ಸರ್ಕಾರದ ಇಂದಿನ ಸಮೀಕ್ಷೆ ಬಸವತತ್ವಕ್ಕೆ ವಿರುದ್ಧ: ಸಿದ್ದರಾಮಯ್ಯಗೆ ಮಾಜಿ ಸಿಎಂ ಕೌಂಟರ್
ಬೆಂಗಳೂರು, ಅಕ್ಟೋಬರ್ 05: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಭಾಷಣದಲ್ಲಿ ನಾವು ಬಸವಣ್ಣನ ವಿಚಾರಗಳನ್ನು ಫಾಲೊ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಾತಲ್ಲಿ ಮಾತ್ರ ಬಣವಣ್ಣ ಕೃತಿಯಲ್ಲಿ ಬಸವಣ್ಣ ಮತ್ತು ಕನಕದಾಸರ ತತ್ವಗಳ ವಿರುದ್ಧ ನಡೆದುಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
"ನಾನು ಬಸವಣ್ಣನವರ ಅಭಿಮಾನಿ, ಬಸವ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಬಸಣ್ಣನವರ ಆಶಯಗಳನ್ನು ಈಡೇರಿಸಲು ನಿರ್ಧರಿಸಿದ್ದೇವೆ ಎಂದು ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ' ಅವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೌಂಟರ್ ನೀಡಿದ್ದಾರೆ. ಈ ಬಗ್ಗೆ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಬಸವಣ್ಣ ಎಲ್ಲ ಕಾಯಕ ಸಮುದಾಯ ಒಗ್ಗೂಡಿಸಿ ಕಾಯಕ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ಸಮಾನತೆ ತರುವ ಕೆಲಸ ಮಾಡಿದ್ದರು. ಆದರೆ ಇವರು ಜಾತಿ ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸಿ ಬಸಣಮವಣ್ಣನವರ ತದ್ವಿರುದ್ದವಾಗಿ ನಡೆಯುತ್ತಿದ್ದಾರೆ. ಅದೆ ರೀತಿ ಕನಕದಾಸರು ಕುಲ ಕುಲ ಎಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯ ನೀವು ಬಲ್ಲಿರಾ ಎಂದು ಹೇಳಿದ್ದರು. ಅದರ ತದ್ ವಿರುದ್ಧ ಇವರು ನಡೆದುಕೊಳ್ಳುತ್ತಿದ್ದಾರೆ.
ಕುಲದ ಆಧಾರದ ಮೇಲೆ ಬದುಕಿಲ್ಲ. ಹುಟ್ಟು ಯಾರ ಕೈಯಲ್ಲಿ ಇಲ್ಲ ಬದುಕಿನಲ್ಲಿ ಸಮಾನತೆ ತರಬೇಕೆಂಬ ಕನಕದಾಸದ ಚಿಂತನೆಗೆ ಕುಲದ ಅಧಾರದ ಮೇಲೆ ಅಧಿಕಾರ ಮಾಡುತ್ತಿರುವ ಸಿಎಂಗೆ ಏನು ಹೇಳಬೇಕು. ಜಾತಿ ಸಮೀಕ್ಷೆ ತಮ್ಮ ರಾಜಕೀಯ ಉಳಿವಿಗೆ ಮತ್ತು ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಇಡಿ ತನಿಖೆ ಮೀರಿಸುವ ಸಮೀಕ್ಷೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಾತಿ ಗಣತಿ ವಿವರ ಕೇಳಿ ಹೌಹಾರಿದ್ದಾರೆ. ಯಾಕೆಂದರೆ ಇದು ಸಮೀಕ್ಷೆಯಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬ ನಾಗರಿಕರ ತನಿಖೆ ಮಾಡಿ ವಯಕ್ತಿಕ ಬದುಕಿನಲ್ಲಿ ಮಧ್ಯ ಪ್ರವೇಶ ಮಾಡುವ ರೀತಿಯಲ್ಲಿದೆ ಇಡಿ ಕೂಡ ಇಷ್ಟು ವಿವರ ಕೇಳಿಲ್ಲ ಅಷ್ಟು ವಿವರ ಜಾತಿ ಸಮೀಕ್ಷೆಯಲ್ಲಿದೆ. ಇಡಿ ಕೇಳದಷ್ಟು ಪ್ರಶ್ನೆಗಳನ್ನು ಸಮೀಕ್ಷೆ ವೇಳೆ ಕೇಳಿದ್ದು ನೋಡಿ ಡಿ.ಕೆ. ಶಿವಕುಮಾರ್ ಹೌಹಾರಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ನಮ್ಮ ಮೆಟ್ರೋಗೆ "ಬಸವ ಮೆಟ್ರೋ" ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ "ಬಸವ ಮೆಟ್ರೋ" ಎಂದು ಘೋಷಿಸಿ ಬಿಡುತ್ತಿದ್ದೆ.
