ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಲಾಂಛನಕ್ಕೆ 'ನಿದ್ದೆ ಮಾಡುವ ಸಿಂಹ' ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

|
Google Oneindia Kannada News

ಉಡುಪಿ, ಜುಲೈ 13: ಸಂಸತ್ ಭವನದ ಮೇಲೆ ನಿರ್ಮಿಸಲಾಗಿರುವ ಹೊಸ ಲಾಂಛನವನ್ನು ಸಮರ್ಥಿಸುವ ಭರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈಗಿರುವ ಲಾಂಛನವನ್ನು 'ನಿದ್ದೆ ಮಾಡುವ ಸಿಂಹ' ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿರುವ ಅವರು, ಹೊಸ ಸಂಸತ್ ಭವನದ ಮೇಲೆ ಸಶಕ್ತ ಹಾಗೂ ಘರ್ಜನಾ ರೂಪದಲ್ಲಿ ಹೊಸ ಲಾಂಛನವನ್ನು ರೂಪಿಸಲಾಗಿದೆ. ಆದರೆ ವಿರೋಧ ಪಕ್ಷದವರು ನಿದ್ದೆ ಮಾಡಿಕೊಂಡೇ ಇರುವ ಸಿಂಹವನ್ನು ನಂಬಿಕೊಂಡಿರುವ ಸಂಸ್ಕೃತಿಯವರು ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.

ಚರ್ಚೆ ಹುಟ್ಟು ಹಾಕಿದ ನೂತನ ಸಂಸತ್ ಭವನದ ಮೇಲಿನ ರಾಷ್ಟ್ರ ಲಾಂಛನ!ಚರ್ಚೆ ಹುಟ್ಟು ಹಾಕಿದ ನೂತನ ಸಂಸತ್ ಭವನದ ಮೇಲಿನ ರಾಷ್ಟ್ರ ಲಾಂಛನ!

ಪ್ರಧಾನಿ ನರೇಂದ್ರ ಮೋದಿ ಕ್ರಿಯಾಶೀಲವಾಗಿದ್ದಾರೆ. ಅದಕ್ಕೆ ತಕ್ಕ ಹಾಗೆ ನಮ್ಮ ದೇಶದ ಲಾಂಛನವಾಗಿರುವ ಸಿಂಹ ಸಶಕ್ತ ಹಾಗೂ ಘರ್ಜನಾ ರೂಪದಲ್ಲಿ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

Basavaraj Bommai reaction to National Emblem on New Parliament building

ಸಿಂಹದ ಲಾಂಛ ಉಗ್ರವಾಗಿದೆ, ವ್ಯಗ್ರವಾಗಿದೆ ಎಂಬುದು ನೋಡುವವರ ದೃಷ್ಟಿಕೋನವಾಗಿದೆ. ಕಾಂಗ್ರೆಸ್‌ನವರು ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಭಾರತಕ್ಕೆ ಈಗ ಕ್ರಿಯಾಶೀಲವಾಗಿರುವ, ಚುರುಕಾಗಿರುವ ಪ್ರಧಾನಮಂತ್ರಿಗಳಿದ್ದಾರೆ. ಅದಕ್ಕೆ ತಕ್ಕಹಾಗೆ ನಮ್ಮ ದೃಷ್ಟಿಯಲ್ಲಿ ಸಿಂಹ ಸಶಕ್ತರೂಪವಾಗಿದೆ. ಆದರೆ ಕಾಂಗ್ರೆಸ್ ನವರು ನಿದ್ದೆ ಮಾಡಿಕೊಂಡೇ ಬಂದಂತಹ ಸಿಂಹವನ್ನು ನಂಬಿಕೊಂಡು ಬಂದವರು. ಆದ್ದರಿಂದ ಅವರಿಗೆ ಹಾಗೆ ಅನಿಸುತ್ತದೆ ಎಂದರು.

ಹೊಸ ಸಂಸತ್ ಭವನದ ಮೇಲೆ ರಾಷ್ಟ್ರೀಯ ಲಾಂಛನಕ್ಕೆ ಸಂಬಂಧಿಸಿದಂತೆ ವಿರೋಧಪಕ್ಷದವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹೊಸ ಸಂಸತ್ ಭವನದ ಮೇಲೆ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಮುಖಚರ್ಯೆ ಬದಲಾಯಿಸಲಾಗಿರುವ ಆಗುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಾಮ್ರಾಟ ಅಶೋಕರ ಕಾಲದಲ್ಲಿದ್ದ ಸಿಂಹದ ಲಾಂಛನ ಮತ್ತು ಅಶೋಕ ಚಕ್ರದ ಲಾಂಛನವನ್ನೇ ಅಳವಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

Recommended Video

ಸಿದ್ದರಾಮೋತ್ಸವ ಮತ್ತು ಶಿವಕುಮಾರೋತ್ಸವದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು? | *Politics | OneIndia

English summary
Prime Minister Modi is dynamic. Accordingly, our national emblem of the Lion should be strong and roaring. But opposition stand reflects their culture of banking on sleeping Lion: Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X