Caste Census Report: ರಾಜ್ಯದ 70ರಷ್ಟು ಭಾಗದಲ್ಲಿ ಜಾತಿ ಗಣತಿಯೇ ನಡೆದಿಲ್ಲ: ಯತ್ನಾಳ್ ಆರೋಪ
ಜಾತಿ ಗಣತಿ ವರದಿ ಜಾರಿ ವಿಚಾರವು ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಸೋರಿಕೆಯಾಗಿರುವ ಈ ಜಾತಿ ಗಣತಿ ವರದಿ ಬಗ್ಗೆ ಸ್ವಪಕ್ಷವೂ ಸೇರಿ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಹಲವು ಸಮುದಾಯಗಳಿಂದ ಈ ವರದಿಗೆ ತೀವ್ರ ವಿರೋಧ ಕಂಡುಬಂದಿದೆ. ಈ ಗಣತಿ ಸರಿಯಾಗಿಲ್ಲ, ಮತ್ತೊಂದು ಗಣತಿ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜಾತಿ ಗಣತಿ ವಿಚಾರವಾಗಿ ಗಂಭೀರ ಆರೋಪ ಮಾಡಿದ್ದಾರೆ.
ಜಾತಿ ಗಣತಿ ವರದಿ ಸಿದ್ಧಪಡಿಸಲು ಪ್ರತಿ ಮನೆಗೂ ಭೇಟಿ ನೀಡುವುದು ಕಡ್ಡಾಯ. ಆದರೆ ರಾಜ್ಯದ ಶೇ 70ರಷ್ಟು ಭಾಗಗಳಲ್ಲಿ ಜಾತಿ ಗಣತಿ ವರದಿಗಾಗಿ ಸಮೀಕ್ಷೆಯೇ ನಡೆದಿಲ್ಲ ಎಂದು ಗೊತ್ತಾಗಿದೆ. ಸಿದ್ದರಾಮಯ್ಯನವರ ಸಂಪುಟದ ಹಲವು ಸಚಿವರೇ ಈ ವರದಿ ಅವೈಜ್ಞಾನಿಕವಾಗಿದೆ ಎಂದು ಹೇಳುತ್ತಿದ್ದರೂ ಈ ವರದಿಯನ್ನು ಒಪ್ಪಿದ್ದು ಹೇಗೆ? ಎಂದು ಯತ್ನಾಳ್ ದೂರಿದ್ದಾರೆ.

ಸೋರಿಕೆಯಾಗಿರುವ ಜಾತಿ ಗಣತಿಯಲ್ಲಿ ವರದಿಯಲ್ಲಿ ಮುಸಲ್ಮಾನ ಸಮುದಾಯ ಶೇ 12.6ರಷ್ಟಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ತಪ್ಪಾಗಿದ್ದು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಜನಸಂಖ್ಯೆಯು 1.1 ಕೋಟಿ ಇದ್ದು, ಪರಿಶಿಷ್ಟ ಜಾತಿಯಲ್ಲೇ 108 ಉಪವರ್ಗಗಳಿವೆ. ಮುಸಲ್ಮಾನರೇ ಹೆಚ್ಚು ಇದ್ದಾರೆ ಎಂಬ ಗಣತಿಯೇ ತಪ್ಪು ಹಾಗೂ ಅವಾಸ್ತವಿಕವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಜಾತಿ ಸಮೀಕ್ಷೆಯ ಮೂಲ ಪ್ರತಿ ಇಲ್ಲದಿದ್ದರೂ ಸಹ ಇದನ್ನು ಅಂಗೀಕರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿಗಳ ಹೇಳಿಕೆ ಹಾಸ್ಯಾಸ್ಪದವಾಗಿದೆ. ಮೂಲ ಪ್ರತಿ ಇಲ್ಲದ ಪ್ರಕರಣವು ಏನಾಯಿತು ಎಂಬುದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಮೂಲ ಪ್ರತಿಯನ್ನು ಕಳೆದುಕೊಂಡ ಅಧಿಕಾರಿಯ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ? ಯಾವ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ? ಮೂಲ ಪ್ರತಿಯೇ ಇಲ್ಲದ ವರದಿಯ ನೈಜತೆಯನ್ನು ಧೃಡೀಕರಿಸುವವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಅಭಿವೃದ್ಧಿಯ ಕಲ್ಪನೆಯನ್ನು ಬಿಟ್ಟು ಸರ್ಕಾರ ಜಾತಿ ಗಣತಿ ಎಂಬ ಪ್ರಹಸನಕ್ಕೆ ಇಳಿದಿದೆ. ಜಾತಿ ಗಣತಿಯನ್ನು ಬ್ರಿಟಿಷರು ಪರಿಚಯಿಸಿ ಸಮಾಜದಲ್ಲಿ ಒಡಕನ್ನು ಉಂಟು ಮಾಡಿದರು. ಜಾತಿ ಗಣತಿಯಿಂದ ಯಾವುದೇ ರೀತಿಯಾದ ಸಾಮಾಜಿಕ ಬದಲಾವಣೆ ಮಾಡಲು ಸಾಧ್ಯವಿರುವುದಿಲ್ಲ. ಬ್ರಿಟಿಷರು ಮಾಡಿದ Bleed India with a Thousand Cuts ಎಂಬ ಪರಿಕಲ್ಪನೆಯನ್ನು ಕಾಂಗ್ರೆಸ್ ಸರ್ಕಾರ ತರುತ್ತಿದೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಆರೋಪ ಮಾಡಿದ್ದಾರೆ.
