ಬೆಂಗಳೂರು-ನಾಂದೆಡ್ ರೈಲಿಗೆ ಬೆಂಕಿ: ಉಗ್ರರ ಕೃತ್ಯ
ಬೆಂಗಳೂರು, ಡಿ.30- ಮೊನ್ನೆ ಅನಂತಪುರದ ಬಳಿ ರೈಲು ದುರಂತ ಘಟಿಸಿ 26 ಮಂದಿ ಸಜೀವವಾಗಿ ದಹನಗೊಂಡಿದ್ದು ಕೇಳಿ ಮನಸ್ಸು ಮಮ್ಮಲಮರುಗಿತ್ತು. ಛೆ! ಎಂಥಾ ಘೋರ ದುರಂತವಪ್ಪಾ ಎಂದು ಮನಸ್ಸು ವಿಹ್ವಲಗೊಂಡಿತ್ತು.
ಇದೀಗ ಘಟನೆಗೆ ಸಂಬಂಧಿಸಿದಂತೆ ಭಯಾನಕ ಸುದ್ದಿಯೊಂದು ಹೊರಬಿದ್ದಿದೆ. ಏನಪ್ಪಾ ಅಂದರೆ ಬೆಂಗಳೂರಿನಿಂದ ಮಹಾರಾಷ್ಟ್ರದ ನಾಂದೆಡ್ ಗೆ ಹೊರಟಿದ್ದ Bangalore-Nanded express ರೈಲು ಅನಂತಪುರದ ಕೊತ್ತಚೆರುವು ರೈಲ್ವೆ ನಿಲ್ದಾಣದ ಸಮೀಪ ದುರಂತಕ್ಕೀಡಾದ ಘಟನೆಯ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಬೆಂಕಿಯ ಮೂಲಸ್ಥಾನ :
ಸೀಟ್ ನಂಬರ್ 7ರ ಕೆಳಗೆ 4 ಅಂಗುಲ ವಿಶಾಲದ ತೂತೊಂದು ಕಂಡುಬಂದಿದೆ. ಇದು ಸ್ಫೋಟಕ ಸಾಮಗ್ರಿಯಿಂದ ಅಥವಾ ಯಾವುದೋ ದಹ್ಯ ವಸ್ತುವಿನಿಂದ ಉಂಟಾದ ಕಂದಕ ಎಂಬುದನ್ನು ಗಮನಿಸಿದ್ದಾರೆ ಮತ್ತು ಇದೇ ಬೆಂಕಿಯ ಮೂಲಸ್ಥಾನ ಎಂದಿದ್ದಾರೆ. ಈ ಸೀಟಿನಡಿಯಿಂದ ಕಾಣಿಸಿಕೊಂಡಿರುವ ಬೆಂಕಿ ಇಡೀ ಬೋಗಿಯನ್ನು ದಹಿಸಿದೆ.
26 ದೇಹಗಳ ಪೈಕಿ 22 ದೇಹಗಳು ಬರ್ತ್ ಸೀಟುಗಳ ಮೇಲೆ ಶಯನಾವಸ್ಥೆಯಲ್ಲಿರುವಂತೆ ಕಂಡುಬಂದಿದೆ. ಆದ್ದರಿಂದ ಪ್ರಯಾಣಿಕರಿಗೆ ಎದ್ದು ಹೊರಹೋಗಲು ಅವಕಾಶವಿಲ್ಲದಂತೆ ಬೆಂಕಿ ಕ್ಷಿಪ್ರಗತಿಯಲ್ಲಿ ಹಬ್ಬಿದೆ ಎಂಬುದು ಗಮನಾರ್ಹ.
ಪ್ರಾಥಮಿಕವಾಗಿ ಭಾವಿಸಿದಂತೆ ಶಾರ್ಟ್ ಸರ್ಕ್ಯೂಟಿನಿಂದ ಸೃಷ್ಟಿಯಾದ ಬೆಂಕಿ ಇದಲ್ಲ. ಮತ್ತೋ ಒಂದು ತರ್ಕವೆಂದರೆ ಶಾರ್ಟ್ ಸರ್ಕ್ಯೂಟ್ ಸಂಭವಿದ್ದೇ ಆದರೆ ಬೆಂಕಿಯು ಬೋಗಿಯ ಮೇಲ್ಭಾಗದಿಂದ ಹರಡಿಕೊಳ್ಳಬೇಕಿತ್ತು. ಏಕೆಂದರೆ ವಿದ್ಯುತ್ ವೈರಿಂಗ್ ಬೋಗಿಯ ಮೇಲ್ಭಾಗದಲ್ಲೇ ಇರುವುದು.
ಹಾಗಂತ ಇಷ್ಟರಿಂದಲೇ ಅಗ್ನಿ ದುರಂತಕ್ಕೆ ಭಯೋತ್ಪಾದಕ ಕೃತ್ಯ ಕಾರಣ ಎನ್ನಲಾಗದು. ಇನ್ನೂ ಹೈದರಾಬಾದಿನಿಂದ ರಾಸಾಯನಿಕ ವರದಿ (chemical analysis report) ಬರಬೇಕಾಗಿದೆ. ಅದರಿಂದ ಪ್ರಕರಣಕ್ಕೆ ಮತ್ತಷ್ಟು ನಿಖರತೆ ಲಭಿಸುತ್ತದೆ.












Click it and Unblock the Notifications