ಬಿಜೆಪಿ ಕೋವಿಡ್ ಹಗರಣ: ಬಸನಗೌಡ ಪಾಟೀಲ್ ಯತ್ನಾಳ್‌ಗೆ ಸಿದ್ದರಾಮಯ್ಯ ಒತ್ತಾಯಿಸಿದ್ದೇನು?

ಬೆಂಗಳೂರು, ಡಿಸೆಂಬರ್ 31: ಬಿಜೆಪಿ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಭಾರೀ ಕೋವಿಡ್ ಹಗರಣ ನಡೆದಿದೆ ಎಂದು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದರು. ಈ ಬಹುಕೋಟಿ ಹಗರಣದ ದಾಖಲೆಗಳನ್ನು ತನಿಖಾ ಆಯೋಗದ ಮುಂದೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹೌದು, ಬಿಜೆಪಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಬಹುಕೋಟಿ ಕೊರೊನಾ ಹಗರಣ ನಡೆದಿದೆ ಎಂದಿರುವ ನೀವು ಅದರ ದಾಖಲೆಗಳನ್ನು ತನಿಖಾ ಆಯೋಗದ ಮುಂದೆ ಸಲ್ಲಿಸುವಂತೆ ಸಿದ್ದರಾಮಯ್ಯ ಅವರು ಶನಿವಾರ ಒತ್ತಾಯಿಸಿದ್ದಾರೆ. ಈ ಮೂಲಕ ಬಿಜೆಪಿ ವಿರುದ್ಧ ಸ್ವಪಕ್ಷದವರ ಹೇಳಿಕೆಗಳನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

 Basanagouda Patil Yatnal will give Proof Probe commission of BJP Covid Scam: Urge Siddaramaiah

ಸಿಂಧನೂರು ಕಾರ್ಯಕ್ರಮ ಬಳಿಕ ಬಸಾಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಔಷಧ ಮತ್ತು ಉಪಕರಣಗಳು ಮತ್ತು ಚಿಕಿತ್ಸೆಯಲ್ಲಿ 40,000 ಕೋಟಿ ರೂಪಾಯಿಗಳ ಅವ್ಯವಹಾರವನ್ನು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿದ್ದರೆಂದು ಅವರ ಪಕ್ಷದವರೇ ಹೇಳಿದ್ದಾರೆ ಎಂದು ಪುನರುಚ್ಚರಿಸಿದರು.

ಹಗರಣದ ಸಾಕ್ಷ್ಯ ನೀಡಲಿ: ಸಿಎಂ ಆಗ್ರಹ
ನಾವು ತನಿಖಾ ಆಯೋಗವನ್ನು ರಚಿಸಿದ್ದೇವೆ. ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಕೋವಿಡ್-19 ಅಕ್ರಮಗಳ ಕುರಿತು ತನಿಖೆ ನಡೆಸಬೇಕು. ಬಸನಗೌಡ ಪಾಟೀಲ್ ಯತ್ನಾಳ್ ಅವರು ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಆಯೋಗಕ್ಕೆ ಮಾಡಿದ ಭ್ರಷ್ಟಾಚಾರ ಆರೋಪಗಳ ಕುರಿತು ಬಿಜೆಪಿ ಕೋವಿಡ್ ಹಗರಣಗಳ ಕುರಿತು ಸಾಕ್ಷ್ಯಗಳನ್ನು ನೀಡಲಿ ಎಂದು ಆಗ್ರಹಿಸಿದರು.

ಬಿಜೆಪಿ ವಿರುದ್ಧ ಏಕೆ ಪ್ರಶ್ನಿಸಲಿಲ್ಲ: ಎಚ್‌ಡಿಕೆಗೆ ತಿರಗೇಟು
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರನಾಗಿ ಯಲಬುರ್ಗಾ ಬಸವರಾಜ್‌ ರಾಯರಡ್ಡಿ ಅವರನ್ನು ನೇಮಿಸಬೇಕು ಎಂದು ಎಚ್‌ಡಿ ಕುಮಾರಸವಾಮಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ರಾಯರಡ್ಡಿ ಅವರಿಗೆ ಆರ್ಥಿಕ ವಿಚಾರದಲ್ಲಿ ಪರಿಣತಿ ಇದೆ, ಹಾಗಾಗಿ ಅವರನ್ನು ಸಲಹೆಗಾರರನ್ನಾಗಿ ನೇಮಿಸಿದ್ದೆ.

 Basanagouda Patil Yatnal will give Proof Probe commission of BJP Covid Scam: Urge Siddaramaiah

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಅಧಿಕಾರದಲ್ಲಿದ್ದಾಗ ಸಲಹೆಗಾರರನ್ನು ನೇಮಿಸಿಕೊಂಡಿದ್ದರು. ಆರ್ಥಿಕ ವ್ಯವಹಾರಗಳು ಸೇರಿದಂತೆ ಈ ಎಲ್ಲವನ್ನು ನೀವು ಆಗ ಏಕೆ ಪ್ರಶ್ನೆ ಮಾಡಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಬಿಜೆಪಿ ಮೇಲಿನ ಯತ್ನಾಳ್ ಆರೋಪವೇನು?
ಕೊರೊನಾ ಮೊದಲನೇ ಅಲೆ ವೇಳೆ ಬಿಜೆಪಿ ಅಧಿಕಾರದಲ್ಲಿತ್ತು. ಆದ ಇಂದಿನ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಈ ವೇಳೆ ಒಂದು ಮಾಸ್ಕ ಬೆಲೆ 45 ರೂಪಾಯಿ ಇತ್ತು. ಇದನ್ನು ಯಡಿಯೂರಪ್ಪನವರು 485 ರೂಪಾಯಿಗೆ ಏರಿಸಿದರು. ಹತ್ತು ಸಾವಿರ ಬೆಡ್ ವ್ಯವಸ್ಥೆಯನ್ನು ಬಾಡಿಗೆ ರೂಪದಲ್ಲಿ ಮಾಡಲಾಗಿತ್ತು. ಒಟ್ಟಾರೆ ಕೋವಿಡ್ ವೇಳೆ ಸುಮಾರು 40,000 ಕೋಟಿ ಅವ್ಯವಹಾರ ನಡೆದಿದೆ ಮಾಧ್ಯಮಗಳ ಮುಂದೆ ಹೇಳಿದ್ದರು.

ಯತ್ನಾಳ್ ಆರೋಪ ನಿಜವಿರಬಹುದು: ಪಾಟೀಲ್
ಸ್ವಪಕ್ಷ ಬಿಜೆಪಿ ಮೇಲಿನ ಶಾಸಕ ಬಸನಗೌಡ ಪಾಟೀಲ್ ಅವರ ಆರೋಪ ನಿಜವಿರಬಹುದು. ಅಲ್ಲದೇ ಈವರೆಗೆ ಯತ್ನಾಳ್ ಅವರ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಇತ್ತೀಚೆಗೆ ಹೇಳಿದ್ದರು.

ಅದರ ಬೆನ್ನಲ್ಲೆಈ ವಿಚಾರವನ್ನೇ ಪ್ರಸ್ತಾಪಿಸಿರುವ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸ್ವಪಕ್ಷದವರ ಬಹುಕೋಟಿ ಅವ್ಯವಹಾರವನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ. ಈ ಹಗರಣ ಸಾಕ್ಷ್ಯ ಒದಗಿಸುವಂತೆ ಅವರು ಯತ್ನಾಳ್ ಅವರನ್ನು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+