ಮದುವೆಗೆ ಹಣ ಕೂಡಿಡುವ ಬದಲು ಶಿಕ್ಷಣ ನೀಡಿದ ಆಟೋ ಚಾಲಕ: ತಂದೆಯ ತ್ಯಾಗಕ್ಕೆ ಮಗಳ ಭಾವುಕ ನಮನ

ತಂದೆ ತಾಯಿಗಳು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾಡುವ ತ್ಯಾಗ ಮತ್ತು ಪಡುವ ಕಷ್ಟಗಳು ಅನೇಕ ಬಾರಿ ಎಲೆಮರೆಯ ಕಾಯಿಯಾಗಿಯೇ ಉಳಿದುಬಿಡುತ್ತವೆ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಟೋ ಚಾಲಕರೊಬ್ಬರ ನಿಸ್ವಾರ್ಥ ಸೇವೆ ಹಾಗೂ ಮಗಳ ಮೇಲಿನ ಅಪಾರ ಪ್ರೀತಿಯನ್ನು ಸಾರುವ ಭಾವುಕ ವಿಡಿಯೋವೊಂದು ನೆಟ್ಟಿಗರ ಮನಸ್ಸನ್ನು ಯಶಸ್ವಿಯಾಗಿ ತಲುಪಿದೆ.

ಕಳೆದ 35 ವರ್ಷಗಳಿಂದ ಆಟೋ ರಿಕ್ಷಾ ಓಡಿಸುತ್ತಾ, ತಮ್ಮ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸ್ವಾವಲಂಬನೆಯ ಪಾಠ ಕಲಿಸಿದ ತಂದೆಗೆ ಮಗಳೊಬ್ಬಳು ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಗೌರವ ಸಲ್ಲಿಸಿದ್ದಾರೆ. 'ಗ್ರೋಯಿಂಗ್ ವಿತ್ ಅರ್ಥಾ' ಎಂಬ ಇನ್‌ಸ್ಟಾಗ್ರಾಮ್ ಹಂಚಿಕೊಳ್ಳಲಾದ ಈ ವಿಡಿಯೋ, ಈಗ ಎಲ್ಲೆಡೆ ವೈರಲ್ ಆಗಿದ್ದು, ಸಾವಿರಾರು ಜನರ ಹೃದಯ ಗೆದ್ದಿದೆ.

Auto Driver

ಮದುವೆಗಿಂತ ಶಿಕ್ಷಣಕ್ಕೆ ಆದ್ಯತೆ ನೀಡಿದ ತಂದೆ

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ಹುಟ್ಟಿದರೆ ಸಾಕು, ಪೋಷಕರು ಅವರ ಮದುವೆಗಾಗಿ ಹಣ ಕೂಡಿಡಲು ಶುರು ಮಾಡುತ್ತಾರೆ. ಆದರೆ ಈ ವಿಡಿಯೋದಲ್ಲಿರುವ ತಂದೆ ಮಾತ್ರ ಅದಕ್ಕೆ ವಿರುದ್ಧವಾಗಿ ಯೋಚಿಸಿದ್ದಾರೆ. "ನನ್ನ ತಂದೆ ಕಳೆದ 35 ವರ್ಷಗಳಿಂದ ಆಟೋ ಓಡಿಸುತ್ತಿದ್ದಾರೆ. ನಾನು ಪ್ರತಿ ಬಾರಿ ಬೆಂಗಳೂರಿಗೆ ಬರುವಾಗಲೂ ಅವರೇ ಆಟೋದಲ್ಲಿ ನನ್ನನ್ನು ಬಸ್ ನಿಲ್ದಾಣಕ್ಕೆ ಬಿಡುತ್ತಾರೆ. ನರ್ಸರಿಯಿಂದ ಹಿಡಿದು ನನ್ನ ಪದವಿಯವರೆಗಿನ ಶಿಕ್ಷಣ ಕೇವಲ ಅವರ ಕಠಿಣ ಪರಿಶ್ರಮದಿಂದಷ್ಟೇ ಸಾಧ್ಯವಾಯಿತು. ನಮ್ಮ ಸುತ್ತಮುತ್ತಲಿನ ಅನೇಕರು ಹೆಣ್ಣುಮಕ್ಕಳ ಮದುವೆಗಾಗಿ ಹಣ ಉಳಿಸುತ್ತಿದ್ದರೆ, ನನ್ನ ತಂದೆ ನಮ್ಮ ಶಿಕ್ಷಣಕ್ಕಾಗಿ ಹಣ ಹೂಡಿಕೆ ಮಾಡಿದರು," ಎಂದು ಮಗಳು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಇದಲ್ಲದೆ, ತಾವು ಹೆಣ್ಣುಮಕ್ಕಳು ಎಂಬ ಕಾರಣಕ್ಕೆ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಕೀಳರಿಮೆ ಬರದಂತೆ ಬೆಳೆಸಿದರು. ಒಬ್ಬಂಟಿಯಾಗಿ ಪ್ರಯಾಣಿಸಲು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಲು ಕಲಿಸಿದರು ಎಂದು ಅವರು ವಿವರಿಸಿದ್ದಾರೆ.

