Railway: ಯಶವಂತಪುರ-ಅರಸೀಕೆರೆ ಮಾರ್ಗದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಅಪ್‌ಗ್ರೇಡ್
ಬೆಂಗಳೂರು, ಡಿಸೆಂಬರ್ 21: ಸುಧಾರಿತ ರೈಲು ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ರೈಲ್ವೆ ಮಂಡಳಿಯು ಅಗತ್ಯ ನಿರ್ಧಾರಗಳನ್ನು ಕೈಗೊಂಡು ಯೋಜನೆ ರೂಪಿಸುತ್ತಿದೆ. ಇದೀಗ ಕೋಟ್ಯಂತರ ರೂಪಾಯಿ ವೆಚ್ಚೆದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಅಳವಡಿಕೆ ಕಾರ್ಯಕ್ಕೆ ಚಾಲನೆ ದೊರೆತಿದೆ.
ಬೆಂಗಳೂರಿನ ಯಶವಂತಪುರದಿಂದ ಅರಸಿಕೆರೆ ವರೆಗೆ ಇರುವ ರೈಲು ಮಾರ್ಗದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಸ್ಥಾಪನೆ ಕಾರ್ಯಕ್ಕೆ ರೈಲ್ವೆ ಮಂಡಳಿ ಹಸಿರು ನಿಶಾನೆ ತೋರಿದೆ. ಇದು ಒಟ್ಟು 165.86 ಕಿಲೋ ಮೀಟರ್‌ಗಳ ದೂರದ ವ್ಯಾಪ್ತಿ ಇದಾಗಿದ್ದು, ಸಿಗ್ನಲಿಂಗ್ ಮೇಲ್ದರ್ಜೆಗೆ ಏರಿಸಲು ಒಟ್ಟು 218.75 ಕೋಟಿ ಖರ್ಚು ಮಾಡಲಾಗುತ್ತಿದೆ.

ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಳವಡಿಕೆ ಕಾರ್ಯ ಆರಂಭಿಸಲಾಗಿದೆ. ಬೆಂಗಳೂರು ಮತ್ತು ಮೈಸೂರು ಎರಡೂ ವಿಭಾಗಗಳು ವಿಶೇಷವಾಗಿ ಯಶವಂತಪುರ-ಅರಸೀಕೆರೆ ವಿಭಾಗದಲ್ಲಿ ಅಧಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಕ್ಯೆ ನಿರಂತರ ಏರಿಕೆ ಆಗಿದೆ.
ರೈಲುಗಳಿಗೆ ಪೂರಕವಾಗಿ ಸಿಗ್ನಲಿಂಗ್ ಅಳವಡಿಕೆ
ಯಶವಂತಪುರ-ಸಂಪಿಗೆ ರಸ್ತೆ ವರೆಗೆ ಒಟ್ಟು 107.21 ಕಿಲೋಮೀಟರ್ ದೂರ ಇದೆ. ಇದು ಬೆಂಗಳೂರು ವಿಭಾಗದ ಅಡಿಯಲ್ಲಿ ಬರುತ್ತದೆ. ಪ್ರಸ್ತುತ ಶೇಕಡಾ 118 ರಷ್ಟು ಲೈನ್ ಸಾಮರ್ಥ್ಯದ ಬಳಕೆಯೊಂದಿಗೆ ಪೀಕ್ ಅವರ್‌ನಲ್ಲಿ ಹೆಚ್ಚುವರಿ ರೈಲುಗಳು ಕಾರ್ಯ ನಿರ್ವಹಿಸುತ್ತದೆ.
ಏಕಕಾಲದಲ್ಲಿ, ಸಂಪಿಗೆ ರಸ್ತೆ ಮತ್ತು ಅರಸೀಕೆರೆ ನಡುವಿನ ವಿಭಾಗದ 58.65 ಕಿಲೋ ಮೀಟರ್‌ಗಳ ವ್ಯಾಪಿ ಮತ್ತು ಮೈಸೂರು ವಿಭಾಗದ ಅಡಿಯಲ್ಲಿ ಶೇಕಡಾ 81ರಷ್ಟು ಗರಿಷ್ಠ ಅವಧಿಯ ಲೈನ್ ಸಾಮರ್ಥ್ಯವು ರೈಲುಗಳಿಗೆ ಬಳಕೆ ಆಗುತ್ತಿದೆ. ಈ ಸಂಬಂಧ ಸಿಗ್ನಲಿಂಗ್ ಮೇಲ್ದರ್ಜೆಗೆ ಏರಿಕೆ ಮಾಡಲಾಗುತ್ತದೆ.

