ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ : ಎಎಸ್‌ಐಗಳ ಕೈಗೆ ರಿವಾಲ್ವಾರ್!

|
Google Oneindia Kannada News

ಬೆಂಗಳೂರು, ನವೆಂಬರ್ 22 : ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಪದೇ-ಪದೇ ದಾಳಿಗಳು ನಡೆಯುತ್ತಿದೆ. ಇದಕ್ಕಾಗಿ ಗೃಹ ಇಲಾಖೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳ ಕೈಗೂ ಗನ್‌ಗಳನ್ನು ನೀಡುತ್ತಿದೆ.

ಇದುವರೆಗೂ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಮತ್ತು ಅವರಿಗಿಂತ ಮೇಲಿನ ಹಂತದ ಅಧಿಕಾರಿಗಳಿಗೆ ಮಾತ್ರ ರಿವಾಲ್ವಾರ್ ನೀಡಲಾಗಿತ್ತು. ಆದರೆ, ಈಗ ಬೆಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ 500ಕ್ಕೂ ಹೆಚ್ಚು ಎಎಸ್‌ಐಗಳಿಗೆ ರಿವಾಲ್ವಾರ್ ನೀಡಲಾಗುತ್ತದೆ.

ಠಾಣೆಯಲ್ಲೇ ಪಿಎಸ್ಐ ಡ್ಯಾನ್ಸ್ ರಾಜಾ ಡ್ಯಾನ್ಸ್: ಇಲಾಖೆ ತಲೆತಗ್ಗಿಸುವ ಘಟನೆಠಾಣೆಯಲ್ಲೇ ಪಿಎಸ್ಐ ಡ್ಯಾನ್ಸ್ ರಾಜಾ ಡ್ಯಾನ್ಸ್: ಇಲಾಖೆ ತಲೆತಗ್ಗಿಸುವ ಘಟನೆ

ಪ್ರಕರಣಗಳ ತನಿಖೆಯಲ್ಲಿ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳ ಪಾತ್ರ ಮಹತ್ವದ್ದು. ಆರೋಪಿಗಳನ್ನು ಹಿಡಿಯಲು ಹೋದಾಗ ಅವರ ಮೇಲೆ ದಾಳಿಗಳು ನಡೆಯುತ್ತಿವೆ. ಆದ್ದರಿಂದ, ಎಎಸ್‌ಐಗಳ ಕೈಗೆ ಶಸ್ತ್ರ ನೀಡಲಾಗಿದೆ.

ಗಂಗಾಧರ ಚಡಚಣ ಹತ್ಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ?ಗಂಗಾಧರ ಚಡಚಣ ಹತ್ಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ?

ಎಎಸ್‌ಐಗಳಿಗೆ ಈಗಾಗಲೇ ಹಲ್ಲೆ, ಗಲಾಟೆ, ಕಳ್ಳತನ ಮುಂತಾದ ಚಿಕ್ಕ-ಪುಟ್ಟ ಪ್ರಕರಣಗಳ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗ ಅವರ ಕೈಗೆ ಶಸ್ತ್ರವನ್ನು ನೀಡುತ್ತಿದ್ದು, ಅದರ ಬಳಕೆ ಬಗ್ಗೆ ತರಬೇತಿಯನ್ನು ಸಹ ನೀಡಲಾಗುತ್ತಿದೆ.

ವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷ

ಕಾನೂನಿನ ಜ್ಞಾನ ಹೊಂದಿರುತ್ತಾರೆ

ಕಾನೂನಿನ ಜ್ಞಾನ ಹೊಂದಿರುತ್ತಾರೆ

ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ)ಗಳು ಪಿಯುಸಿ ಮತ್ತು ಪದವಿ ವಿದ್ಯಾರ್ಹತೆ ಹೊಂದಿರುತ್ತಾರೆ. ಕಾನೂನು ಮತ್ತು ಐಪಿಸಿ ಸೆಕ್ಷನ್‌ಗಳ ಜ್ಞಾನವನ್ನು ಹೊಂದಿರುತ್ತಾರೆ. ಇಲಾಖೆಯಲ್ಲಿ ಹತ್ತಾರು ವರ್ಷ ಕೆಲಸ ಮಾಡಿ ಪ್ರಕರಣಗಳ ತನಿಖಾ ಹಂತದ ಮಾಹಿತಿ ಪಡೆದಿರುತ್ತಾರೆ. ಕಾನ್ಸ್‌ಟೇಬಲ್ ಹುದ್ದೆಯಿಂದ ಬಡ್ತಿ ಪಡೆದವರು ಪಿಸ್ತೂಲ್ ಬಳಕೆ ಬಗ್ಗೆ ತರಬೇತಿ ಹೊಂದಿರುತ್ತಾರೆ. ಆದ್ದರಿಂದ, ಬಳಕೆ ಬಗ್ಗೆ ಯಾವುದೇ ಆತಂಕ ಇರುವುದಿಲ್ಲ.

