'Bagalkot: ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ, ಓಬಿಸಿ ವಿರೋಧಿ ಸರ್ಕಾರವಿದೆ; ಕಾಂಗ್ರೆಸ್‌ಗೆ ನಿಮ್ಮ ಶಕ್ತಿ ತೋರಿಸಿ''
ಬಾಗಲಕೋಟೆ: ಗಂಗಾ ಮತಸ್ಥರು ಶಿಕ್ಷಿತರಾಗಿ ನೀವು ಎಲ್ಲಿದ್ದೀರಾ ಅಲ್ಲಿ ಗೆಲುವಿದೆ ಅಂತ ತೋರಿಸಿರಿ. ಆಗ ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಬಾಗಿಲಿಗೆ ಬರುತ್ತವೆ. ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ವಿರೋಧಿ ಸರ್ಕಾರ ಇದೆ. ಯಾರ ಮತ ಪಡೆದಿದ್ದಾರೊ ಅವರಿಗೆ ಅನ್ಯಾಯ ಮಾಡುವ ಸರ್ಕಾರ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.
ಬಾಗಲಕೋಟೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಬಮ್ಮಣಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ, ಅವರ ಪರವಾಗಿ ಮತಯಾಚನೆಯ ಬಹಿರಂಗ ಸಭೆಯಲ್ಲಿ ಅವರು ಮಾನಾಡಿದರು. ಅಂಬಿಗರ ಚೌಡಯ್ಯನವರ ಕುಲಬಾಂಧವರನ್ನು ನೋಡುವುದು ಬಹಳ ಸಂತೋಷ ತರುತ್ತದೆ. ಅತ್ಯಂತ ಕಠಿಣ ಪರಿಶ್ರಮ ಪಡುವ ಕುಲ ಇದು. ಬಹಳಷ್ಟು ಸಾಹಸ ಮಯವಾಗಿ ತಮ್ಮ ಬದುಕು ನಡೆಸುವುದು ಅಂಬಿಗರ ಸಮುದಾಯ, ಬದುಕಿನ ಮೇಲೆ ಬಹಳ ವಿಶ್ವಾಸ ಇಟ್ಟವರು. ಹಡಗನ್ನು ನದಿಗೆ ಹಾಕಿದಾಗ ಅದು ದಡಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವ ವಿಶ್ವಾಸ ನಾವಿಕ ಇಟುಕೊಂಡಿರುತ್ತಾನೆ. ಅಲ್ಲದೇ ಗಾಳ ಹಾಕಿದರೆ ಇಂದು ಮೀನು ಸಿಗದಿದ್ದರೂ ನಾಳೆ ಸಿಗುತ್ತದೆ ಎನ್ನುವ ನಂಬಿಕೆಯಿಂದ ಬದುಕುವ ಸಮುದಾಯ. ಈ ಸಮುದಾಯ ಬದುಕಲ್ಲಿ ಮುಂದೆ ಬರಬೇಕು ಎಂದರು.

ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತು ಆಳಿದರು. ಇಂದಿನ 21 ನೇ ಶತಮಾನದಲ್ಲಿ ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ. ನಾನು ಕಳಕಳಿಯ ವಿನಂತಿ ಮಾಡುವುದು ಇಷ್ಟೆ ನಿಮ್ಮ ಕಠಿಣ ಪರಿಶ್ರಮದ ಜೊತೆಗೆ ಜ್ಞಾನ ಕೊಟ್ಟರೆ ಜಗತ್ತನ್ನು ಆಳುತ್ತೀರಿ. ಇಡೀ ಜಗತ್ತಿನಲ್ಲಿ ಈ ಸಮಾಜ ಜ್ಞಾನ ಪಡೆದುಕೊಳ್ಳಬೇಕು. ಶಿಕ್ಷಣವಂತರಾದರೆ ನಿಮ್ಮ ಕೈ ಯಾವಾಗಲೂ ಭೂಮಿಯನ್ನು ನೋಡುತ್ತದೆ. ಬೇಡುವ ಕೈ ಆಕಾಶದ ಕಡೆಗೆ ನೋಡುತ್ತದೆ. ನೀಡುವ ಕೈ ಭೂಮಿಯ ಕಡೆಗೆ ನೋಡುತ್ತದೆ. ಜ್ಞಾನ ಪಡೆದುಕೊಳ್ಳಿ ನಿಮಗೂ ನೀಡುವ ಶಕ್ತಿ ಬರುತ್ತದೆ ಎಂದು ತಿಳಿ ಹೇಳಿದರು.
