ಹಿಂದೂಹುಲಿ VS ರಾಜಾಹುಲಿ: ಹಿಂದೂಹುಲಿ ಯತ್ನಾಳ್ ಗ್ಯಾಂಗ್‌ಗೆ ಖೆಡ್ಡಾ ತೋಡಿದ ರಾಜಾಹುಲಿ ಪಡೆ!
'ರಾಜಾಹುಲಿ' ಎಂಬ ಬಿರುದು ಪಡೆದು ಕರ್ನಾಟಕ ಮುಖ್ಯಮಂತ್ರಿ ಪಟ್ಟ ಪಡೆದು ಘರ್ಜಿಸಿ ಈಗ ನಿವೃತ್ತಿ ಪಡೆದಿರುವ ಬಿ.ಎಸ್. ಯಡಿಯೂರಪ್ಪ ಅವರಿಗೂ, ನಾನು ಹಿಂದೂಹುಲಿ... ಹಿಂದೂ ರಕ್ಷಕ... ಅಂತಾ ಹೇಳಿಕೊಳ್ಳುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ಭಾರಿ ದೊಡ್ಡ ಫೈಟಿಂಗ್ ನಡೆಯುತ್ತಿದೆ. ಯಡಿಯೂರಪ್ಪ ಕುಟುಂಬದ ವಿರುದ್ಧ ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ನೀಡುತ್ತಿರುವ ಹೇಳಿಕೆ ಒಂದೆರಡಲ್ಲ.
ಅದ್ರಲ್ಲೂ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗೇ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದು, ಈ ರೀತಿ ಕರ್ನಾಟಕ ಬಿಜೆಪಿ ನಾಯಕರು ಒಳಗೊಳಗೆ ಕಚ್ಚಾಡುತ್ತಿರುವುದು ಕಾಂಗ್ರೆಸ್‌ಗೆ ಕೂಡ ಅಸ್ತ್ರ ನೀಡಿದಂತೆ ಆಗಿದೆ. ಹೀಗಿದ್ದಾಗಲೇ, ಹಿಂದೂಹುಲಿ ಯತ್ನಾಳ್ & ಗ್ಯಾಂಗ್‌ಗೆ ಖೆಡ್ಡಾ ತೋಡಿದ ರಾಜಾಹುಲಿ ಪಡೆ ಏನು ಮಾಡುತ್ತಿದೆ ಗೊತ್ತೆ?

ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶಾಕ್?
ಕರ್ನಾಟಕ ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಸಾಕಷ್ಟು ಬಲ ತುಂಬಿದ್ದಾರೆ. ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ & ಅವರ ಪುತ್ರನಿಗೆ ಸಾಕಷ್ಟು ಪವರ್ ನೀಡಿದ್ದಾರೆ ಕೇಂದ್ರದ ಬಿಜೆಪಿ ನಾಯಕರು. ಆದರೆ ಇದೇ ವಿಚಾರ ಕರ್ನಾಟಕ ಬಿಜೆಪಿ ಘಟಕದ ಇನ್ನೂ ಕೆಲವರಿಗೆ ಆಗುತ್ತಿಲ್ಲ ಎಂಬ ಆರೋಪ ಇದೆ. ಹೀಗೆ ಬಿಜೆಪಿ ನಾಯಕರು ಒಳಗೊಳಗೆ ಫೈಟಿಂಗ್ ಮಾಡ್ತಾ ಇದ್ದರೆ, ಕಾಂಗ್ರೆಸ್‌ಗೆ ಇದರಿಂದ ದೊಡ್ಡ ಲಾಭ ಆಗುತ್ತಿದೆ, ಎಂಬ ಅಭಿಪ್ರಾಯ ಕೂಡ ಕೇಳಿ ಬರುತ್ತಿದೆ.
ಅದ್ರಲ್ಲೂ ಬಿ.ಎಸ್. ಯಡಿಯೂರಪ್ಪ & ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಹೊಸ ಗುಂಪು ರಚನೆ ಆಗಿದೆ. ಆದರೆ, ಹಿಂದೂಹುಲಿ ಯತ್ನಾಳ್ & ಗ್ಯಾಂಗ್‌ಗೆ ಖೆಡ್ಡಾ ತೋಡಿದ ರಾಜಾಹುಲಿ ಪಡೆ ಹೊಸ ಗೇಮ್ ಪ್ಲಾನ್ ಮುಂದೆ ಇಟ್ಟಿದೆ. ಯತ್ನಾಳ್ ನೀಡುತ್ತಿರುವ ಹೇಳಿಕೆ ಕಾರಣಕ್ಕೆ ಕರ್ನಾಟಕ ಬಿಜೆಪಿಗೆ ದೊಡ್ಡ ಹೊಡೆತ ಬೀಳುತ್ತಿದೆ ಎಂಬ ಆರೋಪ ಹೊರಿಸಿ, ಕೇಂದ್ರ ನಾಯಕರಿಗೆ ಮಾಹಿತಿ ನೀಡಲಾಗಿದೆ. ಹೀಗೆ ಕೇಂದ್ರ ಬಿಜೆಪಿ ನಾಯಕರು ಕೂಡ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.
ಯತ್ನಾಳ್ ವಿರುದ್ಧ ಕಠಿಣ ಕ್ರಮ?
ಬಿಜೆಪಿ ಕೇಂದ್ರ ನಾಯಕರು ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ನೀಡುತ್ತಿರುವ ಹೇಳಿಕೆ & ವರ್ತನೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ವಿಚಾರದಲ್ಲಿ ಚರ್ಚೆ ನಡೆಸಿ ಯತ್ನಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಹರಿದಾಡ್ತಿದೆ. ಆದರೂ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರದ ನಾಯಕರ ಮೇಲೆ ಕೂಡ ಪ್ರಭಾವವನ್ನ ಬೀರುವ ಶಕ್ತಿ ಹೊಂದಿದ್ದು, ಮುಂದೆ ಏನಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications