ವಿಜಯೇಂದ್ರ ಸಾರಥ್ಯದಲ್ಲಿ ಕೆಜೆಪಿ ಭಾಗ- 2: ಬಸನಗೌಡ ಯತ್ನಾಳ್ ನೀಡಿದ ಸುಳಿವೇನು?
ಬೆಂಗಳೂರು, ಡಿಸೆಂಬರ್ 25: ಲೋಕಸಭಾ ಚುನಾವಣೆ ಆದ ಬಿಜೆಪಿಯಲ್ಲಿ ಹಲವು ಬದಲಾವಣೆಗಳು ಆಗಲಿವೆ. ಬಿಜೆಪಿ ರಾಜ್ಯ ಘಟಕದ ಪುನರ್ ರಚನೆ ಮೂಲಕ ಬಿವೈ ವಿಜಯೇಂದ್ರ ಕೆಜೆಪಿ ಪಾರ್ಟ್ 2 ಕಟ್ಟಿದ್ದಾರೆ. ಉತ್ತರ ಕರ್ನಾಟಕಕ್ಕೆ ಮಹತ್ವಸ ಸ್ಥಾನ ನೀಡಿಲ್ಲ. 28 ಕ್ಷೇತ್ರ ಗೆಲ್ಲದಿದ್ದರೆ, ಚುನಾವಣೆ ಬಳಿಕ ರಾಜ್ಯಾಧ್ಯಕ್ಷರ ಸ್ಥಾನ ತೆರವು ನಿಶ್ಚಿತ ಎಂದು ಭವಿಷ್ಯ ನುಡಿದಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸ್ವಪಕ್ಷದವರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತಮಗೆ ಬೇಕಾದವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಕೆಜೆಪಿ ಪಾರ್ಟ್ 2 ಕಟ್ಟಿಕೊಂಡಿದ್ದಾರೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರು ಕೆಜೆಪಿ 1 ಕಟ್ಟಿದ್ದರು. ವಿಜಯೇಂದ್ರದ ಕೆಜೆಪಿ ಆಯಸ್ಸು ಮುಂದಿನ ಲೋಕಸಭಾ ಚುನಾವಣೆವರೆಗೆ ಮಾತ್ರ ಎಂದು ವ್ಯಂಗ್ಯವಾಡಿದರು.

ಸದ್ಯ ರಾಜ್ಯಾಧ್ಯಕ್ಷರು ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಭರವಸೆ ನೀಡಿದ್ದಾರೆ. ಒಂದು ವೇಳೆ ಒಂದೇ ಒಂದು ಸ್ಥಾನ ಸೋತರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಮನೆಗೆ ಕಳುಹಿಸುತ್ತಾರೆ. ಅವರ ಸ್ಥಾನ ತೆರವು ನಿಶ್ಚಿತ. ಇನ್ನೂ ಪದಾಧಿಕಾರಿಗಳ ಆಯ್ಕೆಯಲ್ಲಿ ಬಿಎಸ್ ಯಡಿಯೂರಪ್ಪ ಅವರ ಶಿಷ್ಯ ಎನ್.ರವಿಕುಮಾರ್ ಗೆ ವಿಧಾನ ಪರಿಷತ್ ವಿರೋಧ ಪಕ್ಷ ಸ್ಥಾನ ಕೊಟ್ಟಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕಕ್ಕೂ ಆದ್ಯತೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.
ಒಂದು ಭಾಗಕ್ಕೆ ಬೆಣ್ಣೆ-ಇನ್ನೊಂದಕ್ಕೆ ಸುಣ್ಣ: ಯತ್ನಾಳ್
ಬಿಜೆಪಿ ರಾಜ್ಯ ಘಟಕದ ಪುನರ್ ರಚನೆಯಲ್ಲಿ ಉತ್ತರ ಕರ್ನಾಟಕಕ್ಕೆ ಪಾಲ್ತು ಸ್ಥಾನ ನೀಡಿ, ದಕ್ಷಿಣ ಕರ್ನಾಟಕಕ್ಕೆ ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನ ನೀಡಿದ್ದಾರೆ. ಈ ಮೂಲಕ ಒಂದು ಭಾಗಕ್ಕೆ ಬೆಣ್ಣೆ ಮತ್ತೊಂದು ಭಾಗಕ್ಕೆ ಸುಣ್ಣ ಎಂಬಂತೆ ಮಾಡಲಾಗಿದೆ ಎಂದು ಯತ್ನಾಳ್ ಆರೋಪಿಸಿದರು. ಪದಾಧಿಕಾರಿಗಳ ಆಯ್ಕೆ ವಿಚಾರಕ್ಕೆ ಬಸನಗೌಡ ಯತ್ನಾಳ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಬಳಿಕ ಬಿಜೆಪಿಯಲ್ಲಿ ಮೇಜರ್ ಸರ್ಜರಿ ಆಗಿದ್ದರೆ, ಮುಂದಿನ ನೀರ್ಣಯ ನಾನು ಕೈಗೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ಯತ್ನಾಳ್ ಅವರು ಹೇಳಿದ್ದಾರೆ.