ಗಂಗಾ ಮತಸ್ಥರು ಸಾವಿರಾರು ವರ್ಷಗಳಿಂದ ತುಳಿತಕ್ಕೊಳಪಟ್ಟಿದ್ದೀರಿ. ಅಂಬಿಗರ ಚೌಡಯ್ಯನ ವಚನದಲ್ಲಿ ಬದುಕಿನ ಮುಖ ಅನಾವರಣಗೊಂಡಿದೆ. ಅತ್ಯಂತ ಕಷ್ಟ, ಅವಮಾನ, ಅಪಮಾನ ಎದ್ದು ಕಾಣಿಸುತ್ತದೆ. ತನ್ನ ಸಮಾಜ ಯಾವ ಅವಮಾನ ಅಪಮಾನ ಸಹಿಸಿಕೊಂಡಿತ್ತೊ ಅದನ್ನೇ ವಚನದಲ್ಲಿ ಹೇಳಿದ್ದಾರೆ. ಸತ್ಯವನ್ನೇ ಹೇಳಿದ್ದಾರೆ. ಅದಕ್ಕೆ ನಿಜಶರಣ ಅಂತ ಕರೆಯುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಏನು ಮಾಡಿದೆ, ನಿಮ್ಮ ಮಹತ್ವ ತಿಳಿಸಿ
ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ವಿರೋಧಿ ಸರ್ಕಾರ ಇದೆ. ಯಾರ ಮತ ಪಡೆದಿದ್ದಾರೊ ಅವರಿಗೆ ಅನ್ಯಾಯ ಮಾಡುವ ಸರ್ಕಾರ ಇದೆ. ನೀವೆಲ್ಲ ಕಾಂಗ್ರೆಸ್‌ಗೆ ಮತ ಹಾಕಿದ್ದೀರಿ ಆದರೆ, ಕಾಂಗ್ರೆಸ್ ನವರು ನಿಮಗೆ ಏನು ಮಾಡಿದ್ದಾರೆ. ನಿಮ್ಮ ಸಮುದಾಯಕ್ಕೆ, ತಾಯಂದಿರಿಗೆ ಏನು ಮಾಡಿದ್ದಾರೆ. ಅವರಿಗೆ ಗೊತ್ತಿದೆ ನೀವೇನು ಕೇಳುವುದಿಲ್ಲ. ಸುಮ್ಮನೆ ಮತ ಹಾಕಿ ಹೋಗುತ್ತೀರಿ, ನಿಮ್ಮನ್ನು ಓಟ್ ಬ್ಯಾಂಕ್ ಅಂತ ತಿಳಿದುಕೊಂಡಿದ್ದಾರೆ. ಆದ್ದರಿಂದ ನಿಮ್ಮ ಮಹತ್ವ ತಿಳಿಸಿರಿ.
