ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರಿ ಕೋವಿಡ್ ಶಂಕಿತರ ಪತ್ತೆ: ಆತಂಕ ತಂದ ಗೃಹ ಸಚಿವರ ಹೇಳಿಕೆ!

|
Google Oneindia Kannada News

ಬೆಂಗಳೂರು, ಡಿ. 27: ನೈಟ್ ಕರ್ಫ್ಯೂ ಮೂಲಕ ರೂಪಾಂತರಿ ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿತ್ತು. ನೈಟ್ ಕರ್ಫ್ಯೂ ಹೇರಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಹೇರಿಕೆ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದಕ್ಕೆ ಸರಿದಿದೆ. ಆದರೆ ರೂಪಾಂತರಗೊಂಡಿರುವ ವೈರಸ್ ನಿಯಂತ್ರಿಸಲು ಏಕಾಏಕಿ ನೈಟ್ ಕರ್ಫ್ಯೂ ಹೇರಲು ಮುಂದಾಗಿದ್ದ ರಾಜ್ಯ ಸರ್ಕಾರ, ಇಂಗ್ಲೆಂಡ್‌ನಿಂದ ಬಂದಿರುವ ಎಲ್ಲರನ್ನೂ ಪತ್ತೆ ಮಾಡುವುದು ಸಾಧ್ಯವಾಗಿಲ್ಲ ಎಂಬ ಆತಂಕಕಾರಿ ವಿಚಾರವನ್ನು ಸ್ವತಃ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹಂಚಿಕೊಂಡಿದ್ದಾರೆ.

ಹೀಗಾಗಿ ಕೇವಲ ಮಾರ್ಗಸೂಚಿ ಬದಲಾಯಿಸಲು ಮಾತ್ರ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆಯಾ ಎಂಬ ಸಂಶಯ ಇದೀಗ ಜನರಲ್ಲಿ ಮೂಡುವಂತಾಗಿದೆ. ರೂಪಾಂತರಿ ಕೊರೊನಾ ವೈರಸ್ ತೀವ್ರವಾಗಿ ಕಾಣಿಸಿಕೊಂಡಿರುವ ಇಂಗ್ಲೆಂಡ್‌ನಿಂದ ಬಂದವರನ್ನು ಪತ್ತೆ ಮಾಡುತ್ತಿದ್ದೇವೆ. ಅವರನ್ನೆಲ್ಲ ಸುಳಿವು ಹಿಡಿದು ಪತ್ತೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಇನ್ನೂ ಇಂಗ್ಲೆಂಡ್‌ನಿಂದ ಬಂದವರನ್ನು ಪತ್ತೆ ಮಾಡುವುದರಲ್ಲಿದೆ. ಅಷ್ಟರಲ್ಲಿ ಅವರು ಸೋಂಕನ್ನು ತೀವ್ರವಾಗಿ ಹರಡಬಹುದು ಎಂಬ ಹೊಸ ಆತಂಕವೀಗ ಶುರುವಾಗಿದೆ.

ಇನ್ನೂ ಪತ್ತೆಯಾಗದ ಸೋಂಕಿತರು?

ಇನ್ನೂ ಪತ್ತೆಯಾಗದ ಸೋಂಕಿತರು?

ಇಂಗ್ಲೆಂಡ್‌ನಿಂದ ಬಂದವರನ್ನು ಪತ್ತೆ ಮಾಡುವುದನ್ನು ಬಿಟ್ಟು ನೈಟ್ ಕರ್ಫ್ಯೂ, ಮಾರ್ಗಸೂಚಿ ಬದಲಾವಣೆ ಮೂಲಕ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ ಎಂಬ ಆರೋಪಗಳು ಇದೀಗ ಕೇಳಿ ಬಂದಿವೆ. ಇದಕ್ಕೆ ಕಾರಣವಾಗಿರುವುದು ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಇಂಗ್ಲೆಂಡ್‌ನಿಂದ ಬಂದವರನ್ನು ಹುಡುಕುತ್ತಿದ್ದೇವೆ. ಅವರು ಕೊಟ್ಟಿರುವ ವಿಳಾಸದ ಮೂಲಕ ಎಲ್ಲರನ್ನೂ ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಂಗ್ಲೆಂಡ್‌ನಿಂದ ಬಂದ ಎಲ್ಲರನ್ನು ರಾಜ್ಯ ಸರ್ಕಾರ ಪತ್ತೆ ಮಾಡಿಲ್ಲ ಎಂಬುದು ಗೃಹ ಸಚಿವ ಬೊಮ್ಮಾಯಿ ಅವರ ಹೇಳಿಕೆಯಿಂದ ತಿಳಿದು ಬರುತ್ತಿದೆ. ಇದು ಜನರಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ.