ಯೋಜನೆಯ ಉದ್ದೇಶಗಳು
ಮೂಲಗಳ ಪ್ರಕಾರ ಆಹಾರ ಧಾನ್ಯಗಳು, ರಸಗೊಬ್ಬರಗಳು, ಪಿಒಎಲ್, ಸಿಮೆಂಟ್, ಉಕ್ಕು ಮತ್ತು ಆಟೋಮೊಬೈಲ್ ನಂತಹ ಸರಕುಗಳನ್ನು ಒಳಗೊಂಡಿರುವ ಪ್ರಯಾಣಿಕರ ಮತ್ತು ಸರಕು ಸಾಗಣೆ ಎರಡರಲ್ಲೂ ಗಣನೀಯ ಏರಿಕೆ ಆಗುವ ಸಾಧ್ಯತೆಗಳು ಇವೆ. ಈ ಕಾರಣದಿಂದ ಸ್ವಯಂಚಾಲಿತ ಸಿಗ್ನಲಿಂಗ್ ಯೋಜನೆಯು ಲೈನ್ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ರೈಲ್ವೆ ಮಂಡಳಿ ಹೊಂದಿದೆ.
ಸಿಗ್ನಲಿಂಗ್ ಮೇಲ್ದರ್ಜೆಗೆ ಏರುವುದುರಿಂದ ಈ ಸಾಮರ್ಥ್ಯವು ಹೆಚ್ಚಾಗುವುದರ ಜೊತೆಗೆ ಕಡಿಮೆ ಅಂತರದಲ್ಲಿಯೇ ಹೆಚ್ಚುವರಿ ರೈಲುಗಳು ತಡೆರಹಿತ ಕಾರ್ಯ ನಿರ್ವಹಣೆ ಮಾಡಲು ಸಹಾಯ ಮಾಡುತ್ತವೆ. ರೈಲು ಸಂಚಾರ ಸುಗಮಕ್ಕೆ ಈ ಆಟೋಮ್ಯಾಟಿಕ್ (ಸ್ವಯಂಚಾಲಿತ) ಸಿಗ್ನಲಿಂಗ್ ವ್ಯವಸ್ಥೆ ಪರಿಣಾಮಕಾರಿಯಾಗಿದೆ.
10 ವರ್ಷ ಗಮನದಲ್ಲಿಟ್ಟುಕೊಂಡು ಕಾರ್ಯ
ಸಿಗ್ನಲಿಂಗ್ ಮೇಲ್ದರ್ಜೆಗೆ ಏರಿಸುವ ಯೋಜನೆ ಪೂರ್ಣಗೊಳಿಸಲು ಮೂರು ವರ್ಷಗಳ ಟೈಮ್‌ಲೈನ್ ಹಾಕಿಕೊಳ್ಳಲಾಗಿದೆ.
ಮುಂದಿನ ಹತ್ತು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿಯ ರೈಲು ದಟ್ಟಣೆಯಲ್ಲಿ ಸಂಭವನೀಯ ಏರಿಕೆ ಆಧಾರದಲ್ಲಿ ಸಿಗ್ನಲಿಂಗ್ ಕಾರ್ಯತಂತ್ರ ಹಮ್ಮಿಕೊಂಡಿದೆ.
ರೈಲುಗಳ ಆವರ್ತನ ಹೆಚ್ಚಾಗುವುದು, ಅವುಗಳಿಗೆ ಸಮರ್ಪಕ ಕಾರ್ಯ ನಿರ್ವಹಣೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಅಳವಡಿಕೆ ಕಾರ್ಯವು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಸ್ವಯಂಚಾಲಿತ ಸಿಗ್ನಲಿಂಗ್‌ನ ಅನುಷ್ಠಾನವು ರೈಲ್ವೆ ಮೂಲ ಸೌಕರ್ಯದ ಆಧುನೀಕರಣ ಮತ್ತು ಆಪ್ಟಿಮೈಸೇಶನ್‌ನಲ್ಲಿ ಒಂದು ಪ್ರಮುಖ ಹಂತವನ್ನು ಗುರುತಿಸುತ್ತದೆ.
ಈ ಯೋಜನೆಯು ಭವಿಷ್ಯದಲ್ಲಿ ಸಿದ್ಧವಾಗಿರುವ ರೈಲು ವ್ಯವಸ್ಥೆಗೆ ತಳಹದಿ ಹಾಕಿ ಕೊಡುತ್ತದೆ. ಪ್ರಯಾಣಿಕರಿಗೆ, ಸರಕು-ಸೇವಾ ಪೂರೈಕೆ, ಕೈಗಾರಿಕೆಗಳ ವಿಕಸನಕ್ಕೆ ಅಗತ್ಯತೆ ಪೂರೈಸುತ್ತದೆ.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
2000 ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆಯ ಸೊಬಗು: 1.32 ಲಕ್ಷ ಕುಶಲಕರ್ಮಿಗಳಿಗೆ ಮಾರುಕಟ್ಟೆ ಭಾಗ್ಯ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ












Click it and Unblock the Notifications