• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾ.ಕೆ.ಸುಧಾಕರ್ ಮೇಲೆ ಹಲ್ಲೆ, ಕಾಂಗ್ರೆಸ್‌ ಎಂಎಲ್‌ಸಿ ವಿರುದ್ಧ ಎಫ್‌ಐಆರ್

|

ಬೆಂಗಳೂರು, ಆಗಸ್ಟ್ 12 : ಅನರ್ಹಗೊಂಡಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಕೆ. ಸುಧಾಕರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಹಾಗೂ ಅವರ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಕೈ ಮುಖಂಡರ ಬಂಧನದಿಂದ ಬಿಡುಗಡೆ ಆದ ಸುಧಾಕರ್ ಹೇಳಿದ್ದೇನು?

ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಹೋದಾಗ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಸಚಿವರಾಗಿದ್ದ ಕೆ. ಜೆ. ಜಾರ್ಜ್ ಕೊಠಡಿಯಲ್ಲಿ ಅವರನ್ನುಕೂಡಿ ಹಾಕಿದ್ದರು.

ಕೈ ಶಾಸಕರ ಬಂಧನದಲ್ಲಿದ್ದ ಸುಧಾಕರ್‌ ಭೇಟಿಯಾದ ಸಿದ್ದರಾಮಯ್ಯ

ವಕೀಲ ಅಮೃತೇಶ್ ವಿಧಾನಸೌಧ ಪೊಲೀಸರಿಗೆ ಸುಧಾಕರ್ ಮೇಲೆ ಹಲ್ಲೆ ನಡೆದಿದೆ ಎಂದು ದೂರು ನೀಡಿದ್ದರು. ಪೊಲೀಸರು ಸುಧಾಕರ್ ಹೇಳಿಕೆಯನ್ನು ಪಡೆದುಕೊಂಡಿದ್ದು, ಬಳಿಕ ಎಫ್‌ಐಆರ್ ದಾಖಲು ಮಾಡಿದ್ದಾರೆ.

ರಾಜೀನಾಮೆ ನೀಡಿದ ಸುಧಾಕರ್‌ ಗೆ ದಿಗ್ಬಂದನ ಹಾಕಿದ ಕೈ ಮುಖಂಡರು!

ಜುಲೈ 10ರಂದು ಡಾ. ಕೆ. ಸುಧಾಕರ್ ಮೇಲೆ ಹಲ್ಲೆ ನಡೆದಿತ್ತು. ತಕ್ಷಣ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವಿಧಾನಸೌಧಕ್ಕೆ ಆಗಮಿಸಿ ಶಾಸಕರಿಗೆ ರಕ್ಷಣೆ ನೀಡಿದ್ದರು. ವಿಧಾನಸೌಧಕ್ಕೆ ಭದ್ರತೆ ಹೆಚ್ಚಿಸಿದ್ದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಡಾ. ಕೆ. ಸುಧಾಕರ್‌ರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಸ್ಪೀಕರ್ ಆದೇಶವನ್ನು ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

English summary
Vidhana Soudha police registered the FIR against Congress MLC Naseer Ahmed in connection with attack on Dr.K.Sudhakar at Vidhana Soudha. Dr.K.Sudhakar attacked when he come to submit resignation for MLA post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X