ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧ, ವಿಕಾಸಸೌಧದಲ್ಲಿ ನಿಮ್ಮ ಸಚಿವರ ರೂಮ್ ಸಂಖ್ಯೆ ಹೀಗಿದೆ

|
Google Oneindia Kannada News

ಬೆಂಗಳೂರು, ಆಗಸ್ಟ್ 05: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರದಂದು ಸರಳವಾಗಿ ಸಂಪುಟ ವಿಸ್ತರಣೆ ಮಾಡಿದ್ದಾರೆ. ಆಗಸ್ಟ್ 4ರಂದು ಪ್ರಮಾಣ ವಚನ ಸ್ವೀಕರಿಸಿದ 29 ಕ್ಯಾಬಿನೆಟ್ ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.

ಬಹುತೇಕ ಎಲ್ಲಾ ಸಚಿವರುಗಳು ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಸಿ ನಂತರ ತಮ್ಮ ಕೊಠಡಿ ಪ್ರವೇಶಿಸಿ ಕುರ್ಚಿ ಏರಲಿದ್ದಾರೆ. ಸದ್ಯ ಕೋವಿಡ್ 19 ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೋಮ, ಪೂಜೆಗೆ ಆಸ್ಪದ ನೀಡುವುದು ಕಡಿಮೆ ಎನ್ನಬಹುದು.

ಸದ್ಯಕ್ಕೆ ಎಲ್ಲಾ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳ ಪ್ರವಾಸಕ್ಕೆ ತೆರಳಬೇಕಿದ್ದು, ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಬೊಮ್ಮಾಯಿ ನಿನ್ನೆಯೇ ಪ್ರಕಟಿಸಿದ್ದಾರೆ. ಇದೆಲ್ಲದರ ನಡುವೆ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ನೀಡುವುದು ಎಂಬುದರ ಬಗ್ಗೆ ಕೂಡಾ ಸಮಾನಾಂತರವಾಗಿ ಚರ್ಚೆ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸಿದ ಬಸವರಾಜ ಬೊಮ್ಮಾಯಿಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸಿದ ಬಸವರಾಜ ಬೊಮ್ಮಾಯಿ

ನೂತನ ಸಚಿವರುಗಳಿಗೆ ಖಾತೆ ಹಂಚಿಕೆಯಾಗುವ ಮುನ್ನ ವಿಕಾಸಸೌಧ ಹಾಗೂ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಮುಖ್ಯಮಂತ್ರಿಗಳು ಆದೇಶ(ಸಂಖ್ಯೆ ಸಿಆಸುಇ 211 ಡಿಬಿಎಂ 2021) ಹೊರಡಿಸಿದ್ದಾರೆ. ನೂತನ ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕೊಠಡಿಗಳನ್ನು ಹಂಚಿಕೆ ಮಾಡುವಂತೆ ಸೂಚಿಸಲಾಗಿದೆ.

ಹೊಸ ಅನುಭವ, ಹೊಸ ಕೊಠಡಿ:
ಬೊಮ್ಮಾಯಿ ಸಂಪುಟದ 6 ಮಂದಿ ಹೊಸ ಸಚಿವರುಗಳಿಗೆ ಸಚಿವರಾಗಿ ಹೊಸ ಅನುಭವ, ಹೊಸ ಕೊಠಡಿ ಲಭ್ಯವಾಗಲಿದೆ. ಬೊಮ್ಮಾಯಿ ಸಂಪುಟದಲ್ಲಿ ಪ್ರಮುಖವಾಗಿ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿರಿಸಿಕೊಂಡು ಬೆಂಗಳೂರಿನ ಶಾಸಕರಿಗೆ ಮಣೆ ಹಾಕಲಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿವಾರು ಲೆಕ್ಕಾಚಾರದಂತೆ ಕೂಡಾ ಲಿಂಗಾಯತ, ದಲಿತ, ಹಿಂದುಳಿತ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.

Basavaraj Bommai Cabinet Ministers room allocation Vidhana Soudha Vikasa Soudha

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಹಲವರು ತಾವು ಈ ಹಿಂದೆ ಪಡೆದಿದ್ದ ಕೊಠಡಿಗಳನ್ನೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಸಚಿವರುಗಳಿಗೆ ವಿಕಾಸಸೌಧದಲ್ಲಿ ಕೊಠಡಿಯನ್ನು ಕಲ್ಪಿಸಲಾಗಿದೆ. ಈಶ್ವರಪ್ಪ ಅವರು ತಮ್ಮ ನೆಚ್ಚಿನ ಕೊಠಡಿ ಸಂಖ್ಯೆಯನ್ನು ಬದಲಾಯಿಸಿದ್ದಾರೆ. ವಿಧಾನಸೌಧದ 329-329ಎ ರೂಮ್ ಹೊಂದಿದ್ದ ಕೆಎಸ್ ಈಶ್ವರಪ್ಪ ಅವರು ಈ ಬಾರಿ 314 ಸಂಖ್ಯೆಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ.

ಸಚಿವರಾದರೂ ಬದಲಾಗದ ಅಂಗಾರ, ಕೋಟಾ ಜೀವನ ಶೈಲಿ!ಸಚಿವರಾದರೂ ಬದಲಾಗದ ಅಂಗಾರ, ಕೋಟಾ ಜೀವನ ಶೈಲಿ!

ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರಿದ್ದ ಕೊಠಡಿಯನ್ನು ಹೊಸ ಸಚಿವ ಬಿ.ಸಿ ನಾಗೇಶ್ ಅವರಿಗೆ ಹಂಚಿಕೆ ಮಾಡಲಾಗಿದೆ.ಸಚಿವ ಸ್ಥಾನ ತೊರೆದ ಸಿಟಿ ರವಿ ಅವರಿದ್ದ ಕೊಠಡಿಯನ್ನು ಅವರ ಆಪ್ತ ಸುನಿಲ್ ಕುಮಾರ್ ಅವರಿಗೆ ನೀಡಲಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿ ಹೊಂದಿದ್ದ ಕೊಠಡಿ ವಿ ಸೋಮಣ್ಣ ಅವರಿಗೆ ದಕ್ಕಿದೆ. ಎಚ್ ನಾಗೇಶ್ ಅವರಿದ್ದ ರೂಮ್ ಶಂಕರ್ ಪಾಟೀಲರಿಗೆ ಸಿಕ್ಕಿದೆ. ಮಿಕ್ಕಂತೆ ಯಾರಿಗೆ ಯಾವ ಕೊಠಡಿ ಎಂಬುದನ್ನು ಕೋಷ್ಟಕದಲ್ಲಿ ನೋಡಬಹುದು.

Recommended Video

ಪ್ರಧಾನಿ ನಿವಾಸವನ್ನೇ ಬಾಡಿಗೆಗಿಟ್ಟ ಪಾಕಿಸ್ತಾನ ಸರ್ಕಾರ! | Oneindia Kannada
ಕ್ರಮ ಸಂಖ್ಯೆ ಬೊಮ್ಮಾಯಿ ಸಂಪುಟದ ಸಚಿವರ ಹೆಸರು ಕೊಠಡಿ ಸಂಖ್ಯೆ
01 ಗೋವಿಂದ ಎಂ ಕಾರಜೋಳ 340-340ಎ, 341 ವಿಧಾನಸೌಧ
02 ಡಾ. ಸಿ.ಎಸ್ ಅಶ್ವಥ ನಾರಾಯಣ 242-243, ವಿಕಾಸಸೌಧ
03 ಅರಗ ಜ್ಞಾನೇಂದ್ರ 38-39, ವಿಕಾಸಸೌಧ
04 ಕೆ.ಎಸ್ ಈಶ್ವರಪ್ಪ 314-314ಎ, ವಿಧಾನಸೌಧ
05 ಆರ್. ಅಶೋಕ 317-317ಎ, ವಿಧಾನಸೌಧ
06 ಉಮೇಶ್ ಕತ್ತಿ 329-329ಎ, ವಿಧಾನಸೌಧ
07 ಬಿ. ಶ್ರೀರಾಮುಲು 328-328ಎ, ವಿಧಾನಸೌಧ
08 ಬಿ. ಸಿ ನಾಗೇಶ್ 262-262ಎ, ವಿಧಾನಸೌಧ
09 ವಿ ಸೋಮಣ್ಣ 327,327ಎ ವಿಧಾನ ಸೌಧ
10 ಸುನಿಲ್ ಕುಮಾರ್ 344-344ಎ, ವಿಧಾನಸೌಧ
11 ಎಸ್ ಅಂಗಾರ 305-305ಎ, ವಿಧಾನಸೌಧ
12 ಕೋಟಾ ಶ್ರೀನಿವಾಸ ಪೂಜಾರಿ 343-343ಎ, ವಿಧಾನಸೌಧ
13 ಜೆ. ಸಿ ಮಾಧುಸ್ವಾಮಿ 316-316ಎ, ವಿಧಾನಸೌಧ
14 ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ 244-244ಎ, ವಿಕಾಸಸೌಧ
15 ಶಂಕರ್ ಬಿ, ಪಾಟೀಲ ಮುನ್ನೇನಕೊಪ್ಪ 342-343, ವಿಕಾಸಸೌಧ
16 ಪ್ರಭು ಚೌಹಾಣ್ 442-442ಎ ವಿಕಾಸಸೌಧ
17 ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ 141-142, ವಿಕಾಸಸೌಧ
18 ಆನಂದ್ ಸಿಂಗ್ 36-37, ವಿಕಾಸಸೌಧ
19 ಆಚಾರ್ ಹಾಲಪ್ಪ ಬಸಪ್ಪ 252-252ಎ, ವಿಧಾನಸೌಧ
20 ಕೆ. ಸಿ ನಾರಾಯಣ ಗೌಡ 301-301ಎ, ವಿಧಾನಸೌಧ
21 ಮುರುಗೇಶ್ ನಿರಾಣಿ 315-315ಎ, ವಿಧಾನಸೌಧ
22 ಅರೆಬೈಲು ಹೆಬ್ಬಾರ್ ಶಿವರಾಂ 206-207, ವಿಕಾಸಸೌಧ
23 ಎಸ್. ಟಿ ಸೋಮಶೇಖರ್ 143-146, ವಿಕಾಸಸೌಧ
24 ಬಸನಗೌಡ ಚನ್ನಬಸವನಗೌಡ ಪಾಟೀಲ್ 406-407, ವಿಕಾಸಸೌಧ
25 ಬಿ.ಎ ಬಸವರಾಜ (ಬೈರತಿ) 337-337ಎ, ವಿಧಾನಸೌಧ
26 ಡಾ. ಕೆ ಸುಧಾಕರ್ 339-339ಎ, ವಿಧಾನಸೌಧ
27 ಕೆ ಗೋಪಾಲಯ್ಯ 244-245, ವಿಧಾನಸೌಧ
28 ಎನ್ ನಾಗರಾಜ (ಎಂ.ಟಿ.ಬಿ) 330-330ಎ, ವಿಧಾನಸೌಧ
29 ಮುನಿರತ್ನ 344-345, ವಿಕಾಸಸೌಧ

English summary
Karnataka CM Basavaraj Bommai has inducted 29 ministers in to his cabinet. All Minister the Bommai's cabinet have been allocated offices in Vidhana Soudha and Vikas Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X