ಪೆಟ್ರೋಲಿಂಗ್ ಮಾಡುತ್ತಾರೆ

ಪೆಟ್ರೋಲಿಂಗ್ ಮಾಡುತ್ತಾರೆ

ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳು ಪೆಟ್ರೋಲಿಂಗ್ ಮಾಡುವಾಗ ಬಂದೂಕು ತೆಗೆದುಕೊಂಡು ಹೋಗುವುದು ಕಷ್ಟ. ಇತ್ತೀಚೆಗೆ ಆರೋಪಿಗಳನ್ನು ಬಂಧಿಸುವಾಗ ಪೊಲೀಸರ ಮೇಲೆ ಹಲ್ಲೆ ನಡೆಯುತ್ತಿದೆ. ಆದ್ದರಿಂದ, ಅವರ ಕೈಗೆ ಲಘು ತೂಕದ ರಿವಾಲ್ವಾರ್ ನೀಡಿದರೆ ಆತ್ಮರಕ್ಷಣೆಗೂ ಸಹಾಯಕವಾಗಲಿದೆ ಎಂಬುದು ಪೊಲೀಸ್ ಇಲಾಖೆ ಚಿಂತನೆ.

ಬೆಂಗಳೂರು ನಗರದಲ್ಲಿ ಜಾರಿ

ಬೆಂಗಳೂರು ನಗರದಲ್ಲಿ ಜಾರಿ

ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿನ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳಿಗೆ ಮೊದಲ ಹಂತದಲ್ಲಿ ರಿವಾಲ್ವಾರ್ ನೀಡಲಾಗುತ್ತದೆ. ಈಗಾಗಲೇ 500ಕ್ಕೂ ಹೆಚ್ಚು ಮಂದಿನ ತರಬೇತಿ ಪೂರ್ಣಗೊಳಿಸಿದ್ದು, 45 ಮಂದಿಗೆ ರಿವಾಲ್ವಾರ್ ನೀಡಲಾಗಿದೆ. ತನಿಖೆಗಾಗಿ ಸಾಗುವಾಗ ಮತ್ತು ಬೀಟ್ ಹೋಗುವಾಗ ಕಡ್ಡಾಯವಾಗಿ ಅದನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಲಾಗಿದೆ.

ಎರಡು ಹಂತದಲ್ಲಿ ತರಬೇತಿ

ಎರಡು ಹಂತದಲ್ಲಿ ತರಬೇತಿ

ನಗರ ವ್ಯಾಪ್ತಿಯ ಪೊಲೀಸ್ ಠಾಣೆಯ 500ಕ್ಕೂ ಹೆಚ್ಚು ಎಎಸ್‌ಐಗಳಿಗೆ 2 ಹಂತದಲ್ಲಿ ತರಬೇತಿ ನೀಡಲಾಗಿದೆ. ಮೈಸೂರು ರಸ್ತೆಯ ನಗರ ಸಶಸ್ತ್ರ ಪಡೆಯ ಸಣ್ಣ ಶಸ್ತ್ರಾಸ್ತ್ರ ವಿಭಾಗದ ಅಧಿಕಾರಿಗಳು ತರಬೇತಿ ನೀಡಿದ್ದಾರೆ.
ರಿವಾಲ್ವಾರ್ ಬಳಕೆ, ಗುಂಡುಗಳನ್ನು ತುಂಬುವುದು, ಆಟೋ ಫೈರಿಂಗ್ ಮತ್ತು ಮಾನವ ಚಾಲಿತ ಫೈರಿಂಗ್ ಬಗ್ಗೆ ವಿವರವಾದ ತರಬೇತಿ ಕೊಡಲಾಗಿದೆ.

English summary
Karnataka Home department will issue revolver to the assistant sub inspector (ASI) who will play key role in the investigation. 500 ASI in the Bengaluru commissionerate limits will get revolver soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X