ಬಾನು ಮುಷ್ತಾಕ್ "ದಸರಾ ವಿವಾದ": ನಿತ್ಯೋತ್ಸವ ಕವಿ ಕೆ.ಎಸ್ ನಿಸಾರ್ ಅಹಮದ್ ವಿಡಿಯೋ ವೈರಲ್!
ಲೇಖಕಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನಾ ಸಮಾರಂಭಕ್ಕೆ ಕರೆದಿರುವುದು ವಿವಾದ ಸ್ವರೂಪ ಪಡೆದುಕೊಂಡಿರುವಾಗಲೇ ಕನ್ನಡದ ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿರುವ ನಿತ್ಯೋತ್ಸವ ಕವಿ ದಿ. ಕೆ.ಎಸ್ ನಿಸಾರ್ ಅಹಮದ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾಡಹಬ್ಬ ದಸರಾ ಉದ್ಘಾಟನೆಯ ಕುರಿತು ಅವರು ಮಾತನಾಡಿರುವ ಮಾತುಗಳನ್ನು ಕನ್ನಡಿಗರು ನೆನಪಿಸಿಕೊಂಡಿದ್ದು ನಿಸಾರ್ ಅಹಮದ್ ಅವರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಿಸಾರ್ ಅಹಮದ್ ಅವರು ಚಂದನ ಸುದ್ದಿ ವಾಹಿನಿಗೆ ನೀಡಿರುವ ಹಳೆಯ ಸಂದರ್ಶನ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿಮಗೆ ಹಲವು ಅತ್ಯುತ್ತಮ ಪ್ರಶಸ್ತಿಗಳು ಬಂದಿವೆ ಎಂದು ಹೇಳುವ ಸಂದರ್ಭದಲ್ಲಿ ನನಗೆ ಬಂದ ಪ್ರಶಸ್ತಿಗಳಲ್ಲಿ ಸಾಹಿತ್ಯೇತರ ಪ್ರಶಸ್ತಿ 2017ನೇ ಸಾಲಿನಲ್ಲಿ ಮೈಸೂರು ದಸರಾ ಉದ್ಘಾಟಕರನ್ನಾಗಿ ಆಹ್ವಾನ ನೀಡಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಆಹ್ವಾನ ನೀಡಿದ್ದರು. ಅಂತಹ ಮಹತ್ವದ ಕಾರ್ಯಕ್ರಮಕ್ಕೆ ನನ್ನನ್ನು ಕರೆದು ಅವಕಾಶ ನೀಡಿದ್ದು ನನಗೆ ಅತ್ಯಂತ ಸಂತೋಷವನ್ನುಂಟು ಮಾಡಿತ್ತು.

ಈ ವಿಚಾರದಲ್ಲಿ ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ. ನನ್ನ ಜೀವಮಾನದ ಅತ್ಯಂತ ಸಂತೋಷದ ಕ್ಷಣಗಳು ಅದು. ಬೇರೆ ಬೇರೆ ಪ್ರಶಸ್ತಿಗಳ ತೂಕ ಒಂದು ಕಡೆ. ಸಣ್ಣ ಪ್ರಶಸ್ತಿ ಕೊಟ್ಟರೂ ಅದರ ಹಿಂದೆ ಇರುವ ಪ್ರೀತಿ ಹಾಗೂ ವಿಶ್ವಾಸ ಮುಖ್ಯ. ಇದು ಜೀವಮಾನದ ದುರ್ಲಭ (ಅಪರೂಪ), ನಾನು ಕನಸಿನಲ್ಲೂ ದಸರಾ ಉದ್ಘಾಟನೆ ಮಾಡಲಿದ್ದೇನೆ ಎಂದು ಅಂದುಕೊಂಡಿರಲಿಲ್ಲ ಎಂದು ನಿಸಾರ್ ಅಹಮದ್ ಅವರು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಗಳಿಸಿರುವ ನಿಸಾರ್ ಅಹಮದ್ ಅವರ ಮಾತು - ನಡವಳಿಕೆ ಮತ್ತೊಮ್ಮೆ ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ. ಭೀಮ ಚಂದ್ರ ಎನ್ನುವವರು, ಇವ್ರು ನಮ್ಮ ಕನ್ನಡ ತಾಯಿ ಭುವನೇಶ್ವರಿ ಅಂತ ಒಪ್ಪಿದ್ದಾರೆ...ನಿತ್ಯೋತ್ಸವ ಪದ್ಯದಲ್ಲೂ ಬರೆದಿದ್ದಾರೆ ಎಂದಿದ್ದಾರೆ.
ಸೌಮ್ಯ ಬಿ ಎನ್ನುವವರು, ನಮ್ಮ ಹೆಮ್ಮೆಯ ನಿತ್ಯೋತ್ಸವ ಕವಿ... ಕರ್ನಾಟಕದ ಹೆಮ್ಮೆ ಕನ್ನಡದ ಹೆಮ್ಮೆ ❤️ ಬಹುಮಾನಗಳು ಬಂದ ಮಾತ್ರಕ್ಕೆ ವ್ಯಕ್ತಿ ಬಹುಮಾನ್ಯನಾಗುವುದಿಲ್ಲ 😊 ಧರ್ಮ ಒಂದೇ ಆದ ಮಾತ್ರಕ್ಕೆ ಮನುಷ್ಯರ ಮನೋಧರ್ಮ ಒಂದೇ ಆಗಲು ಸಾಧ್ಯವೇ? ❤️ ಇಂತಹ ಸಾವಿರಾರು ಮನಮುಟ್ಟುವ ಸಾಲುಗಳನ್ನು ಕನ್ನಡಕ್ಕೆ ನೀಡಿದ ಧೀಮಂತ ಶ್ರೀಮಂತ ಕವಿ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಭಿನ್ನ ಸಂಸ್ಕೃತಿಯ ಅರಿವನ್ನು ಹೊಂದಿದ್ದ ಅಪರೂಪದ ಕವಿ 🙏 ನಿಸಾರ್ ಅವರು ಎಂದು ಹಲವು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications