ರಾಹುಲ್ ಗಾಂಧಿ ಅರೆಹುಚ್ಚ: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಯತ್ನಾಳ್

ಹುಬ್ಬಳ್ಳಿ, ಮೇ 01: ಸೋನಿಯಾಗಾಂಧಿಯನ್ನು ವಿಷಕನ್ಯೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ರಾಹುಲ್ ಗಾಂಧಿಯನ್ನು ಅರೆ ಹುಚ್ಚ ಎಂದು ಕರೆಯುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಹುಚ್ಚ ಅಲ್ಲ, ಅರೆ ಹುಚ್ಚ ಎಂದು ಕರೀಬೇಕು ಎಂದು ಅವರು ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಯತ್ನಾಳ್ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು, "ಆಲೂಗಡ್ಡೆಯಿಂದ ಚಿನ್ನ ತೆಗೀತಿನಿ ಅಂತಾರೆ, ಚೀನಾ ರಾಯಭಾರಿ ಜೊತೆ ಸಭೆ ಮಾಡ್ತಾರೆ, ದೇಶ ದ್ರೋಹಿಗಳು, ವಿರೋಧಿಗಳ ಜೊತೆ ಕೈ ಜೋಡಿಸುತ್ತಾರೆ. ಇವರನ್ನು ಬುದ್ಧಿವಂತ ಅಂತ ಕರೆಯಬೇಕಾ? ರಾಹುಲ್ ಗಾಂಧಿಯನ್ನು ದೊಡ್ಡ ಬುದ್ಧಿವಂತ ಕರೀಬೇಕಾ? ಹುಚ್ಚ ಅಲ್ಲ ಅರೆ ಹುಚ್ಚ ಎಂದು ಕರೆಯಬೇಕು" ಎಂದು ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದರು.

 Basangouda Patil Yatnal Referred To Rahul Gandhi As half-mental

ಸೋನಿಯಾಗಾಂಧಿಯನ್ನು ವಿಷಕನ್ಯೆ ಎಂದಿದ್ದರ ಬಗ್ಗೆ ಮಾತನಾಡಿದ ಅವರು, ತಮ್ಮ ಹೇಳಿಕೆಯನ್ನು ಸಮರ್ಥಣೆ ಮಾಡಿಕೊಂಡಿದ್ದಾರೆ. ವಿದೇಶದಿಂದ ಬಂದಿರುವ ಸೋನಿಯಾ ಗಾಂಧಿ ವಿಷ ಕನ್ಯೆಯಾ ಎಂದು ಪ್ರಶ್ನೆ ಮಾಡಿದ್ದೆ, ಆದರೆ ಮಾಧ್ಯಮಗಳು ಪ್ರಶ್ನಾರ್ಥಕ ಚಿನ್ಹೆಯನ್ನು ತೆಗೆದಿವೆ, ಕಾಂಗ್ರೆಸ್‌ನವರು ಮೋದಿ ವಿರುದ್ಧ 91 ಬಾರಿ ಹೇಳಿಕೆ ನೀಡಿದ್ದಾರೆ, ಅದಕ್ಕೆ ನಾನು ಸೋನಿಯಾ ಗಾಂಧಿ ಬಗ್ಗೆ ಪ್ರಶ್ನೆ ಮಾಡಿದ ಎಂದು ಸಮರ್ಥನೆ ಮಾಡಿಕೊಂಡರು.

ಜಗದೀಶ್ ಶೆಟ್ಟರ್ ಅವರನ್ನ ಸಿಎಂ ಅಭ್ಯರ್ಥಿ ಮಾಡಲಿ

ಕಾಂಗ್ರೆಸ್‌ನವರು ಮಾತೆತ್ತಿದರೆ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹೇಳುತ್ತಾರೆ. ಬಿಜೆಪಿಯವರು ಲಿಂಗಾಯತರನ್ನು ಓಲೈಕೆ ಮಾಡುತ್ತಿಲ್ಲ, ಕಾಂಗ್ರೆಸ್‌ನವರೇ ಲಿಂಗಾಯತರ ಓಲೈಕೆ ಮಾಡುತ್ತಿದ್ದಾರೆ. ಬಿಜೆಪಿ ಅತಿ ಹೆಚ್ಚು ಕಡೆ ಲಿಂಗಾಯತರಿಗೆ ಟಿಕೆಟ್ ಕೊಟ್ಟಿದೆ, ಲಿಂಗಾಯತರ ಮೇಲೆ ಕಾಂಗ್ರೆಸ್‌ನವರಿಗೆ ಅಷ್ಟೊಂದು ಪ್ರೀತಿ ಇದ್ದರೆ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಘಿ ಘೋಷಿಸಲಿ ಎಂದು ಸವಾಲು ಹಾಕಿದರು.

ಈ ಹಿಂದೆ ಕೂಡ ಬಸನಗೌಡ ಪಾಟೀಲ್ ಯತ್ನಾಳ್ ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಸೋನಿಯಾ ಗಾಂಧಿಯನ್ನು ಚೀನಾ, ಪಾಕಿಸ್ತಾನ ಏಜೆಂಟ್ ಎಂದು ಕರೆದಿದ್ದ ಯತ್ನಾಳ್, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದ್ದಕ್ಕೆ ರಾಹುಲ್ ಗಾಂಧಿಯನ್ನು ಹುಚ್ಚ ಎಂದು ಕರೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+