— Siddaramaiah (@siddaramaiah) October 5, 2025
ನಮ್ಮಲ್ಲಿ ಅನೇಕ ಜಾತಿ, ಅನೇಕ ಧರ್ಮಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು ನಾವು. ಶೂದ್ರರು ಜಾತಿ… pic.twitter.com/k5yUD34UaA
ಆನ್‌ಲೈನ್ ಬೆಟ್ಟಿಂಗ್ ತಡೆಗೆ ಕ್ರಮವಹಿಸಿ: ಆಗ್ರಹ
ರಾಜ್ಯ ಸರ್ಕಾರಕ್ಕೆ ನಿಜವಾಗಲು ಆನ್ ಲೈನ್ ಬೆಟ್ಟಿಂಗ್ ತಡೆದು ಬಡವರು ಅದಕ್ಕೆ ಬಲಿಯಾಗುವುದನ್ನು ತಡೆಯುವ ಕಾಳಜಿ ಇದ್ದರೆ ಸುಪ್ರೀಂ ಕೊರ್ಟ್ ನಲ್ಲಿ ಇರುವ ಕೇಸಿನ ಬಗ್ಗೆ ಕ್ರಮ ವಹಿಸಬೇಕು. ಬಳಿಕ ಕಾನೂನು ಜಾರಿ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ಅವರು ಎಕ್ಸ್ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆ.
ಕೋರಮಂಗಲದಲ್ಲಿ ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರ ಆನ್ ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಿದಾಗಲು ಕೂಡ ಅವ್ಯಾಹತವಾಗಿ ಪೊಲಿಸರ ಕಣ್ಣ ಕೆಳಗಡೆ ನಡೆಯುತ್ತಿರುವುದನ್ನು ಬಹಿರಂಗಗೊಳಿಸಿದ್ದಾರೆ. ಇದು ಆನ್ ಲೈನ್ ಬೆಟ್ಟಿಂಗ್ ಮಾಡುವವರು ಮತ್ತು ಪೊಲಿಸರು ಸರ್ಕಾರದ ನಡುವೆ ಇರುವ ಸಂಬಂಧ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರವಿದ್ದಾಗ ಆನ್ ಲೈನ್ ಬೆಟ್ಟಿಂಗ್ ವಿರುದ್ಧ ನಾನ್ ಬೇಲೆಬಲ್ ಕೇಸ್ ಮಾಡಿ ಕಠಿಣ ಕಾನೂನು ಜಾರಿ ಮಾಡಿದ್ದೇವು. ಅದು ಸುಪ್ರೀಂ ಕೋರ್ಟ್ ನಲ್ಲಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಲು ಆನ್ ಲೈನ್ ಬೆಟ್ಟಿಂಗ್ ತಡೆದು ಬಡವರು ಅದಕ್ಕೆ ಬಲಿಯಾಗುವುದನ್ನು ತಡೆಯುವ ಕಾಳಜಿ ಇದ್ದರೆ ಸುಪ್ರೀಂ ಕೊರ್ಟ್ ನಲ್ಲಿ ಇರುವ ಕೇಸಿನ ಬಗ್ಗೆ ಕ್ರಮ ವಹಿಸಿ ಕಾನೂನು ಜಾರಿ ಮಾಡಿ ಎಂದರು.
ಆದರೆ ಎರಡೂವರೆ ವರ್ಷವಾದರೂ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದೇ ಈ ಸರ್ಕಾರ ಸಂಪೂರ್ಣ ಆನ್ ಲೈನ್ ಬೆಟ್ಟಿಂಗ್ ಪರ ಇದೆ ಎನ್ನುವುದು ಗೊತ್ತಾಗುತ್ತದೆ ಇದನ್ನು ತೀರ್ವವಾಗಿ ಖಂಡಿಸುತ್ತೇವೆ. ಮತ್ತೆ ಎಲ್ಲ ಬಡವರ, ಯುವಕರ ಪರವಾಗಿ ಆನ್ ಲೈನ್ ಬೆಟ್ಟಿಂಗ್ ಬ್ಯಾನ್ ಮಾಡುವ ಕೇಂದ್ರದ ಕಾನೂನು ಜಾರಿ ಮಾಡಬೇಕು ಮತ್ತು ಕರ್ನಾಟಕದ ಕಾನೂನಿಗೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕ ಹೋರಾಟ ಮಾಡಿ ಅದಕ್ಕೆ ಶಕ್ತಿ ತುಂಬಬೇಕು ಎಂದು ಅವರು ಒತ್ತಾಯಿಸಿದರು.












Click it and Unblock the Notifications