ರೂಪಾಂತರಿ ಕೊರೊನಾ ವೈರಸ್ ಪರೀಕ್ಷೆ

ರೂಪಾಂತರಿ ಕೊರೊನಾ ವೈರಸ್ ಪರೀಕ್ಷೆ

ಇಂಗ್ಲೆಂಡ್‌ನಿಂದ ಬಂದವರನ್ನು ಪತ್ತೆ ಹಚ್ಚುತ್ತಿದ್ದೇವೆ. ಈಗಾಗಲೇ ಅಲ್ಲಿಂದ ಬಂದವರನ್ನು ಪತ್ತೆ ಹಚ್ಚಿದ್ದೇವೆ. ರೂಪಾಂತರಿ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರಿಗೆಲ್ಲ ದೂರವಾಣಿ ಮೂಲಕ ತಿಳಿಸಿದ್ದೇವೆ. ಮೊದಲನೇ ಹಂತದಲ್ಲಿ ಅಲ್ಲಿಂದ ಬಂದವರಿಗೆ ಗೊತ್ತಿರಲಿಲ್ಲ. ಹೀಗಾಗಿ ಯಾವುದೇ ನಿರ್ಬಂಧ ಇಲ್ಲದೆ ಅವರೆಲ್ಲ ರಾಝ್ಯದಲ್ಲಿ ಓಡಾಡಿದ್ದಾರೆ. ಅವರಿಗೂ ಕೂಡ ದೂರವಾಣಿ ಮೂಲಕ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನ್ಯೂ ಈಯರ್ ಪಾರ್ಟಿ

ನ್ಯೂ ಈಯರ್ ಪಾರ್ಟಿ

ಅದರೊಂದಿಗೆ, ರೂಪಾಂತರಿ ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ರೂಪಾಂತರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾಳೆ (ಡಿ.28) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ. ಆ ವೈರಸ್ ತೀವ್ರವಾಗಿ ಹರಡುವ ಗುಣ ಹೊಂದಿದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿಕೊಂಡು ರೂಪಾಂತರಗೊಂಡಿರುವ ಕೋವಿಡ್‌ ಹರಡಲು ಅವಕಾಶ ಮಾಡಿಕೊಡಬಾರದು. ಬಹಿರಂಗ ಪಾರ್ಟಿಗೆ ಅವಕಾಶ ಮಾಡಿ ಕೊಟ್ಟಲ್ಲಿ ಬಹಳ ಜನರು ಸೇರುತ್ತಾರೆ, ಅವರನ್ನು ನಿಯಂತ್ರಣ ಮಾಡುವುದು ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಬಹಿರಂಗ ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶ ಇಲ್ಲ ಎಂದು ಈಗಾಗಲೇ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಸರ್ಕಾರದ ಬೇಜವಾಬ್ದಾರಿ?

ಸರ್ಕಾರದ ಬೇಜವಾಬ್ದಾರಿ?

ಇಂಗ್ಲೆಂಡ್‌ನಲ್ಲಿ ರೂಪಾಂತರಿ ಕೋವಿಡ್ ಪತ್ತೆಯಾಗಿದೆ. ಹೀಗಾಗಿ ಅಲ್ಲಿಂದ ಬಂದವರನ್ನು ಕ್ವಾರಂಟೈನ್ ಮಾಡಬೇಕು. ಅದನ್ನು ಬಿಟ್ಟು ರಾಜ್ಯ ಸರ್ಕಾರ ಬೇಜವಾಬ್ದಾರಿಯುತವಾಗಿ ವರ್ತನೆ ಮಾಡುತ್ತಿದೆ. ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಹೇರಲು ಮುಂದಾಗಿತ್ತು. ಇದೆಲ್ಲ ಏನು ನಡೆಯುತ್ತಿದೆ ಎಂದು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪ್ರಶ್ನೆ ಮಾಡಿತ್ತು. ಇದೀಗ ಗೃಹ ಸಚಿವರು ಇಂಗ್ಲೆಂಡ್‌ನಿಂದ ಬಂದವರನ್ನು ಪತ್ತೆ ಮಾಡುತ್ತಿದ್ದೇವೆ ಎಂಬ ಹೇಳಿಕೆ ನೀಡುವ ಮೂಲಕ ವಿಪಕ್ಷಗಳ ಆರೋಪಕ್ಕೆ ಪುಷ್ಟಿ ಕೊಟ್ಟಿದ್ದಾರೆ.


ಬ್ರೇಕ್ ದಿ ಚೈನ್ ಎಂಬುದು ಕೋವಿಡ್ ನಿಯಂತ್ರಣದಲ್ಲಿ ಮೊದಲ ಆಧ್ಯತೆಯಾಗಿರಬೇಕು. ಆದರೆ ಅದನ್ನು ಬಿಟ್ಟು ಸರ್ಕಾರ ಉಳಿದೆಲ್ಲವನ್ನೂ ಮಾಡುತ್ತಿದೆ. ಇದು ಕೇವಲ ಜನರನ್ನು ಹೆದರಿಸುವ ತಂತ್ರ ಎಂದು ಸಾರ್ವಜನಿಕರೂ ಆರೋಪಿಸುತ್ತಿದ್ದಾರೆ. ಈಗಲಾದರೂ ಸರ್ಕಾರ ತಕ್ಷಣವೇ ಇಂಗ್ಲೆಂಡ್‌ನಿಂದ ಬಂದವರನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡಬೇಕಿದೆ.

Recommended Video

Virat Kohli ಈ ದಶಕದ ಶ್ರೇಷ್ಠ ಕ್ರಿಕೆಟಿಗ | Oneindia Kannada

English summary
Home Minister Basavaraj Bommai said in a statement that the suspected infected people with the mutant coronavirus virus is being detected. Thus, it is appalling that not everyone from England has been found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X