ಬಕ್ರೀದ್ ಸರ್ಕಾರಿ ರಜೆ ಸೆ.13ರ ಮಂಗಳವಾರ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 08 : ಕರ್ನಾಟಕ ಸರ್ಕಾರ ಬಕ್ರೀದ್‌ ಪ್ರಯುಕ್ತ ಸೆ.12ರಂದು ಘೋಷಣೆ ಮಾಡಿದ್ದ ಸರ್ಕಾರಿ ರಜೆಯನ್ನು ರದ್ದುಪಡಿಸಿದೆ. ಸೆ.13ರ ಮಂಗಳವಾರ ಬಕ್ರೀದ್ ರಜೆ ಘೋಷಣೆ ಮಾಡಲಾಗಿದೆ.

ಚಂದ್ರದರ್ಶನ ಸಮಿತಿ ಅಭಿಪ್ರಾಯದಂತೆ ರಾಜ್ಯ ಸರ್ಕಾರ ಬಕ್ರೀದ್ ರಜೆಯನ್ನು ರದ್ದುಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 13ರ ಮಂಗಳವಾರ ಸರ್ಕಾರಿ ರಜೆಯನ್ನು ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.[2016ನೇ ಸಾಲಿನ ಸರ್ಕಾರಿ ರಜೆ ದಿನಗಳ ಸಂಖ್ಯೆ ಇಳಿಕೆ]

vidhana soudha

ಹಲವು ಕ್ಯಾಲೆಂಡರ್‌ಗಳಲ್ಲಿ ಮತ್ತು ಕರ್ನಾಟಕ ಸರ್ಕಾರ ಹಿಂದೆ ಪ್ರಕಟಿಸಿದ ಸರ್ಕಾರಿ ರಜಾ ದಿನಗಳ ಪಟ್ಟಿಯಲ್ಲಿ ಸೆಪ್ಟಂಬರ್ 12 ಸೋಮವಾರ ಬಕ್ರೀದ್ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಈ ರಜೆಯನ್ನು ರದ್ದುಪಡಿಸಿ ಮಂಗಳವಾರ ರಜೆ ನೀಡುವುದಾಗಿ ಆದೇಶ ಹೊರಡಿಸಲಾಗಿದೆ.[ಬಕ್ರೀದ್ ಆಚರಣೆ, ಬನ್ನೂರು ಕುರಿಗೆ ಬೇಡಿಕೆ ಹೆಚ್ಚು]

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಸೆ.9ರಂದು ಕರ್ನಾಟಕ ಬಂದ್ : ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕನ್ನಡ ಒಕ್ಕೂಟ ಸೆ.9ರ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಆದ್ದರಿಂದ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ. ಸಾರಿಗೆ ಸಂಚಾರ ಸ್ಥಗಿತಗೊಂಡರೆ ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳು ಬಾಗಿಲು ಮುಚ್ಚಲಿವೆ.[ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government announced Bakrid 2016 holiday on 13th September, Tuesday.
Please Wait while comments are loading...