ನಿಮ್ಮ ಮತ ಕೇಳಬೇಕೆಂದರೆ ಸಮುದಾಯದ ಪರ ಸ್ವಲ್ಪನಾದರೂ ಕೆಲಸ ಮಾಡಿರಬೇಕು. ಆಗ ನೈತಿಕ ಶಕ್ತಿ ಬರುತ್ತದೆ. ಈ ಕ್ಷೇತ್ರದಲ್ಲಿ ಬದಲಾವನಣೆ ಮಾಡುವ ಅವಕಾಶ ಇದೆ. ಈಗಾಗಲೇ ಹಣದ ಶಕ್ತಿಯ ಜೊತೆಗೆ ಬರುತ್ತಾರೆ. 2000 ರೂ. ಮೂರು ದಿನದ ಹೆಣ್ಣು ಮಕ್ಕಳ ಕೂಲಿ, ಅದನ್ನು ಕೊಟ್ಟು ನಿಮ್ಮ ಮತ ಖರೀದಿ ಮಾಡುತ್ತಾರೆ. ತಾತ್ಕಾಲಿಕ ಅಭಿವೃದ್ಧಿ ಬೇಕಾ ಶಾಸ್ತ್ರತ ಅಭಿವೃದ್ಧಿ ಬೇಕಾ? ಎಂದು ಅವರು ಪ್ರಶ್ನೆ ಮುಂದಿಟ್ಟರು.
ಮೀಸಲಾತಿ ವರ್ಗೀಕರಣದಲ್ಲಿ ನ್ಯಾಯ ಕೊಡಿಸುವೆ
ಅಂದು ಮಾಜಿಸಿಎಂ ಬಿಎಸ್ ಯಡಿಯೂರಪ್ಪ ಅವರು ನನ್ನನ್ನು ನೀರಾವರಿ ಸಚಿವನಾಗಿ ಮಾಡುತ್ತೇನೆ. ನೀನು ರೈತರಿಗೆ ನ್ಯಾಯ ಕೊಡುತ್ತೀಯ ಎಂದು ಹೇಳಿದರು. ಅಂದು ರಾತ್ರಿ ನನಗೆ ಕಣ್ಣಲ್ಲಿ ನೀರು ಬಂತು. ಗಂಗಮ್ಮನ ಮಗನಿಗೆ ಗಂಗಮ್ಮನ ಮಕ್ಕಳ ಸೇವೆ ಮಾಡುವ ಭಾಗ್ಯ ದೊರೆಯಿತು. ಭಾವನಾತ್ಮಕವಾಗಿರುವ ಸಮಾಜ ಇದು. ರೈತರು, ಭೂಮಿ, ನೀರು, ಇದರ ಮೇಲೆ ನಂಬಿಕೊಂಡಿರುವ ಅಂಬಿಗರು, ಎಸ್‌ಸಿ, ಎಸ್‌ಟಿ, ಬಡವರು ಇವರ ಬಗ್ಗೆ ಭಾವನಾತ್ಮಕ ಸಂಬಂಧ ಇಲ್ಲದಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ. ಹೃದಯದ ಅಂತರಾಳದಿಂದ ಸೇವೆ ಮಾಡಿದರೆ ನ್ಯಾಯ ಕೊಡಿಸಲು ಸಾಧ್ಯ. ನಿಮಗೆ ಮೀಸಲಾತಿ ವರ್ಗೀಕರಣದಲ್ಲಿ ಅನ್ಯಾಯ ಆಗಿದೆ. ನಾನು ಪ್ರಾಮಾಣಿಕ ನಿಮಗೆ ನ್ಯಾಯ ಕೊಡಿಸುವ ಪಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದು ಬದಲಾವಣೆ ತರುವ ಚುನಾವಣೆ, ಎಚ್ಚೆತ್ತುಕೊಳ್ಳಿ
ಈ ಚುನಾವಣೆ ಬದಲಾವಣೆ ಮಾಡುವ, ಸುಳ್ಳು ಹೇಳವವರನ್ನು ಮನೆಗೆ ಕಳುಹಿಸುವ ಚುನಾವಣೆ. ನಿಮಗೆ ಅನ್ಯಾಯ ಮಾಡಿ, ನಿಮ್ಮನ್ನು ಜೈಲಿಗೆ ಕಳುಹಿಸುವಂತಹ ನಾಯಕರನ್ನು ಮನೆಗೆ ಕಳುಹಿಸುವ ಅವಕಾಶ ಸಿಕ್ಕಿದೆ. ಶಿವಾಜಿ ಮಹಾರಾಜರ ಜಯಂತಿಯ ದಿನ ಗಲಾಟೆಯಾದಾಗ ಬಂಧಿತರಾದವರು ಎಲ್ಲರೂ ಅಂಬಿಗರ ಮಕ್ಕಳು. ರಾಜಕೀಯ ಶಕ್ತಿ ಎಲ್ಲಿಯವರೆಗೂ ನಿಮ್ಮ ಕೈಗೆ ಬರುವುದಿಲ್ಲವೋ ಅಲ್ಲಿಯವರೆಗೂ ನಿಮಗೆ ನ್ಯಾಯ ಪಡೆದುಕೊಳ್ಳಲು ಸಾಧ್ಯವಿಲ್ಲ. ನೀವು ಎಲ್ಲಿ ನಿಲ್ಲುತೀರಿ ಅಲ್ಲಿ ಗೆಲುವಾಗುತ್ತದೆ. ಕೆಲವು ಸಮುದಾಯಗಳಿಗೆ ಜ್ಞಾನದ ಜೊತೆಗೆ ರಾಜಕೀಯ ಶಕ್ತಿ ಇದೆ. ಅದಕ್ಕಾಗಿ ಅವರು ಆ ಸ್ಥಾನಕ್ಕೆ ಹೋಗಿದ್ದಾರೆ. ನೀವು ಎಲ್ಲಿದ್ದೀರಾ ಅಲ್ಲಿ ಗೆಲುವಿದೆ ಅಂತ ತೋರಿಸಿ ಆಗ ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಬಾಗಿಲಿಗೆ ಬರುತ್ತವೆ.
ಮನೆಯಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿರಬೇಕು. ಹೊರಗಡೆ ಹೋದವರು ಸಂಜೆ ಮನೆಗೆ ಬರುತ್ತಾರೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮೂರು ವರ್ಷದಿಂದ ಈ ಕ್ಷೇತದಲ್ಲಿ ಅಭಿವೃದ್ಧಿ ಇಲ್ಲ. ಅದಕ್ಕಾಗಿ ಒಬ್ಬ ಪ್ರಾಮಾಣಿಕ ಸೇವಕನನ್ನು ಆಯ್ಕೆ ಮಾಡಬೇಕು. ವೀರಣ್ಣ ಚರಂತಿಮಠ ಅವರಿಗೆ ಆಶೀರ್ವಾದ ಮಾಡಬೇಕು. 2028ಕ್ಕೆ ನಿಮ್ಮದೇ ಬಡವರ, ಎಸ್‌ಸಿ, ಎಸ್‌ಟಿ, ಸಾಮಾಜಿಕ ನ್ಯಾಯದ ಪರ, ರೈತರ ಪರ ಸರ್ಕಾರ ಬರುತ್ತದೆ. ಒಳ ಮೀಸಲಾತಿ ವಿಚಾರದಲ್ಲಿ ನಾನು ಮುನ್ನುಗ್ಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದು ತಮ್ಮ ಅವಧಿಯ ಕೆಲಸಗಳ ಬಗ್ಗೆ ತಿಳಿಸಿ ಅಭ್ಯರ್ಥಿ ಪರ ಮತಯಾಚಿಸಿದರು.
-
ಬಾಗಲಕೋಟೆಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ರೆ ಪಕ್ಷ ಮತ್ತೆ ಗೆಲ್ಲುತ್ತಿತ್ತೇ? ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ತಿರುಗೇಟು -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ -
ದಾವಣಗೆರೆ ಟಿಕೆಟ್ ವಿಚಾರವಾಗಿ ನಾನು ಮುನಿಸಿಕೊಂಡಿರಲಿಲ್ಲ: ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ -
ದಾವಣಗೆರೆ ಉಪಚುನಾವಣೆ: ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ ಕಡೆ – ಸಲೀಂ ಅಹಮದ್ -
'By Election: ಕಾಂಗ್ರೆಸ್ನಿಂದ ವೀರಶೈವ ಲಿಂಗಾಯತರನ್ನು ಒಡೆಯುವ ಪ್ರಯತ್ನ'' -
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್













Click it and Unblock the Notifications