ಕಳ್ಳರ ಕೈಗೆ ಅಧಿಕಾರ: ಮೌಲ್ಯ ರಾಜಕಾರಣ ಕಣ್ಮರೆ
ಬಿಜೆಪಿ ವರಿಷ್ಠರು ಕಳ್ಳರ ಕೈಗೆ ಅಧಿಕಾರ ಕೊಟ್ಟಿದ್ದಾರೆ. ಇದು ಕೆಲವು ದಿನ ಅಷ್ಟೇ ಚುನಾವಣೆ ಬಳಿಕ ಒಂದೇ ಒಂದು ಸ್ಥಾನ ಕಡಿಮೆ ಆದರೂ ಆ ಅಧಿಕಾರ ಕಿತ್ತುಕೊಳ್ಳುತ್ತಾರೆ. ಇಂದಿನ ರಾಜಕೀಯದಲ್ಲಿ ಕಳ್ಳರು, ಲಫಂಗರು ಹೆಚ್ಚಾಗಿದ್ದಾರೆ. ಮೌಲ್ಯಾಧಾರಿತ ರಾಜಕಾರಣ ಇಂದು ಕಣ್ಮರೆಯಾಗಿದೆ.
ಖರ್ಗೆ ಪಿಎಂ-ಸಿಎಂ ಆಗಿ ಏಕೆ ಮಾಡಲಿಲ್ಲ?
ಕಾಂಗ್ರೆಸ್ ದೇಶದಲ್ಲಿ ನಿರಂತರವಾಗಿ ಗೆಲ್ಲುವ ಮೂಲಕ ಸುವರ್ಣ ಯುಗ ಕಂಡಿತ್ತು. ಆವಾಗಲೇ ಇಂದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಪ್ರಧಾನಿ ಹುದ್ದೆ ಕೊಡಬೇಕಿತ್ತು. ಆದರೆ ಕೊಡಲಿಲ್ಲ. ಇಂದು ಮೈತ್ರಿಕೂಟವು ಖರ್ಗೆಯವರನ್ನು ಪ್ರಧಾನಿ ಅರ್ಭ್ಯರ್ಥಿ ಎನ್ನುತ್ತಿದೆ.
ಕರ್ನಾಟಕದಲ್ಲಿ ಎಂಥೆಂತವರು ಮುಖ್ಯಮಂತ್ರಿಗಳಾದರೂ, ಆಗ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಯಾಕೆ ಸಿಎಂ ಮಾಡಲಿಲ್ಲ? ಎಂದು ಪ್ರಶ್ನಿಸಿದರು. ಇನ್ನೂ ಸಿಎಂ ಸಿದ್ದರಾಮಯ್ಯ ಅವರಿಗೆ ಮರೆವು ಹೆಚ್ಚಾಗಿದೆ. ಈ ಹಿಂದೆ ಹಿಜಾಬ್ ನಿಷೇಧ ನಿರ್ಧಾರ ಹಿಂಪಡೆಯುತ್ತೇವೆ ಎಂದವರು. ಇದೀಗ ಬೇರೆ ರೀತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿ ಕಾರಿದರು.












Click it and Unblock the Notifications