BJP MLA Munirathna: ಮುನಿರತ್ನ ಏಡ್ಸ್ ಟ್ರ್ಯಾಪ್ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ರಿಯಾಕ್ಷನ್
ವಿಜಯಪುರ, ಸೆಪ್ಟೆಂಬರ್ 21: ಜಾತಿ ನಿಂದನೆ, ಮಹಿಳೆ ಮತ್ತು ಒಕ್ಕಲಿಗರ ವಿರುದ್ಧ ಅಹವೇಳನಕಾರಿ ಪದ ಬಳಕೆ ಆಡಿಯೋ ವೈರಲ್ ಬೆನ್ನಲ್ಲೇ ಶಾಸಕ ಮುನಿರತ್ನ ಅವರಿಗೆ ಹಲವು ಪ್ರಕರಣಗಳು ಸುತ್ತಿಕೊಂಡಿವೆ. ಅತ್ಯಾಚಾರ ಹಾಗೂ ಏಡ್ಸ್ ಟ್ರ್ಯಾಪ್ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಮುನಿರತ್ನ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಬಂಧನ ವಿಚಾರ ಹಾಗೂ ಏಡ್ಸ್ ಪೀಡಿತ ಮಹಿಳೆಯರನ್ನ ಹನಿ ಟ್ರ್ಯಾಪ್ ಗೆ ಬಳಕೆ ಮಾಡಿರುವ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ್ದಾರೆ ಮುನಿರತ್ನ ಎಂಬ ವಿಚಾರದ ಆಡಿಯೋ ಸತ್ಯಾಸತ್ಯತೆ ಹೊರಬರಬೇಕು. ಮಾತನಾಡಿರುವ ಧ್ವನಿ ಮುನಿರತ್ನ ಅವರದ್ದೇ ಹೌದಾ ಅಥವಾ ಇಲ್ಲ ಎಂಬುದು ಪರೀಕ್ಷೆಯಿಂದ ತಿಳಿಯಬೇಕು. ವಿಚಾರದಲ್ಲಿ ಹೋಂ ಮಿನಿಸ್ಟರ್ ಎಫ್ ಎಸ್ ಎಲ್ ರಿಪೋರ್ಟ್ ಕೇಳಿದ್ದಾರೆ ಎಂದು ಹೇಳಿದರು.

ಮುನಿರತ್ನ ವಿರುದ್ಧ ಆಘಾತಕಾರಿಯದ ಆರೋಪಗಳ ಬಂದಿದ್ದು ಆ ಕುರಿತು ತನಿಖೆಯಾಗಬೇಕು. ನಾವು ಯಾವುದೇ ಜನಾಂಗಕ್ಕೆ ಬಯ್ಯೋದು ಅಲ್ಲ. ಒಕ್ಕಲಿಗರ ವಿರುದ್ಧ ದಲಿತರ ವಿರುದ್ಧ ಮಾತನಾಡುವುದು ಸರಿಯಲ್ಲ. ಮಾತನಾಡಿದ್ದು ಮುನಿರತ್ನ ಎಂಬುದೇ ಸಾಬೀತಾ ಆದರೆ ತನಿಖೆಗೆ ನಾವು ಸಹಕಾರ ಕೊಡುತ್ತೇವೆ. ಜನಪ್ರತಿನಿಧಿಯಾದವರು ಯಾರು ತನಗೆ ಮತ ಹಾಕಿದ್ದಾರೋ ಅವರ ಸಮುದಾಯದ ಬಗ್ಗೆ ಅಪಮಾನ ಮಾಡುವುದು ಸರಿಯಲ್ಲ. ಈ ಮುನಿರತ್ನರದ್ದೆ ದ್ವನಿ ಎಂಬುದು ಸಾಬೀತಾದರೆ, ಸರ್ಕಾರ ನಿರ್ಭಿತಿಯಿಂದ ಕ್ರಮ ತೆಗೆದುಕೊಳ್ಳಲಿ ಎಂದು ಯತ್ನಾಳ್ ಹೇಳಿದರು.
ಹನಿಟ್ರ್ಯಾಪ್ ಗಾಗಿ ಎಚ್ ಐ ವಿ ಪೀಡಿತ ಮಹಿಳೆಯರ ಬಳಕೆ ಮಾಡಿಕೊಂಡಿರುವ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಇದು ಬಹಳ ಅಕ್ಷಮ್ಯ ಅಪರಾಧ. ಇದಕ್ಕೆ ನಮ್ಮ ಸಿಂಪತಿ ಹಾಗೂ ಬೆಂಬಲ ಇಲ್ಲ. ಇದೆಲ್ಲ ತಪ್ಪೇ, ಆದರೆ ಇದೆಲ್ಲಾ ಪ್ರೂಫ್ ಆಗಬೇಕೆಂದ ಶಾಸಕ ಯತ್ನಾಳ, ಮುನಿರತ್ನ ಆ ರೀತಿ ಮಾಡಿದ್ದರೆ ನೂರಕ್ಕೆ ನೂರರಷ್ಟು ತಪ್ಪು. ಅಂತವರಿಗೆ ಕಾನೂನಿನಲ್ಲಿ ಏನು ಅವಕಾಶವಿದೆ ಆ ಎಲ್ಲಾ ಶಿಕ್ಷೆ ಆಗಲಿ. ಅದಕ್ಕೂ ಮುನ್ನ ಈ ಆರೋಪದ ಕುರಿತು ಸತ್ಯತೆ ತಿಳಿಯಲಿ, ಧ್ವನಿ ಮಾದರಿಯನ್ನು ಗ್ರಾಮಾಂತರಗಳು ಪರೀಕ್ಷೆಗೆ ಕೊಟ್ಟಿದ್ದಾರೆ ಅದು ಬಂದಮೇಲೆ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಹೇಳಿದರು.
ನನಗೆ ಎಫ್ಎಸ್ಎಲ್ ಮೇಲೆ ನಂಬಿಕೆ ಇದೆ. ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಇಡೀ ಮಾಧ್ಯಮಗಳು ಪಾಟ್ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಿದ್ದವು. ಆಗ ಸಚಿವ ಪ್ರಿಯಾಂಕ ಖರ್ಗೆ ಗೃಹ ಸಚಿವ ಪರಮೇಶ್ವರ್ ಸಿಎಂ ಸಿದ್ದರಾಮಯ್ಯ ಹಾಗೆ ಕೂಗಿಲ್ಲ ಎಂದು ವಾದ ಮಾಡಿದ್ದರು. ಕೊನೆಗೆ ಜಯಗಳಿಸಿದ್ದು ರಾಜ್ಯದ ಮಾಧ್ಯಮಗಳು. ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಎಂಬುದು ರುಜುವಾಯಿತು. ಈ ರೀತಿ ಮುನಿರತ್ನದ್ದು ಪ್ರೂಫ್ ಆದರೆ ಕಾನೂನು ಪ್ರಕಾರ ಶಿಕ್ಷೆ ನೀಡಬೇಕು ಅದಕ್ಕೆ ನನ್ನ ಬೆಂಬಲವಿದೆ ಎಂದು ಯತ್ನಾಳ್ ತಿಳಿಸಿದರು.
ನಾವು ಇಂಥಥ ಹೇಯ ಕೆಲಸವನ್ನು ಒಪ್ಪಲ್ಲ. ಇದರ ಹಿಂದೆ ನಿಶ್ಚಿತವಾಗಿಯೂ ಮಹಾ ನಾಯಕರು ಇದ್ದಾರೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ವಿರುದ್ಧ ಆರೋಪಿಸಿದರು. ಈಗಿರೋ ಆರೋಪ ಯಾರು ಕ್ಷಮಿಸಲಾರದ ಆರೋಪಗಳು. ಮುನಿರತ್ನ ಮಾಡಿದ್ದು ಸಾಬೀತಾದರೆ ಶಿಕ್ಷೆಯಾಗಲಿ. ಒಂದು ವೇಳೆ ಆರೋಪ ಸಾಬೀತಾಗದಿದ್ದರೆ ಇದನ್ನು ಮಾಡಿದ ಮಹನಾಯಕರಿಗೆ ಶಿಕ್ಷೆಯಾಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒತ್ತಾಯಿಸಿದರು.












Click it and Unblock the Notifications