ಕರ್ನಾಟಕ ಸಚಿವರುಗಳ ಸರಾಸರಿ ಆಸ್ತಿ ಮೌಲ್ಯ 76 ಕೋಟಿ ರು !
Recommended Video

ಬೆಂಗಳೂರು, ಜುಲೈ 01: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವರ ವಿರುದ್ಧದ ಕ್ರಿಮಿನಲ್ ಕೇಸ್, ಆಸ್ತಿ ಮೌಲ್ಯದ ವಿವರಗಳು ಇದೀಗ ಲಭ್ಯವಾಗಿದೆ. ಕರ್ನಾಟಕದ 27 ಸಚಿವರ ವಿವರಗಳು ಲಭ್ಯವಾಗಿದ್ದು, 7 ಮಂದಿ ಕ್ರಿಮಿನಲ್ ಕೇಸ್ ಹೊಂದಿದ್ದಾರೆ.
ಕರ್ನಾಟಕ ಎಲೆಕ್ಷನ್ ವಾಚ್ ಹಾಗೂ ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ ತಯಾರಿಸಿರುವ ವರದಿ ಪ್ರಕಾರ, ಸಿಎಂ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ 27 ಮಂದಿ ಸಚಿವರುಗಳ ವಿವರ ಲಭ್ಯವಿದ್ದು, ಜಯಮಾಲಾ ಅವರ ಅಫಿಡವಿಟ್ ಮಾತ್ರ ಲಭ್ಯವಾಗಿಲ್ಲ.

ಕ್ರಿಮಿನಲ್ ಕೇಸ್ ವುಳ್ಳವರು:
* ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಸಚಿವರು: 7 (27%) ಮುಖ್ಯಮಂತ್ರಿ ಸೇರಿ ಹಲವಾರು ಮಂದಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.
* ಅತಿ ಉಗ್ರವಾದ ಕ್ರಿಮಿನಲ್ ಕೇಸ್ : 4(15%) ಮುಖ್ಯಮಂತ್ರಿ ಸೇರಿ ಹಲವಾರು ಮಂದಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.

ಆರ್ಥಿಕ ಹಿನ್ನಲೆ:
* ಕೋಟ್ಯಧಿಪತಿ ಸಚಿವರುಗಳು : 26 ಮಂದಿ ಸಚಿವರ ಪೈಕಿ 25 (96%) ಮಂದಿ ಕೋಟ್ಯಧಿಪತಿಗಳು.
* ಸರಾಸರಿ ಆಸ್ತಿ: 26 ಮಂದಿ ಸಚಿವರ ಸರಾಸರಿ ಆಸ್ತಿ ಮೌಲ್ಯ 76.08 ಕೋಟಿ ರು
ವಯಸ್ಸಿನ ಸರಾಸರಿ: 3 (11%) ಸಚಿವರ ವಯಸ್ಸಿನ ಸರಾಸರಿ 31 ರಿಂದ 50ರಷ್ಟಿದೆ.
* 20(77%) ಸಚಿವರ ವಯಸ್ಸಿನ ಸರಾಸರಿ 51 ರಿಂದ 70 ರಷ್ಟಿದೆ.
* 2 (8%) ಸಚಿವರ ವಯಸ್ಸಿನ ಸರಾಸರಿ 71 ರಿಂದ 80 ರಷ್ಟಿದೆ.
* 1 ಸಚಿವರ ವಯಸ್ಸು 80ರ ಮೇಲಿದೆ.
* ಮಹಿಳಾ ಸಚಿವರಾಗಿ ಜಯಮಲಾ ಅವರು ಮಾತ್ರ ಇದ್ದಾರೆ.












Click it and Unblock the Notifications