ಜಾತಿ ಗಣತಿಗೆ 200 ಕೋಟಿ ವೆಚ್ಚವಾಗಿದೆ ಎಂದು ಸನ್ಮಾನ್ಯ ಸಚಿವರಾದ ಮಹದೇವಪ್ಪನವರು ಹೇಳಿದ್ದಾರೆ. ಈ ಯೋಜನೆಯ ಖರ್ಚು ವೆಚ್ಚಗಳ ಬಗ್ಗೆ ಸರ್ಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು. ತೆರಿಗೆದಾರನ ಹಣವನ್ನು ಸದ್ವಿನಿಯೋಗ ಮಾಡಬೇಕೆ ಹೊರತು ಸ್ವಾರ್ಥ ರಾಜಕಾರಣಕ್ಕೆ ಬಳಸಬಾರದು ಎಂದು ಕಿಡಿಕಾರಿದ್ದಾರೆ. ಹಲವು ಸಮುದಾಯಗಳು ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.
ಎಸ್.ಟಿಗಳ ಕುರಿತು ದೋಷಪೂರಿತ ವರದಿ: ಶ್ರೀರಾಮುಲು
ನನ್ನ ಜನರ ಹೆಮ್ಮೆಯ ಧ್ವನಿಯಾಗಿ, ನಾನು ಈ ದೋಷಪೂರಿತ ವರದಿಯನ್ನು ತಿರಸ್ಕರಿಸುತ್ತೇನೆ. ನಮ್ಮ ಶಕ್ತಿ ನಿಜ, ನಮ್ಮ ಸಂಖ್ಯೆಗಳು ಬೆಳೆಯುತ್ತಿವೆ ಮತ್ತು ನಮ್ಮ ಹಕ್ಕಿನ ಪಾಲುಗಾಗಿ ನಾವು ಹೋರಾಡುತ್ತೇವೆ. ಪ್ರತಿ ಮನೆಯನ್ನು ತಲುಪಲು ವಿಫಲವಾದ ಸಮೀಕ್ಷೆಯು ನಮ್ಮ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಇದು ಸಾಮಾಜಿಕ ನ್ಯಾಯವಲ್ಲ, ಇದು ಸಂಖ್ಯಾಶಾಸ್ತ್ರೀಯ ಅನ್ಯಾಯ ಎಂದು ಬಿಜೆಪಿ ಸಂಸದ ಬಿ.ಶ್ರೀರಾಮುಲು ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತದ ಜನಗಣತಿಯ ಪ್ರಕಾರ, ಕರ್ನಾಟಕದಲ್ಲಿ 2001ರಲ್ಲಿ 34,63,986 ಎಸ್‌ಟಿಗಳು (6.6%), 2011ರಲ್ಲಿ 42,48,987ಕ್ಕೆ ಏರಿದೆ (6.95%). ಇತ್ತೀಚಿನ ಕಾಂತರಾಜ್ ವರದಿಯು ನಮ್ಮ ಸಂಖ್ಯೆಯನ್ನು 42,81,289 (7.16%) ಎಂದು ಹೇಳುತ್ತದೆ. ಆದರೆ, ಈ ಸ್ಥಿರ ಬೆಳವಣಿಗೆಯ ಹೊರತಾಗಿಯೂ, ಸಿದ್ದರಾಮಯ್ಯ ಅವರ ಸರ್ಕಾರದ ಅಡಿಯಲ್ಲಿ ನಡೆಸಲಾದ ಸಮೀಕ್ಷೆಯು ದೋಷಗಳಿಂದ ಕೂಡಿದೆ. ಕಳಪೆ ಯೋಜನೆ, ಅಸಮವಾದ ಅನುಷ್ಠಾನ ಮತ್ತು ಪ್ರಶ್ನಾರ್ಹ ದತ್ತಾಂಶ ಸಂಗ್ರಹಣೆಯು ಎಸ್‌ಟಿಗಳ ಕಡಿಮೆ ವರದಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.
