜನರು ಹೇಳಿದಂತೆ ಕೇಳುವೆ

ಕ್ಷೇತ್ರದ ಜನರು ಹೇಳಿದಂತೆ ಕೇಳುವೆ

ಬಿ.ಸಿ.ಪಾಟೀಲ್ ಬಿಜೆಪಿ ಸೇರುವುದಕ್ಕೆ ಮಾಜಿ ಶಾಸಕ ಯು.ಬಿ.ಬಣಕಾರ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, "ವಿರೋಧದ ವಿಚಾರ ನನಗೆ ಗೊತ್ತಿಲ್ಲ. ನಾನು ಕ್ಷೇತ್ರದ ಜನರು ಹೇಗೆ ಹೇಳುತ್ತಾರೋ ಹಾಗೆ ಕೇಳುತ್ತೇನೆ" ಎಂದು ಸ್ಪಷ್ಟನೆ ಕೊಟ್ಟರು.

ಕಾನೂನಿನ ಮೇಲೆ ನಂಬಿಕೆ ಇದೆ

ಕಾನೂನಿನ ಮೇಲೆ ನಂಬಿಕೆ ಇದೆ

"ನಮ್ಮ ವಕೀಲರಾದ ಮುಕುಲ್ ರೋಹ್ಟಗಿ ಅವರ ಜೊತೆ ಶನಿವಾರ ಚರ್ಚೆ ನಡೆಸಿ ಆಗಮಿಸಿದ್ದೇನೆ. ನ್ಯಾಯಾಲಯ ಮತ್ತು ಕಾನೂನಿನ ಮೇಲೆ ನಂಬಿಕೆ ಇದೆ. ಸ್ಪೀಕರ್ ತೆಗೆದುಕೊಂಡ ನಿರ್ಧಾರ ಸರಿ ಇಲ್ಲ. ಸ್ಪೀಕರ್ ಬಗ್ಗೆ ನಮಗೆ ಸಾಕಷ್ಟು ನಂಬಿಕೆ ಇತ್ತು. ಸದನದಲ್ಲಿ ಕೂತು ನಾನು ಹರಿಶ್ಚಂದ್ರ ಹಾಗೆ ಇದ್ದೇನೆ, ಹೀಗೆ ಇದ್ದೇನೆ ಎಂದು ಹೇಳುತ್ತಿದ್ದರು. ನನ್ನ ಕ್ಷೇತ್ರದ ಜನರು ನನ್ನ ಜೊತೆ ಇದ್ದಾರೆ" ಎಂದು ಬಿ. ಸಿ. ಪಾಟೀಲ್ ಹೇಳಿದರು.

English summary
Hirekerur MLA B.C. Patil who disqualified and expelled from Congress met the Karnataka Chief Minister B.S.Yediyurappa. My daughter Srushti Patil will not contest for elections he clarified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X