ಕೊರೊನಾ ವೈರಸ್ ಸರವಣ ಅವರಿಗೆ ಮಾತ್ರ ಬರಲ್ಲ ಎಂದ ಹೊರಟ್ಟಿ

ಬೆಂಗಳೂರು, ಮಾರ್ಚ್ 4: ಕೊರೊನಾ ಯಾರಿಗೆ ಬಂದರೂ ಸವರಣ ಅವರಿಗೆ ಮಾತ್ರ ಬರುವುದಿಲ್ಲ ಎಂದು ಬಸವರಾಜ ಹೊರಟ್ಟಿ ಗೇಲಿ ಮಾಡಿದ್ದಾರೆ.

ವಿಧಾನಪರಿಷತ್ ಸದಸ್ಯ ಸರಣವಣ ಮಂಗಳವಾರ ಕಲಾಪಕ್ಕೆ ಮಾಸ್ಕ್ ಧರಿಸಿ ಬಂದಿದ್ದರು. ಅದನ್ನು ಗೇಲಿ ಮಾಡಿರುವ ಹೊರಟ್ಟಿ ಕೊರೊನಾ ಯಾರಿಗೆ ಬಂದರೂ ಸರವಣ ಅವರಿಗೆ ಮಾತ್ರ ಬರುವುದಿಲ್ಲ ಎಂದು ಹೇಳಿದ್ದಾರೆ.

ಕಲಾಪದಲ್ಲಿ ಸರವಣ ಮಾತನಾಡಿ, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಿನ್ನೆ ಮಾಸ್ಕ್ ಹಾಕಿಕೊಂಡು ಕಲಾಪಕ್ಕೆ ಬಂದಿದ್ದೆ. ಆದರೆ ಕೆಲವರು ನಿಮಗೆ ಕೊರೊನಾ ಬಂದಿದೆಯಾ ಅಂತ ವಿಧಾನ ಪರಿಷತ್‍ನ ಕೆಲ ಸದಸ್ಯರು ರೇಗಿಸಿದರು ಎಂದು ಹೇಳಿದ್ದಾರೆ.

Basavaraj Horatti Statement On Coronavirus

ಈ ಮಧ್ಯೆ ಧ್ವನಿಗೂಡಿಸಿದ ತೇಜಸ್ವಿನಿ ರಮೇಶ್, ಸರವಣ ಅವರ ಆರೋಗ್ಯ ತಪಾಸಣೆ ಆಗಲೇ ಬೇಕು. ಅನುಮಾನ ನಿವಾರಣೆಯಾಗಲು ತಪಾಸಣೆ ಅಗತ್ಯ ಎಂದು ಹೇಳಿದರು. ಆಗ ಸರವಣ, ನಾನು ಆರೋಗ್ಯವಾಗಿದ್ದೇನೆ. ನೀವು ಕುಳಿತುಕೊಳ್ಳಿ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊರೊನಾ ವೈರಸ್ ವಿವಿಧ ದೇಶಗಳಿಗೆ ಹರಡಿ ಆತಂಕ ಹೆಚ್ಚಿಸಿದೆ. ಅದು ವಿರೋಧ ಪಕ್ಷ, ಆಡಳಿತ ಪಕ್ಷ ಎಂದು ಭೇದಭಾವ ಮಾಡುವುದಿಲ್ಲ. ನಿಮಗೆ ಸ್ವಲ್ಪ ಜಾಸ್ತಿ ಇದೆ ಎಂದು ವಿಪಕ್ಷ ನಾಯಕ ಕಾಲೆಳೆದಿದ್ದರು.

ರಾಜ್ಯದ ಜನರು ಕೊರೊನಾ ಬಗ್ಗೆ ಆತಂಕದಲ್ಲಿ ಇದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎನ್ನುವುದನ್ನು ಚರ್ಚಿಸಲು ಮಾಸ್ಕ್ ಹಾಕಿಕೊಂಡು ಬಂದಿದ್ದೆ. ಆದರೆ ಸದನವನ್ನು ಗಲಾಟೆಗೆ ತಳ್ಳಿದ್ರಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+