ಉದ್ಯೋಗದ ಪರ ನಿಂತು ಬೆಂಬಲಿಸಿದ ತಂದೆ

ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿದ ನಂತರವೂ ತಂದೆಯ ಬೆಂಬಲ ಇದ್ದೇ ಇತ್ತು. ಕೊರೊನಾ ಸಮಯದಲ್ಲಿ, ತಮ್ಮ ಪೋಷಕರಿಗೆ ನೆರವಾಗುವ ಉದ್ದೇಶದಿಂದ ಈ ಸಹೋದರಿಯರು ಕೃಷಿ ಆರಂಭಿಸಿದ್ದರು. ಅಂದಿನಿಂದ ತಂದೆ ಅದೇ ಕೃಷಿ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮಗಳು ತಾಯಿಯಾದ ಬಳಿಕ, ಮಗುವಿನ ಆರೈಕೆಗಾಗಿ ಕೆಲಸ ಬಿಡುವ ಕಠಿಣ ನಿರ್ಧಾರಕ್ಕೆ ಬಂದಿದ್ದರಂತೆ. ಆದರೆ, "ನೀನು ನಿನ್ನ ಕೆಲಸ ಬಿಡುವುದು ಬೇಡ, ನಿನ್ನ ಮಗುವನ್ನು ಬೆಳೆಸಲು ನಾವು ಬೆಂಬಲ ನೀಡುತ್ತೇವೆ" ಎಂದು ತಂದೆ ಧೈರ್ಯ ತುಂಬಿದರು.

ಅಷ್ಟೇ ಅಲ್ಲದೆ, ಪ್ರತಿ ವಾರ ತಾಯಿಯನ್ನು ಬೆಂಗಳೂರಿಗೆ ಕಳುಹಿಸಿ, ಮಗಳು ಕಚೇರಿಗೆ ಹೋಗುವಾಗ ಮಗುವಿನ ಆರೈಕೆ ಮಾಡುವಂತೆ ನೋಡಿಕೊಂಡರು ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ನೆಟ್ಟಿಗರ ಮನಗೆದ್ದ ವೈರಲ್ ವಿಡಿಯೋ

ಇತ್ತ ತಾಯಿ ಮಗಳ ಜೊತೆ ಬೆಂಗಳೂರಿನಲ್ಲಿದ್ದರೆ, ಅತ್ತ ತಂದೆ ಊರಿನಲ್ಲಿ ಒಬ್ಬಂಟಿಯಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಕಿರಾಣಿ ಅಂಗಡಿ ನಡೆಸುವುದು, ಕೃಷಿ ಕೆಲಸ, ಅಡುಗೆ, ಮನೆ ಸ್ವಚ್ಛತೆ, ಹಗಲಿನಲ್ಲಿ ಆಟೋ ಓಡಿಸುವುದು ಮತ್ತು ಸಂಜೆ ಮತ್ತೆ ಅಂಗಡಿ ತೆರೆಯುವುದು ಹೀಗೆ ಎಲ್ಲ ಜವಾಬ್ದಾರಿಗಳನ್ನೂ ತಾವೇ ಹೊತ್ತಿದ್ದಾರೆ.

"ಪೋಷಕರು ನೀಡುವ ಬಹುದೊಡ್ಡ ಉಡುಗೊರೆ ಹಣವಲ್ಲ, ಬದಲಾಗಿ ಮಗುವನ್ನು ಸ್ವತಂತ್ರವಾಗಿ ಬೆಳೆಸುವುದು ಮತ್ತು ಅವರ ಬೆಂಬಲಕ್ಕೆ ಸದಾ ನಿಲ್ಲುವುದು" ಎಂಬ ಭಾವುಕ ಸಾಲುಗಳೊಂದಿಗೆ ಮಗಳು ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ. ಈ ವಿಡಿಯೋ ನೋಡಿದ ಸಾವಿರಾರು ನೆಟ್ಟಿಗರು ಕಮೆಂಟ್ ಮಾಡಿದ್ದು, "ನಿಜವಾದ ಪುರುಷ ಎಂದರೆ ಇವರೇ," "ನಿಮ್ಮ ತಂದೆಯ ತ್ಯಾಗಕ್ಕೆ ಸಲಾಂ," ಎಂದು ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಅನೇಕರು ತಮ್ಮ ಪೋಷಕರ ತ್ಯಾಗವನ್ನು ಸ್ಮರಿಸಿಕೊಂಡು ಭಾವುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+