ಮುಸಲ್ಮಾನರು ಹೆಚ್ಚಾಗಿದ್ರೆ ಅಲ್ಪಸಂಖ್ಯಾತ ಎನ್ನಬೇಡಿ
ಜಾತಿಗಣತಿ ಪ್ರಕಾರ ಮುಸಲ್ಮಾನರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ನಿಜವಾಗಿದ್ದರೆ ಅವರನ್ನು ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯಿಂದ ತೆಗೆದು ಹಾಕಿ. ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೀಸಲಾತಿಯ ಅಗತ್ಯವೂ ಇಲ್ಲ. ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಜಾತಿ ಜಾತಿಗಳಾಗಿ ಭಾಗ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ವರದಿ ಎಂಬ ಮಂಕು ಬೂದಿ ಎರಚಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡೋ ಕುತಂತ್ರ ಈಗ ಗುಟ್ಟಾಗಿ ಏನು ಉಳಿದಿಲ್ಲ. ಎಐಸಿಸಿ ಅಧಿವೇಶನದ ಸಂದರ್ಭದಲ್ಲಿ, ದೆಹಲಿ ಪ್ರವಾಸದ ವೇಳೆ ಸಿಎಂ ಸಿದ್ದರಾಮಯ್ಯನವರಿಗೆ ಭಾರಿ ಹಿನ್ನೆಡೆ ಆಗಿದೆ. ಹನಿಟ್ರ್ಯಾಪ್ ಸೇರಿದಂತೆ ಸರ್ಕಾರದ ಸಾಲು ಸಾಲು ವೈಫಲ್ಯಗಳ ಬಗ್ಗೆ, ಎಡವಟ್ಟುಗಳು ವಿಚಾರವಾಗಿ ಹೈಕಮಾಂಡ್ ಸಿದ್ದರಾಮಯ್ಯನವರ ಬಣದ ಕಿವಿ ಹಿಂಡಿದೆ. ಆದ್ದರಿಂದಲೇ ಈಗ ಸಿದ್ದರಾಮಯ್ಯನವರು ಧಿಡೀರನೆ ಜಾತಿ ಜನಗಣತಿ ಜಪ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದೆ ಎಂದಿದ್ದಾರೆ.
ನಾನು ಈಗಾಗಲೇ ಹಲವು ಬಾರಿ ಹೇಳಿರುವಂತೆ ನಮ್ಮ ಸಮಾಜದಲ್ಲಿರುವ ತಳಸಮುದಾಯಗಳ ಅಭ್ಯುದಯಕ್ಕೆ ಯಾವುದೇ ಸಕಾರಾತ್ಮಕ ಹೆಜ್ಜೆ ಇಟ್ಟರೂ ಅದಕ್ಕೆ ನಮ್ಮ ಪಕ್ಷದ ಬೆಂಬಲವಿದೆ. ಆದರೆ ರಾಜಕೀಯ ಹಾವು ಏಣಿ ಆಟದಲ್ಲಿ ಕೆಳಗೆ ಬಿದ್ದಾಗಲೆಲ್ಲ, ಅಧಿಕಾರದ ಚದುರಂಗದಾಟದಲ್ಲಿ ಮುಗ್ಗರಿಸಿದಾಗಲೆಲ್ಲ ಮೇಲೇಳುವುದಕ್ಕೆ ತಳಸಮುದಾಯಗಳನ್ನ ದಾಳವಾಗಿ ಬಳಸುವುದಕ್ಕೆ ನಮ್ಮ ವಿರೋಧವಿದೆ. ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ, ಅವಾಸ್ತವಿಕ ಹಾಗೂ ಅಪ್ರಸ್ತುತ ಎನ್ನುವುದು ಬಹುತೇಕರ ಅಭಿಪ್ರಾಯ. ಇದಕ್ಕೆ ಅನೇಕ ಕಾರಣಗಳೂ ಇವೆ ಎಂದು ಅಶೋಕ್ ದೂರಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications